ಮಣಿಪಾಲ WGSHA ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಬ್ಲ್ಯಾಕ್‌ಮೇಲ್ ಆರೋಪದಡಿ 21 ವರ್ಷದ ಯುವಕನ ಬಂಧನ

ಮಣಿಪಾಲ WGSHA ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಬ್ಲ್ಯಾಕ್‌ಮೇಲ್ ಆರೋಪದಡಿ 21 ವರ್ಷದ ಯುವಕನ ಬಂಧನ
0Shares

ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂಬ್ರ: 23/2026 ರಂತೆ ಶ್ರೀ ಲೆಸ್ಲಿ ಜೋಸೆಫ್‌ ಮ್ಯಾಥ್ಯೂ (60) ತಂದೆ: ಎನ್‌ ಎಂ ಜೋಸೆಫ್ ವಾಸ:, ಲೋಯೊಲಾ ಇಂಗ್ಲೀಷ್‌ ನೀಡಿಯಂ ಹೈಸ್ಕೂಲ್‌ ಬಳಿ, ನಾಗಾಂವ್‌, ಅಸ್ಸಾಂ ರಾಜ್ಯ ಎಂಬವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಮಗಳು ಪೌಲಾ ಲೆಸ್ಲಿ ವಾರ್ಜ್ರಿ ರವರು ಮಣಿಪಾಲದ WGSHA ಕಾಲೇಜಿನಲ್ಲಿ 2 ನೇ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದವರು ದಿನಾಂಕ: 07/11/2025 ರಂದು ರಾತ್ರಿ 11.45 ಗಂಟೆಯಿಂದ ದಿನಾಂಕ:08/11/2025 ರಂದು ಬೆಳಿಗ್ಗೆ 8.40 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸ್ತವ್ಯವಿದ್ದ ಮಣಿಪಾಲದ ಕಾಯಿನ್‌ ಸರ್ಕಲ್‌ ಬಳಿ ಇರುವ ಐರಿಸ್‌ ಪ್ಲಾಜಾ ಬಿಲ್ಡಿಂಗ್‌ ನ ರೂಂ ನಂ. 504 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮಣಿಪಾಲ ಠಾಣಾ ಯುಡಿಆರ್‌ ನಂ.45/2025 ಕಲಂ: 194 ಬಿ ಎನ್‌ ಎಸ್‌ ಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣದಲ್ಲಿ ಅಂತಿಮ ವರದಿ ತಯಾರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದು, ನಂತರ ಸ್ವಾಧೀನ ಪಡಿಸಿದ ಮೃತೆಯ ಆಪಲ್‌ ಐಪ್ಯಾಡ್‌, ಐಪೋನ್‌, ಡೈರಿ, ಮೊಬೈಲ್‌ ಪೋನ್‌ ಡಿಜಿಟಲ್‌ ದಾಖಲೆಗಳನ್ನು ಪಿರ್ಯಾದಿದಾರರ ವಶಕ್ಕೆ ನೀಡಲಾಗಿತ್ತು. ಪಿರ್ಯಾದಿದಾರರು ಮೃತೆ ಪೌಲಾ ಲೆಸ್ಲಿ ವಾರ್ಜ್ರಿ ರವರ ಐಪೋನ್‌, ಐಪ್ಯಾಡ್‌, ಡೈರಿಗಳನ್ನು ಪರಿಶೀಲಿಸಿದಾಗ ಸಾಯಿ ಭಿಂಗೇರೆ @ ಸಾಯಿ ಪಾಟೀಲ್‌ ಎಂಬಾತನು ಸ್ನ್ಯಾಪ್‌ ಚಾಟ್‌ ಮೂಲಕ ವಿನಿಮಯ ಮಾಡಿಕೊಂಡ ದಾಖಲೆಗಳು ಸಿಕ್ಕಿರುತ್ತದೆ. ಮೃತರನ್ನು ಆರೋಪಿಗಳಾದ ಸಾಯಿ ಭಿಂಗೇರೆ @ ಸಾಯಿ ಪಾಟೀಲ್‌ ಎಂಬಾತನು ಆತ್ಮಹತ್ಯೆಗೆ ನಿರಂತರ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್‌ ಮೇಲ್‌ ಮಾಡಿರುವ ಸಾದ್ಯತೆ ಇರುವುದರಿಂದ ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೊಂಡಿದ್ದು ಈ ಬಗ್ಗೆ ಮಣಿಪಾಲ 90/2026 ಕಲಂ: 308(5) BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಣಿಪಾಲ ಠಾಣಾ ಪೊಲೀಸ್‌ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌ ರವರ ಸೂಚನೆಯಂತೆ ಮಣಿಪಾಲ ಠಾಣಾ ಪಿ.ಎಸ್.ಐ ತಿಮ್ಮೇಶ್‌ ಬಿ.ಎನ್‌ ರವರು ಈ ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿ ಸಾಯಿ ಸಂಜಯ್‌ ಬಿಂಗಾರೆ ಪ್ರಾಯ: 21 ವರ್ಷ, ಅಲೋಕ್‌ ಸಿಟಿ ಸೈಲಿ ದಾದ್ರ ಮತ್ತು ಹವೇಲಿ ನಗರ, ದೀಯು ದಮನ್‌ ಕೇಂದ್ರಾಡಳಿತ ಪ್ರದೇಶ ಈತನನ್ನು ದಿನಾಂಕ: 09/09/2026 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅರೋಪಿಯು ನ್ಯಾಯಾಂಗ ಬಂಧನದಲ್ಲಿರುತ್ತಾನೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now