ಕೋಟದ ಪಂಚವರ್ಣ ಸಂಘಟನೆಯ ರೈತರೆಡೆಗೆ ನಮ್ಮ ನಡಿಗೆ 56ನೇ ಸರಣಿ ಕಾರ್ಯಕ್ರಮ

ಕೋಟದ ಪಂಚವರ್ಣ ಸಂಘಟನೆಯ ರೈತರೆಡೆಗೆ ನಮ್ಮ ನಡಿಗೆ 56ನೇ ಸರಣಿ ಕಾರ್ಯಕ್ರಮ
0Shares

ಕುಂದಾಪುರ: ಎಲ್ಲಾ ಬೆಳೆಗಳಿಗೆ ಬೆಲೆ ಏರಿಕೆ ಆಗುತ್ತದೆ ಆದರೆ ಭತ್ತದ ಬೆಳೆ ಅಥವಾ ಈ ಕರಾವಳಿಯಲ್ಲಿ ಬೆಳೆಯುವ ಶೇಂಗಾ ಬೆಳೆಗೆ ಬೆಲೆ ಇಲ್ಲದಂತೆ ಖರೀದಿ ನಡೆಯುತ್ತದೆ. ರಾತ್ರಿ ಬೆಳಗಾಗುವುದರೊಳಗೆ ಬೆಲೆ ಪಾತಾಳಕ್ಕೆ ಕುಸಿಯಲ್ಪಡುತ್ತದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಭತ್ತದ ಬೆಳೆಗೆ ಈಗಲೇ ಬೆಂಬಲ ಬೆಲೆ ನಿಗದಿಪಡಿಸಿ ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ನ್ಯಾಯ ನೀಡುವ ದರ ನಿಗದಿಪಡಿಸಿ ಎಂದು ಆಗ್ರಹಿಸಿದರು.
ಬುಧವಾರ ಗುಂಡ್ಮಿ ಪ್ರಗತಿಪರ ಕೃಷಿಕ ಶೇಖರ್ ಪೂಜಾರಿ ಇವರ ಮನೆಗಯಂಗಳದಿ ಕೋಟದ ಪಂಚವರ್ಣ ಯುವಕ ಮಂಡಲ ಪವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ಸ್ನೇಹಕೂಟ ಮಣೂರು, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ಸಹಯೋಗದೊಂದಿಗೆ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸಂಯೋಜನೆಯೊಂದಿಗೆ 56ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ಪಂಚವರ್ಣ ಸಂಘಟನೆ ರೈತ ಸಮುದಾಯವನ್ನು ಗುರುತಿಸಿ ಈ ಸಮಾಜದ ಮುಖ್ಯವಾಹಿನಿಯಲ್ಲಿ ಬರುವ ಕಾರ್ಯ ಮಾಡುತ್ತಿದೆ. ಅದರಂತೆ ಸರಕಾರ ಅಥವಾ ಸಂಬಂಧಿಸಿದ ಇಲಾಖೆ ರೈತ ಪರ ಕಾರ್ಯಕ್ರಮ ರೂಪಿಸಬೇಕು. ಅಲ್ಲದೆ ಪ್ರಸ್ತುತ ವಾತಾವರಣ ವೈಪರೀತ್ಯದ ನಡುವೆ ಭತ್ತದ ಬೆಳೆ ಅಂತಿಮ ರೂಪಕ್ಕೆ ಬರುತ್ತಿದೆ ಈ ಹಿನ್ನಲೆಯಲ್ಲಿ ನ್ಯಾಯಯುತ ಬೆಲೆ ನಿಗದಿಪಡಿಸಲು ಸಭೆಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗುಂಡ್ಮಿ ಮಾಣಿಕಟ್ಟು ಶೇಖರ್ ಪೂಜಾರಿ ಇವರನ್ನು ರೈತ ಪರಿಕರ ನೀಡಿ ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಸನ್ಮಾನಿಸಿದರು.
ಪ್ರಾರಂಭದಲ್ಲಿ ಗಿಡ ನೆಟ್ಟು ಗೋ ಪೂಜೆ ನೆರವೆರಿಸಿ ರೈತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಉಪಾಧ್ಯಕ್ಷ ರವೀಂದ್ರ ಕಾಮತ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು..
ಮುಖ್ಯ ಅಭ್ಯಾಗತರಾಗಿ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್, ಮಾಣಿಕಟ್ಟು ನಂದಿಕೇಶ್ವರ ದೇಗುಲದ ಪಾತ್ರಿ ಬಾಬು ಪೂಜಾರಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯರಾದ ಕೇಶವ ಆಚಾರ್ ಸನ್ಮಾನಪತ್ರ ವಾಚಿಸಿ, ಪ್ರಭಾಕರ್ ಮಣೂರು ನಿರೂಪಿಸಿ, ರವೀಂದ್ರ ಕೋಟ ವಂದಿಸಿ, ಸಂಯೋಜಿಸಿದರು. ದಿನೇಶ್ ಆಚಾರ್ ಸಹಕರಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now