
ಹಳಿಯಾಳ: ತಾಲೂಕಿನ ಮುಂಡವಾಡ ಗ್ರಾಮದಿಂದ ಶಿವಪುರಕ್ಕೆ ಕೃಷಿ ಕೆಲಸಕ್ಕಾಗಿ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಟಾಟಾ ಏಸ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಹಲವು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಘಟನೆಗೆ ಶಾಸಕ ಆರ್.ವಿ. ದೇಶಪಾಂಡೆ ತೀವ್ರ ಕಂಬನಿ ಹಾಗೂ ವಿಷಾದ ವ್ಯಕ್ತಪಡಿಸಿದ್ದಾರೆ
- ಆಸ್ಪತ್ರೆಗೆ ಭೇಟಿ: ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಆಸ್ಪತ್ರೆಗೆ ಧಾವಿಸಿದ ಶಾಸಕ ದೇಶಪಾಂಡೆ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.
- ಉತ್ತಮ ಚಿಕಿತ್ಸೆಗೆ ಸೂಚನೆ: ಕರ್ತವ್ಯನಿರತ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಗಾಯಾಳುಗಳಿಗೆ ಯಾವುದೇ ಕೊರತೆಯಾಗದಂತೆ ತಕ್ಷಣವೇ ಸೂಕ್ತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದರು.
- ಶಾಸಕರ ಸಾಂತ್ವನ: “ಮುಂಡವಾಡ ಗ್ರಾಮದ ಶ್ರಮಿಕ ಬಂಧುಗಳು ಅಪಘಾತಕ್ಕೆ ಈಡಾಗಿರುವುದು ಮನಸ್ಸಿಗೆ ತೀವ್ರ ನೋವುಂಟುಮಾಡಿದೆ. ಗಾಯಗೊಂಡ ಪ್ರತಿಯೊಬ್ಬರೂ ಶೀಘ್ರವಾಗಿ ಗುಣಮುಖರಾಗಿ, ಸಾಮಾನ್ಯ ಜೀವನಕ್ಕೆ ಮರಳಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಶಾಸಕರು ತಿಳಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now