ಸಂತೆಕಟ್ಟೆಯಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ನೂತನ ಶಾಖೆ ಉದ್ಘಾಟನೆ

ಸಂತೆಕಟ್ಟೆಯಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ನೂತನ ಶಾಖೆ ಉದ್ಘಾಟನೆ
0Shares

ಉಡುಪಿ : ಬ್ಯಾಂಕ್ ಆಫ್ ಮಹಾರಾಷ್ಟ್ರದ ನೂತನ ಸಂತೆಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 4ರಂದು ಸಂತೆಕಟ್ಟೆಯ ಎಕ್ತಾ ಹೈಟ್ಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಶಾಖೆಯ ಉದ್ಘಾಟನೆಯನ್ನು ಕೆಮ್ಮಣ್ಣು ಸಂತ ತೆರೇಸಾ ಚರ್ಚ್‌ನ ಧರ್ಮಗುರು ವO. ಫಾ. ಫಿಲಿಪ್ ನೆರಿ ಆರನ್ನ ನೆರವೇರಿಸಿ, ಈ ಪರಿಸರದಲ್ಲಿ ಶಾಖೆಯು ಉತ್ತಮ ಅಭಿವೃದ್ಧಿ ಹೊOದಲಿ ಎಂದು ಹಾರೈಸಿದರು. ಹಿರಿಯ ಚಾರ್ಟೆಡ್ ಅಕೌಂಟೆಂಟ್ ಸಿಎ ದೇವಾನಂದ್ ಎಟಿಎಂ ಉದ್ಘಾಟಿಸಿದರೆ, ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಕುಮಾರ್ ಎ ಸ್ಟ್ರಾಂಗ್ ರೂಮ್ ಉದ್ಘಾಟಿಸಿ ಶುಭ ಹಾರೈಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ಧನ ತೋನ್ಸೆ ದೀಪ ಬೆಳಗಿಸಿ, ಶುಭ ಹಾರೈಸಿದರು.

ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್‌ನ ಸಹಾಯಕ ಧರ್ಮಗುರು ವO. ಫಾ. ರೋಹನ್ ಮಸ್ಕರೆನ್ಹಸ್ ನೂತನ ಶಾಖೆಯ ಆಶೀರ್ವಚನ ನೆರವೇರಿಸಿದರು.

ವೇದಿಕೆಯಲ್ಲಿ ಉದ್ಯಮಿ ಮತ್ತು ಮೌಂಟ್ ರೋಸರಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಬಾಪ್ಟಿಸ್ಟ್ ಡಯಾಸ್, ಸಾಮಾಜಿಕ ಕಾರ್ಯಕರ್ತ ವೆರೋನಿಕ ಕರ್ನೆಲಿಯೋ, ಸ್ಟ್ಯಾನಿ ರೊಡ್ರಿಗಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಹುಬ್ಬಳ್ಳಿ ವಲಯದ ವಲಯ ವ್ಯವಸ್ಥಾಪಕ ಡಾ. ಸಬಿರಾಲಿ ಶೇಖ್ ಪ್ರಾಸ್ತಾವಿಕವಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಬಗ್ಗೆ ತಿಳಿಸಿದರು.

ಬ್ಯಾಂಕ್ ಆಫ್ ಮಹಾರಾಷ್ಟ್ರ ಸಂತೆಕಟ್ಟೆ ಶಾಖಾ ವ್ಯವಸ್ಥಾಪಕ ಅಭಿಷೇಕ್ ಗೌಡ ಜಿ., ಸಿಬ್ಬಂದಿಗಳು ಮತ್ತು ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಶಾಖೆಯ ಆರಂಭದೊಂದಿಗೆ ಸಂತೇಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಗ್ರಾಹಕರಿಗೆ ಬ್ಯಾಂಕಿನ ವಿವಿಧ ಠೇವಣಿ, ಸಾಲ, ಡಿಜಿಟಲ್ ಬ್ಯಾಂಕಿಂಗ್ ಸೇರಿದಂತೆ ಹಲವು ಹಣಕಾಸು ಸೇವೆಗಳು ಇನ್ನಷ್ಟು ಸುಲಭವಾಗಿ ಲಭ್ಯವಾಗಲಿವೆ. ಸ್ಥಳೀಯ ಗ್ರಾಹಕರಿಗೆ ಉತ್ತಮ ಹಾಗೂ ತ್ವರಿತ ಬ್ಯಾಂಕಿಂಗ್ ಸೇವೆ ಒದಗಿಸುವುದು ಶಾಖೆಯ ಪ್ರಮುಖ ಉದ್ದೇಶವಾಗಿದೆ.

ಸ್ಟೀವನ್ ಕುಲಾಸೊ ಉದ್ಯಾವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಈ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now