
ಶಿರ್ವ: ಜುಲೈ 26 ರಂದು ಶಿರ್ವ ಡಾನ್ ಬಾಸ್ಕೋ ಶಾಲೆಯ ಹೊರಾಂಗಣ ಸಭಾಂಗಣದಲ್ಲಿ ಬೆಂಕಿರಹಿತ ಅಡುಗೆ ಕಾರ್ಯಕ್ರಮ ನಡೆಯಿತು. ಶಿರ್ವ ಚರ್ಚಿನ ಐ ಸಿ ವೈ ಎಂ ಘಟಕ ಆಯೋಜಿಸಿದ ಸ್ವಾದಚೊ ಸಂಗ್ರಾಮ್ ಕಾರ್ಯಕ್ರಮದಲ್ಲಿ ಶಿರ್ವ ಚರ್ಚಿನ 12 ವಾಳೆಯ ಸದಸ್ಯರು ಭಾಗವಹಿಸಿ ಅತಿ ಉತ್ತಮವಾದ ಬೆಂಕಿ ರಹಿತ ಖಾದ್ಯಗಳನ್ನು ಹಾಗೂ ಜ್ಯೂಸ್ ಗಳನ್ನು ತಯಾರಿಸಿ ಫಲಪುಷ್ಪಗಳ ಅಲಂಕಾರದೊಂದಿಗೆ ಪ್ರದರ್ಶಿಸಲಾಯಿತು. ಮೊದಲ ಬಹುಮಾನ ರೂ. 5,555 ಕಾನ್ವೆಂಟ್ ವಾಳೆ, ದ್ವಿತೀಯ ಬಹುಮಾನ ರೂ. 4,444 ಹಳೆ ಇಗರ್ಜಿ ವಾಳೆ, ತೃತೀಯ ಬಹುಮಾನ ಕುಡ್ತಾ ಮಜಲ್ ರೂ.3,333 ಪಡಕೊಂಡರು. ಈ ಸ್ಪರ್ಧೆಯ ತೀರ್ಪುಗಾರರಾಗಿ ಮಣಿಪಾಲ ಕೆಫೆ ಸ್ಟೋರ್ ನ ಮಾಲಕರಾದ ಜಾಸ್ವಿಲ್ ಲುವಿಸ್ (BHM WGSHS) ಹಾಗೂ ಅನೂಸ್ ಕೇಕ್ ಪ್ರವರ್ತಕರಾದ ಅನಿತಾ ಆಳ್ವ ರವರು ಸಹಕರಿಸಿದರು.

ಆರೋಗ್ಯ ಮಾತ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವಂದನೀಯú ಚಾರ್ಲ್ಸ್ ಮಿನೇಜಸ್ ಮಾತನಾಡಿ ಈ ಸ್ಪರ್ಧೆಯು ಒಂದು ಸಂಘಟನೆಯ ಪ್ರತೀಕ ಎಲ್ಲರನ್ನು ಒಗ್ಗೂಡಿಸಲು, ಸಹಬಾಳ್ವೆಂದಿರಲು ಹಾಗೂ ಎಲ್ಲರೂ ಒಂದೇ ಕುಟುಂಬದ ಸದಸ್ಯರಾಗಿ ಒಟ್ಟಾಗಿ ಬಾಳೋಣ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲರಾದ ಫಾ. ರಾಲ್ವಿನ್ ಅರನ್ನ, ಸಹಾಯಕ ಧರ್ಮ ಗುರುಗಳಾದ ಫಾ. ಅನಿಲ್ ರೋಡ್ರಿಗಸ್, ಶಿರ್ವ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೂಲಿಯನ್ ರೋಡ್ರಿಗಸ್, ಆಯೋಗದ ಸಂಚಾಲಕಿಯಾದ ಶಾಲಿನಿ ಕೋರ್ಡ, ಐ ಸಿ ವೈ ಎಂ ಘಟಕದ ಸಚೇತಕರಾದ ಡಾ. ಗ್ರೈನಲ್ ಡೆಮೆಲ್ಲೊ, ಪುಷ್ಪ ಫರ್ನಾಂಡಿಸ್ ಉಪಸ್ಥಿತರಿದ್ದರು. ಅಧ್ಯಕ್ಷೆ ಹ್ಯಾಲಿ ಕಬ್ರಾಲ್ ಎಲ್ಲರನ್ನೂ ಸ್ವಾಗತಿಸಿ ವಿನ್ಸೆಂಟ್ ಫರ್ನಾಂಡಿಸ್ ಧನ್ಯವಾದ ಸಮರ್ಪಿಸಿ, ಅನಿಷಾ ಲೋಬೊ ಕಾರ್ಯಕ್ರಮ ನಿರೂಪಸಿದರು.



ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now