ಉಡುಪಿ : ‘ಕಿಂಗ್ ಕೊಹ್ಲಿ’ಯ ಪರಮಭಕ್ತ : ಚಿತ್ರದುರ್ಗದ ಈ ವಾಹನ ಚಾಲಕನ ಕ್ರೇಜಿ ಫ್ಯಾನ್ ಸಾಧನೆ ನೋಡಿದ್ರೆ ನೀವೂ ಶಾಕ್ ಆಗ್ತೀರಾ!

ಉಡುಪಿ : ‘ಕಿಂಗ್ ಕೊಹ್ಲಿ’ಯ ಪರಮಭಕ್ತ : ಚಿತ್ರದುರ್ಗದ ಈ ವಾಹನ ಚಾಲಕನ ಕ್ರೇಜಿ ಫ್ಯಾನ್ ಸಾಧನೆ ನೋಡಿದ್ರೆ ನೀವೂ ಶಾಕ್ ಆಗ್ತೀರಾ!
0Shares

ಉಡುಪಿ : ​ಮಲ್ಪೆ ಹೂಡೆ ಕಡಲತೀರದಲ್ಲಿ ಸ್ನೇಹಿತರೊಂದಿಗೆ ಪ್ರತ್ಯಕ್ಷರಾದ ‘ಆರ್.ಸಿ.ಬಿ’ ಕಿಂಗ್‌ಮೇಕರ್ ನ ಅಭಿಮಾನಿ ತನ್ನ ನೆಚ್ಚಿನ ಆಟಗಾರನಿಗೆ ಎದೆಯನ್ನೇ ದೇವಾಲಯ ಮಾಡಿಕೊಂಡಿದ್ದಾನೆ. ಈತ ಕೇವಲ ಅಭಿಮಾನಿಯಲ್ಲ, ‘ವಿರಾಟ ಪರ್ವ’ದ ಭಕ್ತಿಯುಗ!.
​ಅಭಿಮಾನ ಎನ್ನುವುದು ಕೆಲವರಿಗೆ ಒಂದು ಭಾವನೆಯಾದರೆ, ಚಿತ್ರದುರ್ಗದ ಚಳ್ಳಕೆರೆ ಈ ಸಾಹಸಿ ಯುವಕ ರಾಜೇಶ್ ಅವರಿಗೆ ಅದೊಂದು ಧರ್ಮ! ವೃತ್ತಿಯಲ್ಲಿ ಈತ ವಾಹನ ಚಾಲಕ.

ಕಳೆದ 15 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಮೇಲೆ ರಾಜೇಶ್ ಹೊಂದಿರುವ ಪ್ರೀತಿ, ನಿಷ್ಠೆ ಹಾಗೂ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ!
​ಉಡುಪಿಯ ಸುಂದರವಾದ ಮಲ್ಪೆ ಹೂಡೆ ಕಡಲತೀರದಲ್ಲಿ ತಮ್ಮ ಗೆಳೆಯರೊಂದಿಗೆ ಸುತ್ತಾಡುತ್ತಿದ್ದಾಗ, ‘ಪಿಕ್ಸೆಲ್ ಲೈವ್’ ಮಾಧ್ಯಮ ಸಂಸ್ಥೆಯ ಕಣ್ಣಿಗೆ ಬಿದ್ದ ರಾಜೇಶ್ ಅವರ ಜನ್ಮಭಕ್ತಿ ಹಾಗೂ ಅಭಿಮಾನ ಕಂಡ ಸಾರ್ವಜನಿಕರು ಆಶ್ಚರ್ಯಚಕಿತರಾಗಿದ್ದಾರೆ.

​ಎದೆಯ ಮೇಲಿದೆ ‘ಕಿಂಗ್ ಕೊಹ್ಲಿ’ ಪಚ್ಚೆ ಹಚ್ಚೆ (Tattoo)!
​ಪ್ರಪಂಚದಲ್ಲಿ ಅಭಿಮಾನಿಗಳು ಕೋಟ್ಯಾಂತರ ಜನರಿದ್ದಾರೆ. ಆದರೆ ರಾಜೇಶ್ ಅವರದ್ದು ‘ಅಲ್ಟಿಮೇಟ್ ಫ್ಯಾನ್‌ಡಮ್’!. ಎದೆಯ ಮೇಲೆಯೇ ಕೊಹ್ಲಿ ಮುಖ. ತನ್ನ ಹೃದಯದ ಮೇಲೆಯೇ ನೆಚ್ಚಿನ ನಾಯಕ ವಿರಾಟ್ ಕೊಹ್ಲಿ ಅವರ ಭಾವಚಿತ್ರವನ್ನು ಬೃಹತ್‌ ಟ್ಯಾಟೂ (Tattoo) ರೂಪದಲ್ಲಿ ಕೆತ್ತಿಸಿಕೊಂಡಿದ್ದಾರೆ.



​ 2027ರ ವಿಶ್ವಕಪ್‌ನಲ್ಲಿ ‘ವಿರಾಟ್’ ಅಬ್ಬರಕ್ಕೆ ಕಾಯುತ್ತಿರುವ ಕಲಿ! ​”ವಿರಾಟ್ ಕೊಹ್ಲಿ ಅಂದರೆ ನನಗೆ ಕೇವಲ ಕ್ರಿಕೆಟರ್ ಅಲ್ಲ, ಅವರೊಬ್ಬ ನಮ್ಮ ಮನೆ ದೇವರು! 2027ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಭಾರತ ತಂಡವನ್ನು ಪ್ರತಿನಿಧಿಸಿ, ಆ ಕಪ್ ಅನ್ನು ಎತ್ತಿಹಿಡಿಯುವುದನ್ನು ಕಣ್ಣಾರೆ ನೋಡುವುದೇ ನನ್ನ ಜೀವನದ ಅತಿ ದೊಡ್ಡ ಕನಸು!” ಎನ್ನುತ್ತಾರೆ ರಾಜೇಶ್ ಚಿತ್ರದುರ್ಗ.

​RCB ಹಾಗೂ ಕೊಹ್ಲಿ ಅಂದರೆನೆ ರೋಮಾಂಚನ! ​ಒಂದು ಕಡೆ ‘ಈ ಸಲ ಕಪ್ ನಮ್ದೇ’ ಎಂಬ ಭಾವನೆ, ಇನ್ನೊಂದು ಕಡೆ ಕೊಹ್ಲಿಯವರ ಪ್ರತಿಯೊಂದು ಶತಕಕ್ಕೂ ಜೈಕಾರ ಕೂಗುವ ಉತ್ಸಾಹ! 15 ವರ್ಷಗಳ ನಿರಂತರ ಪ್ರೀತಿ, ಯಾವುದೇ ಸೋಲು-ಗೆಲುವಿನ ಲೆಕ್ಕಾಚಾರವಿಲ್ಲದೆ ನಿಂತ ಈ ‘ಅಪ್ಪಟ ಕನ್ನಡಿಗ’ ರಾಜೇಶ್ ಅವರ ಅಭಿಮಾನಕ್ಕೆ ಈಗ ಇಡೀ ಕರ್ನಾಟಕವೇ ತಲೆಬಾಗಿದೆ. ​ಈ ‘ಸೂಪರ್ ಫ್ಯಾನ್’ ರಾಜೇಶ್ ಅವರ ಕೊಹ್ಲಿ ಮೇಲಿನ ಅಪ್ರತಿಮ ಪ್ರೀತಿ ಮತ್ತು ಈ ವಿರಾಟ ಭಕ್ತಿಗೆ ನಿಮ್ಮದೊಂದು ಸಲಾಂ ಇರಲಿ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now