ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ..

ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ..
0Shares

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ-75ರ ನೆಲ್ಯಾಡಿಯಲ್ಲಿ ಲಾರಿಯೊಂದು ಮತ್ತೊಂದು ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್‌ ಟ್ಯಾಂಕರ್‌ಗೆ ತಾಗಿ ಪಲ್ಟಿಯಾದ ಘಟನೆ ಸೆ.20ರ ಮುಂಜಾನೆ ನಡೆದಿದೆ.

ಘಟನೆಯಲ್ಲಿ ಮದ್ಯದ ಲೋಡ್ ತುಂಬಿದ್ದ ಲಾರಿ ಸೇರಿದಂತೆ ಮೂರು ವಾಹನಗಳು ಜಖಂಗೊಂಡಿದ್ದು, ಲಾರಿ ಚಾಲಕರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಲಾರಿಯನ್ನು ಶಮೀರ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ, ನೆಲ್ಯಾಡಿಯಲ್ಲಿ ನೆಲಮಂಗಲ ನಿವಾಸಿ ರಾಜ ಎಂ. ಅವರಿಗೆ ಸೇರಿದ ಮದ್ಯದ ಲೋಡ್ ತುಂಬಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಮದ್ಯದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್‌ ಟ್ಯಾಂಕರ್‌ಗೆ ತಾಗಿ ಪಲ್ಟಿಯಾಗಿದೆ.

ಅಪಘಾತದಿಂದ ಮೂರು ವಾಹನಗಳಿಗೂ ಹಾನಿಯಾಗಿದ್ದು, ಮದ್ಯದ ಲೋಡ್‌ಗೂ ಹಾನಿಯಾಗಿದೆ. ಸ್ಥಳಕ್ಕೆ ನೆಲ್ಯಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಲಾರಿ ಮಾಲಕ ರಾಜ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now