ನರ್ನಾಡು ಬಬ್ಬುಸ್ವಾಮಿ ದೈವಸ್ಥಾನಕ್ಕೆ ಧರ್ಮಸ್ಥಳದ ಆರ್ಥಿಕ ಸಹಾಯ

ನರ್ನಾಡು ಬಬ್ಬುಸ್ವಾಮಿ ದೈವಸ್ಥಾನಕ್ಕೆ ಧರ್ಮಸ್ಥಳದ ಆರ್ಥಿಕ ಸಹಾಯ
0Shares

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನ ನರ್ನಾಡು, ಉಪ್ಪೂರು ಇದರ ಕಟ್ಟಡ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ರೂ. ಒಂದು ಲಕ್ಷ ಅನುದಾನ ಮಂಜೂರು ಮಾಡಿದ್ದು, ಮಂಜೂರಾತಿ ಡಿ. ಡಿ. ಯನ್ನ ಉಡುಪಿ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ರಾಜು ಪೂಜಾರಿ, ವಲಯ ಅಧ್ಯಕ್ಷರಾದ ಶ್ರೀ ಸುನಿಲ್ ಶೆಟ್ಟಿ ಹಾಗೂ ತಾಲೂಕು ಯೋಜನಾಧಿಕಾರಿಯವರಾದ ಶ್ರೀ ಸುರೇಂದ್ರ ನಾಯ್ಕ್ ರವರು ದೈವಸ್ಥಾನದ ಅಧ್ಯಕ್ಷರಾದ. ಧರಣೇಶ್ ಎಸ್ ಅಮೀನ್ ಸಮಿತಿ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೊಳಲಗಿರಿ ಒಕ್ಕೂಟ ಅಧ್ಯಕ್ಷರಾದ ಶ್ರೀ ಜಯಕರ ಆಚಾರ್ಯ, ಸಮಾಜ ಸೇವಕರಾದ ಶ್ರೀಮತಿ ರೇಖಾ ಮರಾಠೆ ,ದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಗುರಿಕಾರರು, ವಲಯ ಮೇಲ್ವಿಚಾರಕಿ ಶ್ರೀಮತಿ ನಾಗರತ್ನ ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now