ಆಹಾರೋದ್ಯಮ ಕ್ಷೇತ್ರದ ಸಾಧನೆಗೆ ಶ್ರೀನಿವಾಸರಾವ್ ಅವರಿಗೆ ‘ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಪ್ರಶಸ್ತಿ’.

ಆಹಾರೋದ್ಯಮ ಕ್ಷೇತ್ರದ ಸಾಧನೆಗೆ ಶ್ರೀನಿವಾಸರಾವ್ ಅವರಿಗೆ ‘ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಪ್ರಶಸ್ತಿ’.
0Shares

ಕುಂದಾಪುರ: ಕನ್ನಡಪ್ರಭ ಹಾಗೂ ಎಕ್ಸ್‌ಪ್ರೆಸ್ ಸುವರ್ಣ ನ್ಯೂಸ್ ವತಿಯಿಂದ ಮಲೇಷ್ಯಾದಲ್ಲಿ ನಡೆದ ‘ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಸಮ್ಮಿಟ್–2026’ ಸಮಾರಂಭದಲ್ಲಿ ಆಹಾರೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಶ್ರೀನಿವಾಸರಾವ್ ಅವರಿಗೆ ಪ್ರತಿಷ್ಠಿತ ‘ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಭಾರತದ ಹೈಕಮಿಷನ್‌ನ ರಾಜಕೀಯ ಹಾಗೂ ಮಾಧ್ಯಮ/ಮಾಹಿತಿ ವಿಭಾಗದ ಪ್ರತಿನಿಧಿಗಳು, ಮಲೇಷ್ಯಾದ ಗಣ್ಯರು, ಕನ್ನಡಪ್ರಭ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಶ್ರೀನಿವಾಸರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಆಹಾರೋದ್ಯಮ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಅಮೂಲ್ಯ ಸೇವೆ, ನಿರಂತರ ಪರಿಶ್ರಮ, ಗಮನಾರ್ಹ ಸಾಧನೆ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ನೀಡುತ್ತಿರುವ ಕೊಡುಗೆಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶ್ರೀನಿವಾಸರಾವ್ ಅವರಿಗೆ ದೊರೆತಿರುವ ಈ ಗೌರವವು ಅವರ ಸಾಧನೆಗೆ ಮತ್ತೊಂದು ಮಹತ್ವದ ಗರಿಯಾಗಿದ್ದು, ಆಹಾರೋದ್ಯಮ ಕ್ಷೇತ್ರದಲ್ಲಿ ಅವರ ಸೇವೆ ಹಾಗೂ ಸಾಧನೆಗೆ ಸಂದ ವಿಶೇಷ ಮನ್ನಣೆಯಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now