ಸರಕಾರಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ನವಜಾತ ಶಿಶು ಆರೈಕೆ ಕಿಟ್

ಸರಕಾರಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ನವಜಾತ ಶಿಶು ಆರೈಕೆ ಕಿಟ್
0Shares

ಸರಕಾರಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ನವಜಾತ ಶಿಶು ಆರೈಕೆ ಕಿಟ್
ಕುಮಟಾ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಕುಮಟಾ ರೋಟರಿ ವತಿಯಿಂದ ನವಜಾತ ಶಿಶು ಆರೈಕೆ ಕಿಟ್ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಕ್ಕಳ ವಿಭಾಗದ ಮುಖ್ಯಸ್ಥ ಶಿಶು ತಜ್ಞ ರೋಟೇರಿಯನ್ ಡಾ. ಪ್ರಸನ್ನ ನಾಯಕ ಅವರು ಕಿಟ್ಗಳನ್ನು ಸ್ವೀಕರಿಸಿ, ಅರ್ಹ 10 ತಾಯಂದಿರನ್ನು ಗುರುತಿಸಿ ವಿತರಣೆಗೆ ನೆರವಾದರು.


ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಅಧ್ಯಕ್ಷ ಸಿಎ ವಿನಾಯಕ ಹೆಗಡೆ, ಆರೋಗ್ಯ ಸೇವೆಗೆ ರೋಟರಿ ಸದಾ ಆದ್ಯತೆ ನೀಡುತ್ತಿದ್ದು, ಕುಮಟಾ ರೋಟರಿಯಿಂದ ಸರಕಾರಿ ಆಸ್ಪತ್ರೆಗೆ ಈಗಾಗಲೇ ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು. ಸುವರ್ಣ ಸಂಭ್ರಮದಲ್ಲಿರುವ ಕುಮಟಾ ರೋಟರಿಯ ವರ್ಷಾಚರಣೆಯು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಸಾಮಾಜಿಕ ಬದ್ಧತೆ ಮತ್ತು ಜನಸೇವೆಯ ಸಂಕಲ್ಪದೊಂದಿಗೆ ಸಾಗುತ್ತಿದೆ ಎಂದು ಅವರು ಹೇಳಿದರು.
ರೋಟರಿ ಕಾರ್ಯದರ್ಶಿ ಗುರುರಾಜ ಶೆಟ್ಟಿ, ಕೋಶಾಧ್ಯಕ್ಷ ಅಡ್ವೊ. ಗಣೇಶ ನಾಯ್ಕ, ಏನ್ಸ್ ಕ್ಲಬ್ ಅಧ್ಯಕ್ಷೆ ಸಂಧ್ಯಾ ಹೆಗಡೆ, ಸೀನಿಯರ್ ರೋಟೇರಿಯನ್ ಎನ್. ಆರ್. ಗಜು ಸೇರಿದಂತೆ ಎ.ಜೆ. ಆಸ್ಪತ್ರೆಯ ವೈದ್ಯ ಡಾ. ಅರ್ಶದ್ ಉಪಸ್ಥಿತರಿದ್ದು, ಕಿಟ್ ಹಸ್ತಾಂತರ ಕಾರ್ಯಕ್ರಮಕ್ಕೆ ಸಹಕರಿಸಿದರು.
ನವಜಾತ ಶಿಶುಗಳ ಆರೈಕೆಗೆ ಅಗತ್ಯವಾದ ಪರಿಕರಗಳನ್ನು ಒಳಗೊಂಡ ಕಿಟ್ಗಳನ್ನು ಪಡೆದ ತಾಯಂದಿರು ಸಂತಸ ವ್ಯಕ್ತಪಡಿಸಿ, ರೋಟರಿಯ ಜನಪರ ಸೇವೆಗೆ ಕೃತಜ್ಞತೆ ಸಲ್ಲಿಸಿದರು..

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now