ಮಣಿಪಾಲದಲ್ಲಿ ಬೃಹತ್‌ ಮಾದಕ ವಸ್ತು ಜಾಲ ಭೇದಿಸಿದ ಪೊಲೀಸರು: 30 ಗ್ರಾಂ MDMA, ಕಾರು ಜಪ್ತಿ, ಇಬ್ಬರು ಬಂಧನ

ಮಣಿಪಾಲದಲ್ಲಿ ಬೃಹತ್‌ ಮಾದಕ ವಸ್ತು ಜಾಲ ಭೇದಿಸಿದ ಪೊಲೀಸರು: 30 ಗ್ರಾಂ MDMA, ಕಾರು ಜಪ್ತಿ, ಇಬ್ಬರು ಬಂಧನ
0Shares

ದಿನಾಂಕ: 16/09/2026 ರಂದು 19:00 ಗಂಟೆ ಸಮಯಕ್ಕೆ ಮಣಿಪಾಲ ಠಾಣಾ ಪಿ.ಐ ಮಹೇಶ್‌ ಪ್ರಸಾದ್‌ ಇವರಿಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿ ಬ್ರಿಡ್ಜ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ KA19-MK-2021 ನೇ ನಂಬ್ರದ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ MDMA ಮಾದಕ ವಸ್ತುಗಳನ್ನು ಇಟ್ಟುಕೊಂಡು ಬೆಂಗಳೂರಿನಿಂದ ತಂದು ಉಡುಪಿ, ಪೆರಂಪಳ್ಳಿ, ಮಣಿಪಾಲ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರು ಮಾಹಿತಿ ನೀಡಿದ್ದು ಸದ್ರಿ ಸ್ಥಳಕ್ಕೆ ದಾಳಿ ನಡೆಸಲು ಮಾನ್ಯ ಪೊಲೀಸ್‌ ಅಧೀಕ್ಷಕರು ಉಡುಪಿ ಜಿಲ್ಲೆ ಇವರಿಂದ ಅಧಿಕಾರ ಪತ್ರ ಪಡೆದುಕೊಂಡು ದಿನಾಂಕ: 17/09/2026 ರಂದು 00:10 ಗಂಟೆಗೆ ಅಂಬಾಗಿಲು ಕಡೆಯಿಂದ ಬಂದ ಬಾತ್ಮೀದಾರರು ತಿಳಿಸಿದ KA19-MK-2021 ನೇ ನಂಬ್ರದ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರನ್ನು ತಡೆದು ನಿಲ್ಲಿಸಿ ಆರೋಪಿತರುಗಳಾದ ಅಕ್ಬರ್ ಮಹಮ್ಮದ್ ಬ್ಯಾರಿ ಪ್ರಾಯ: 44 ವರ್ಷ ವಾಸ: KT4-357, ಪಳ್ಳಿಗುಡ್ಡೆ, ಕೋಟೆ, ಕಟಪಾಡಿ ಅಂಚೆ ಉದ್ಯಾವರ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಹಾಗೂ ಸೈಯದ್ ಸುಹೇಲ್ ಪ್ರಾಯ: 26 ವರ್ಷ ವಾಸ: ವಾಟರ್ ಟ್ಯಾಂಕ್ ಬಳಿ, ವಿನಾಯಕ ನಗರ ರಸ್ತೆ, ಎಮ್, ಎಸ್ ಪಾಳ್ಯ, ಬೆಂಗಳೂರು ಇವರುಗಳನ್ನು ದಸ್ತಗಿರಿ ಮಾಡಿ ಆರೋಪಿತರ ಕಾರಿನಲ್ಲಿ ಇದ್ದ ಸುಮಾರು 100000/- ರೂ ಮೌಲ್ಯದ ಒಟ್ಟು 30 ಗ್ರಾಂ ತೂಕದ MDMA ಮಾದಕ ವಸ್ತು ಹಾಗೂ 40000/- ರೂ ಮೌಲ್ಯದ 04 ಮೊಬೈಲ್ ಗಳನ್ನು, 5000 ರೂ ಮೌಲ್ಯದ 01 ಡೊಂಗಲ್ ನ್ನು ಮತ್ತು 9500/- ನಗದು ಹಣವನ್ನು ಹಾಗೂ ಆರೋಪಿತರುಗಳು ತಕ್ಷೀರಿಗೆ ಉಪಯೋಗಿಸಿದ 300000/- ರೂ ಮೌಲ್ಯದ KA19-MK-2021 ನೇ ನಂಬ್ರದ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದ, ಆರೋಪಿತರುಗಳ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅ,ಕ್ರ: 155-2026 ಕಲಂ: 8(ಸಿ), 22(ಸಿ) NDPS Act ಪ್ರಕರಣ ದಾಖಲಿಸಿ ಕೊಡಲಾಗಿದೆ

ಬೆಳ್ಳಿಯಪ್ಪ, ಪೊಲೀಸ್‌ ಉಪಾಧೀಕ್ಷಕರು, ಉಡುಪಿ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಮಹೇಶ್‌ ಪ್ರಸಾದ ರವರ ನೇತ್ರತ್ವದಲ್ಲಿ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್‌, ಪ್ರವೀಣ್‌ ಶೆಟ್ಟಿಗಾರ್‌, ರಾಜೇಶ್‌ ಹೆರ್ಗ, ವಿಶ್ವಜಿತ್‌, ಸುಕುಮಾರ್‌ ಶೆಟ್ಟಿ, ಶ್ರೀಮತಿ ವಿದ್ಯಾ ನಾಯಕ್‌, ದೀಕ್ಷಿತ್‌, ಉಮೇಶ್‌ , ಲಕ್ಷ್ಮೀಶ ಹಾಗೂ ಸಲೀಂ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪಿ.ಎಸ್.‌ಐ ತಿಮ್ಮೇಶ್‌ ಬಿ,ಎನ್‌ ರವರು ತನಿಖೆ ಕೈಗೊಂಡು ಆರೋಪಿತರುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now