ಶಾರ್ಜಾದಲ್ಲಿ ಕೇರಳ ಮೂಲದ ಯುವ ವೈದ್ಯೆ ಕುಸಿದು ಬಿದ್ದು ಸಾವು!

ಶಾರ್ಜಾದಲ್ಲಿ ಕೇರಳ ಮೂಲದ ಯುವ ವೈದ್ಯೆ ಕುಸಿದು ಬಿದ್ದು ಸಾವು!
0Shares

ಶಾರ್ಜಾ: ಶಾರ್ಜಾದಲ್ಲಿ ಯುವ ಮಲಯಾಳಿ ವೈದ್ಯೆಯೊಬ್ಬರು ದಿಢೀರ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಮಲಪ್ಪುರಂ ಜಿಲ್ಲೆಯ ವಂಡೂರು ಸಮೀಪದ ಪೂಕುಲಂನ ಇಲ್ಲಿಕ್ಕಾಥೋಡಿಕ ಅಬ್ದುರಹ್ಮಾನ್ ಅವರ ಪುತ್ರಿ ಅಫೀನಾ ರಹೀಮ್ (32) ಎಂದು ಗುರುತಿಸಲಾಗಿದೆ. ಅಲನೆಲ್ಲೂರ್ ಥೈಯಿಲ್ ನಿವಾಸಿ ಯಾಸಿರ್ ಅವರ ಪತ್ನಿಯಾಗಿದ್ದ ಅಫೀನಾ, ಶಾರ್ಜಾದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು.

ದಿಢೀರ್ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಯುವ ವೈದ್ಯೆಯ ಅಕಾಲಿಕ ನಿಧನದ ಸುದ್ದಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಪರಿಚಿತರಲ್ಲಿ ಆಘಾತ ಮೂಡಿಸಿದೆ. ಮೃತದೇಹವನ್ನು ಇಂದು ರಾತ್ರಿ ಸ್ವದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now