
2018 ರ ಆಗಸ್ಟ್ 12 ರಂದು ದುಬೈನಲ್ಲಿರುವ ಅವಿಭಾಜಿತ ಜಿಲ್ಲೆಯ ಕಲಾವಿದರ ಕೊಂಕಣಿ ನಾಟಕದ ಮೂಲಕ ಅಸ್ತಿತ್ವಕ್ಕೆ ಬಂದಂತ “ನಿರಂತರ್ ಉದ್ಯಾವರ” ಒಂದು ರಂಗ ಸಂಘಟನೆಯ ತಂಡ. ಕಳೆದ ಎಂಟು ವರ್ಷಗಳಲ್ಲಿ ಕಲೆ, ಸಾಹಿತ್ಯ, ನಾಟಕ, ಸಿನಿಮಾ, ಸಂಗೀತಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕಳೆದ ಏಳು ವರ್ಷಗಳಲ್ಲಿ ಬಹುಭಾಷಾ ನಾಟಕೋತ್ಸವ, ಕವಿಗೋಷ್ಠಿ, ಸಿನಿಮಾಗಳ ಮೂಲಕ ಮುನ್ನಡಿ ಇಟ್ಟಂತಹ ಈ ಸಂಸ್ಥೆ, ಕಳೆದ ವರ್ಷ ಮತ್ತೊಂದು ಹೆಜ್ಜೆಯನ್ನು ಮುಂದೆ ಇಟ್ಟು, ಬಹುಭಾಷಾ ಸಿನಿಮಾ ಉತ್ಸವಕ್ಕೆ ಚಾಲನೆ ನೀಡಿದ್ದು. ನಿರೀಕ್ಷೆಗೂ ಮೀರಿದ ಪ್ರೇಕ್ಷಕರ ಬೆಂಬಲದೊಂದಿಗೆ ಈ ವರ್ಷ ಮತ್ತೆ ಮೂರು ದಿನದ ಬಹುಭಾಷಾ ಸಿನಿಮಾ ಉತ್ಸವಕ್ಕೆ ಕ್ಷಣಗಳನ್ನು ಆರಂಭಗೊಂಡಿದೆ.
ಕಳೆದ ವರ್ಷ ನಾವು ನಡೆಸಿದ ಸಾಹಸಕ್ಕೆ “ಪ್ರೇಕ್ಷಕ ದೇವರು” ನೀಡಿದ ಸಹಕಾರಕ್ಕೆ, ಈ ವರ್ಷ ಮತ್ತೆ ಮೂರು ಬಹುಭಾಷಾ ಕ್ಲಾಸಿಕ್ ಸಿನಿಮಗಳೊಂದಿಗೆ ಮತ್ತೆ ಬರುತ್ತಿದ್ದೇವೆ. ಪ್ರೇಕ್ಷಕರಿಗೆ ವಿಶಾಲ ಪರದೆಯಲ್ಲಿ, ಉಚಿತ ಪ್ರವೇಶದೊಂದಿಗೆ ಕಲಾಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶ ಇರುವಂತಹ ಸಾಮಾಜಿಕ ಕಳಕಳಿಯ ಈ ನಿರಂತರ್ ಬಹುಭಾಷಾ ಸಿನಿಮಾ ಉತ್ಸವವು ಇದೇ ಜುಲೈ 31, ಆಗಸ್ಟ್ 1ಮತ್ತು 2 ರಂದು ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವಟಾರದಲ್ಲಿರುವ ಕ್ಸೇವಿಯರ್ ಸಭಾಭವನದಲ್ಲಿ ಸಂಜೆ 6:30ಕ್ಕೆ ಸರಿಯಾಗಿ ಜರುಗಲಿದೆ.
ಜುಲೈ 31ರಂದು ಶುಕ್ರವಾರ ಸೂತನ್ ಗೌಡ ರಚನೆ ಮತ್ತು ನಿರ್ದೇಶನದ ಕನ್ನಡ ಸಿನಿಮಾ ವಲವಾರ, ಅಗಸ್ಟ್ 1 ಶನಿವಾರ ಅನೀಶ್ ಪೂಜಾರಿ ವೇಣೂರು ರಚನೆ ಮತ್ತು ನಿರ್ದೇಶನದ ತುಳು ಸಿನಿಮಾ ದಸ್ಕತ್ ಮತ್ತು ಅಗಸ್ಟ್ 2 ರವಿವಾರ ಸ್ಟ್ಯಾನಿ ಬೆಳಾ ರಚನೆ ಮತ್ತು ನಿರ್ದೇಶನದ ಕೊಂಕಣಿ ಸಿನಿಮಾ ಬಾಪಾಚೆ ಪುತಾಚೆ ನಾoವಿo ಪ್ರದರ್ಶನವಾಗಲಿದೆ.
ಪ್ರೀತಿಯ ಕಲಾಭಿಮಾನಿಗಳೇ, ನೀವೇ ನಮ್ಮ ಸಂಘಟನೆಯ ಶಕ್ತಿ ಮತ್ತು ದೇವರು.. ಕಲೆ, ಸಾಹಿತ್ಯ, ನಾಟಕ, ಸಿನಿಮಾ, ಸಂಗೀತಕ್ಕೆ ನಮ್ಮದೊಂದು ಚಿಕ್ಕ ಸಹಕಾರ.. ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರ ಮಾರ್ಗದರ್ಶನ ಪ್ರೀತಿ ಪ್ರೋತ್ಸಾಹ ಎಲ್ಲವೂ ಇರಲಿ..
ಈ ವರ್ಷದ ಮಳೆಗಾಲದ ಅನುಭವವನ್ನು ನಿರಂತರ್ ಬಹುಭಾಷಾ ಕ್ಲಾಸಿಕ್ ಸಿನಿಮಾಗಳೊಂದಿಗೆ ಆನಂದಿಸೋಣ..
✍️ಸ್ಟೀವನ್ ಕುಲಾಸೊ
ಸ್ಥಾಪಕಾಧ್ಯಕ್ಷರು, ನಿರಂತರ್ ಉದ್ಯಾವರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now