ಶಿರ್ವ MSRS ಕಾಲೇಜಿನಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ ಅಭಿಯಾನ

ಶಿರ್ವ MSRS ಕಾಲೇಜಿನಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ ಅಭಿಯಾನ
0Shares

ಶಿರ್ವ: ಆಗಸ್ಟ್ ,ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಬರವಸೆ ಕೋಶ ಮತ್ತು ಮಾದಕ ದ್ರವ್ಯ ವ್ಯಸನ ಜಾಗೃತಿ ವೇದಿಕೆ ಆಶ್ರಯದಲ್ಲಿ ಮಾದಕ -ಬಾದಕ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನೆರವೇರಿತು.
ಸಂಪನ್ಮೂಲ ವ್ಯಕ್ತಿಯಾಗಿ ಶಿರ್ವ ಠಾಣೆಯ ಏ ಎಸ್ ಐ ಕೆ. ಜೆ ಶ್ರೀಧರ್ ಮಾತನಾಡಿ ಮಾದಕ ವ್ಯಸನವು ದೇಶದ ಒಂದು ಪಿಡುಕು ಇದಕ್ಕೆ ಹೆಚ್ಚಾಗಿ ವಿದ್ಯಾರ್ಥಿಗಳು ಬಲಿಯಾಗುತ್ತಾರೆ, ಆದುದರಿಂದ ಈ ಮೂಲಕ ಜಾಗೃತಿ ಮೂಡಿಸುವುದು ಮತ್ತು ಮಾದಕ ದ್ರವ್ಯ ವ್ಯಸನ ನಿರ್ಮೂಲನೆ ಗೊಳಿಸಲು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಶಿರ್ವ ಆರಕ್ಷಕ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ ಮಾತನಾಡಿ ಮಾದಕ ದ್ರವ್ಯ ಅಂದ್ರೆ ಮೆದುಳು ಮತ್ತು ದೇಹದ ಮೇಲೆ ಪರಿಣಾಮ ಬೀರುವ ವಸ್ತುಗಳು. ಇವುಗಳ ದುರುಪಯೋಗ ಆರೋಗ್ಯ, ಕುಟುಂಬ, ಕೆಲಸ ಮತ್ತು ಕಾನೂನಿನ ಮೇಲೆ ದೊಡ್ಡ ಪರಿಣಾಮ ಬೀರಬಹುದು.
ಒಂದು ಬಾರಿ ಪ್ರಯೋಗ ಮಾಡುವುದು ಕೂಡ ಅಡಿಕ್ಷನ್ ಗೆ ದಾರಿ ಮಾಡಬಹುದು. “ಇಲ್ಲ” ಅಂತ ಹೇಳುವುದು ಧೈರ್ಯ ಎಲ್ಲರೂ ಮಾಡಬೇಕು
ಎಂದು ಕರೆಕೊಟ್ಟರು

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿಥುನ್ ಚಕ್ರವರ್ತಿ ಸಂಯೋಜಕರಾದ ಡಾ. ಸೋನಾ ಎಚ್ ಸಿ, ಮಾದಕ ವ್ಯಸನ ಜಾಗೃತಿ ವೇದಿಕೆಯ ಸಂಯೋಜಕರಾದ ಸುಹಾಸ್ ಜೆ.ಜೆ ಉಪಸಿತರಿದ್ದರು. ವಿದ್ಯಾರ್ಥಿನಿ ಕೀರ್ತನ ಕಾರ್ಯಕ್ರಮವನ್ನು ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now