
ಗುರುಕುಲ ಪದವಿ ಪೂರ್ವ ಕಾಲೇಜಿಗೆ ಆರುಣ್ಯ – 2026 ರ ಚಾಂಪಿಯನ್ ಪಟ್ಟ
ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ನಡೆದ ಆರುಣ್ಯ 2026ರ ಅಂತರ ಕಾಲೇಜು ಮ್ಯಾನೇಜ್ಮೆಂಟ್ ಫೆಸ್ಟ್ ನಲ್ಲಿ ವಕ್ವಾಡಿಯ ಗುರುಕುಲ ಪದವಿಪೂರ್ವ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಾಂಸ್ಕೃತಿಕ, ಮ್ಯಾನೇಜ್ ಮಮೆಂಟ್, ಕಾಮರ್ಸ್, ಐಟಿ ಮತ್ತು ಕ್ರೀಡಾ ವಲಯಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಾದ ಸ್ಕಿಟ್, ಡ್ಯಾನ್ಸ್, ಸ್ಕ್ವಾಟ್, ಕ್ವಿಜ್, ಪೋಸ್ಟರ್ ಮೇಕಿಂಗ್ ನಲ್ಲಿ ಪ್ರಥಮ ಸ್ಥಾನ ಪಡೆದು, ವೆರೈಟಿ ಶೋ, ಪುಶಪ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಸ್ಕಿಟ್ ನಲ್ಲಿ ಪೌರವ್, ಹೇಮಂತ್, ತನುಶಿ, ತನ್ಮಯಿ, ಪುಶಪ್ ಮತ್ತು ಸ್ಕ್ವಾಟ್ ನಲ್ಲಿ ಅನಿಶ್ ಮತ್ತು ಶ್ರಾವ್ಯ, ಕ್ವಿಜ್ ನಲ್ಲಿ ದರ್ಶನ್ ಮತ್ತು ಕುಶಾಲ್, ಡ್ಯಾನ್ಸ್ ನಲ್ಲಿ ಪ್ರಜನ್ಯ, ಸಿರಿಶಾ, ಅಧಿತಿ ಪಟೇಲ್, ಹಿತೈಷಿ, ತನುಶಿ, ತನ್ಮಯಿ, ಪೋಸ್ಟರ್ ಮೇಕಿಂಗ್ ನಲ್ಲಿ ಆದಿತ್ಯ ಎಸ್ ನಾಯ್ಕ್ ಸುಪ್ರೀತ್, ವೈರಟಿ ಶೋನಲ್ಲಿ ನಿತ್ಯ, ಕೀರ್ತನ, ಸ್ಪಂದನ, ವೈಷ್ಣವಿ, ಸುಮಿತ್, ರೋಹನ್, ಭರತ್, ಆದಿತ್ಯ ನಾಯಕ್, ಪ್ರೀತಮ್ ಎಂ, ಭಾಗವಹಿಸಿ ಪ್ರಶಸ್ತಿ ಗೆದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ನವೀನ್, ನವೀನ್ ಕಿಶೋರ್, ಪ್ರಜ್ವಲ್, ನೀರಜ್, ಸುಶಾಂತ್, ವಿನಿಕಾ, ಶ್ರೀಶಾ ಒಟ್ಟು 30 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಟ್ಟವನ್ನು ಪಡೆದಿರುತ್ತಾರೆ. ಬಾಂಡ್ಯಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಕೆ. ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮಾ ಎಸ್ ಶೆಟ್ಟಿ ಮತ್ತು ಪ್ರಾಂಶುಪಾಲ ಶ್ರೀ ಸಂದೀಪ್ ನಾಯ್ಕ್ ವಿದ್ಯಾರ್ಥಿಗಳನ್ನು, ಮಾರ್ಗದರ್ಶನ ಮಾಡಿದ ಉಪನ್ಯಾಸಕ ವರ್ಗದವರನ್ನು ಅಭಿನಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now