
ಮೂಡುಬಿದಿರೆ : ಶುಕ್ರವಾರ ರಾತ್ರಿ ಗಂಟಾಲ್ಕಟ್ಟೆಯಲ್ಲಿ ಟಾಟಾ
ಏಸ್ ವಾಹನವೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಕಲ್ಲಬೆಟ್ಟುವಿನ ಕಾಲೇಜೊಂದರ ಮೆಸ್ ಉದ್ಯೋಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಾನುವಾರ ವರದಿಯಾಗಿದೆ.
ಮೃತ ಯುವಕ ನೂರಾಳಬೆಟ್ಟುವಿನ ಶೇಖರ ಪೂಜಾರಿ ಅವರ ಪುತ್ರ ಸಂದೀಪ್ ಪೂಜಾರಿ (28) ಎಂದು ತಿಳಿದು ಬಂದಿದೆ.
ಬಂದಿದೆ.
ಅವರು ಗಂಟಾಲ್ ಕಟ್ಟೆಯಲ್ಲಿ ತನ್ನ ಬೈಕ್ನಲ್ಲಿ ಸಂಚರಿಸುತ್ತಿದ್ದ ವೇಳೆ ಟಾಟಾ ಎಸ್ ವಾಹನ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಡಿಕ್ಕಿಯ ರಭಸಕ್ಕೆ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now