
ಉಡುಪಿ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಸೇವಾ ಸಂಸ್ಥೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಉದ್ಯಾವರ ಇದರ ಮಾಜಿ ಅಧ್ಯಕ್ಷ ರಫೀಕ್ ಯೂಸುಫ್ (70) ಇಂದು ಹೃದಯಘಾತದಿಂದ ನಿಧನರಾದರು.
ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು ಉದ್ಯಾವರ ಬೈಲ್ ಜಿಡ್ಡ ನಿವಾಸಿಯಾಗಿದ್ದು, ಹಲವಾರು ಸೇವಾ ಸಂಸ್ಥೆಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಠಿತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಉದ್ಯಾವರ ಇದರ ಸ್ಥಾಪಕ ಸದಸ್ಯರಾಗಿದ್ದ ಇವರು, ಹಲವು ಪ್ರಮುಖ ಹುದ್ದೆಗಳ ಬಳಿಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಉದ್ಯಾವರ ಮೋಹಿದ್ದಿನ್ ಜುಮ್ಮಾ ಮಸೀದಿ ಇದರ ಮಾಜಿ ಅಧ್ಯಕ್ಷರಾಗಿಯೂ ಮುಸ್ಲಿಂ ಯಂಗ್ ಮ್ಯಾನ್ಸ್ ಅಸೋಸಿಯೇಷನ್ (MYA) ಇದರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇವರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಮತ್ತು ಅಪಾರ ಬಂಧು ಬಳಗದವರು ಆಗಲಿದ್ದಾರೆ. ಇವರ ನಿಧನಕ್ಕೆ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ರಂಗಕರ್ಮಿ ನಾಗೇಶ್ ಕುಮಾರ್ ಉದ್ಯಾವರ, ಅಧ್ಯಕ್ಷ ಗಿರೀಶ್ ಕುಮಾರ್, ಪ್ರಮುಖರಾದ ಗಿರೀಶ್ ಕುಮಾರ್, ರೋಯ್ಸ್ ಫೆರ್ನಾಂಡಿಸ್, ಸದಾಶಿವ ಅಮೀನ್ ಕಟ್ಟೆಗುಡ್ಡೆ, ಕಿರಣ್ ಕುಮಾರ್, ರಿಯಾಜ್ ಪಳ್ಳಿ, ನಿತಿನ್ ಸಾಲ್ಯಾನ್, ಶರತ್ ಕುಮಾರ್, ಅನೂಪ್ ಕುಮಾರ್, ಸೋಮನಾಥ್ ಸುರತ್ಕಲ್, ಮಸೀದಿಯ ಪ್ರಮುಖರಾದ ಅಬ್ದುಲ್ ಸತ್ತಾರ್, ಅಬ್ದುಲ್ ಸಲಾo ಮತ್ತಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now