
ಜನಪ್ರಿಯ ವೈದ್ಯರಾಗಿದ್ದು ಕೀರ್ತಿಶೇಷರಾದ ಆರೂರು ಡಾಕ್ಟರ್ ರಾಘವೇಂದ್ರ ಗೀತಾ ರಾವ್ ದಂಪತಿಯವರ ಸ್ಮರಣಾರ್ಥವಾಗಿ ಉದ್ಯಮಿ ಹಾಗೂ ಪ್ರಗತಿಪರ ಕೃಷಿಕರಾದ ಶ್ರೀಮತಿ ಮತ್ತು ಶ್ರೀ ರೋಯಲ್ ರತ್ನಾಕರ್ ಡಿ ಶೆಟ್ಟಿ ರವರು ಕೊಡುಗೆಯಾಗಿ ನಿರ್ಮಿಸಿದ ನವೀಕ್ರತ ಬಸ್ಸು ತಂಗುದಾಣದ ಲೋಕಾರ್ಪಣೆಯ ಕಾರ್ಯಕ್ರಮವು ತಾರೀಖು 22 ಜುಲೈ ರಂದು ಸಂಜೆ 4 ಗಂಟೆಗೆ ದೊಂಪದ ಕುಮೇರಿ ಕೊಳಲಗಿರಿ ರಾಘವೇಂದ್ರ ರಾವ್ ಡಾಕ್ಟರ್ ಮನೆಯ ಎದುರುಗಡೆ ಜರುಗಿತು. ದೊಡ್ಡಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ರವರು ನವೀಕೃತ ಬಸ್ಸು ತಂಗುದಾಣವನ್ನು ಉದ್ಘಾಟಿಸಿದರು . ಮುಖ್ಯ ಅತಿಥಿಗಳಾದ ಉದ್ಯಮಿ ಎ. ಕೃಷ್ಣ ನಾಯಕ್ ಗಣೇಶ್ ಸ್ಟೋರ್ ನಾಮಫಲಕ ಅನಾವರಣಗೊಳಿಸಿದರು. ಮುಂಬೈ ಉದ್ಯಮಿ ಸದಾಶಿವ ಹೆಗ್ಡೆ ಬಾಣಬೆಟ್ಟು ತಂಗುದಾಣವನ್ನು ರಿಬ್ಬನ್ ಕತ್ತರಿಸಿ ಲೋಕಾರ್ಪಣೆ ಗೈದರು. ಹಾವಂಜೆ ಪಂಚಾಯತ್ ಆಡಳಿತ ಅಧಿಕಾರಿ ಡಾ ಮಂಜುನಾಥ ಅಡಿಗ ಎನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆರುಂಧತಿ ಏಸುಮನೆ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್. ರಮೇಶ ಶೆಟ್ಟಿ, ರೋಯಲ್ ರತ್ನಾಕರ ಡಿ ಶೆಟ್ಟಿ , ಶಾರಿಕಾ ರತ್ನಾಕರ್ ಶೆಟ್ಟಿ, ಉದ್ಯಮಿ ರಾಜೀವ ಆಳ್ವ ಬೆಳ್ಳಂಪಳ್ಳಿ, ನರಸಿಂಹ ಭಟ್ ಕುರುಡಂಜೆ ಮಠ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಸ್ ಸ್ಟ್ಯಾಂಡ್ ಕೊಡುಗೆ ನೀಡಿದ ದಂಪತಿ ರೋಯಲ್ ರತ್ನಾಕರ್ ಡಿ ಶೆಟ್ಟಿ ಮತ್ತು ಪತ್ನಿ ಶಾರಿಕಾ ಶೆಟ್ಟಿ ರವರನ್ನು ಹಾವಂಜೆ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶ್ರೀ ಶ್ರೀ ರಮಾನಂದ ಗುರೂಜಿ ಉದ್ಯಮಿ ಎ ಕೃಷ್ಣನಾಯಕ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ತಂಗುದಾನದ ಕೆಲಸವನ್ನು ಶೀಘ್ರವಾಗಿ ನೆರವೇರಿಸಿಕೊಟ್ಟ ಭಗತ್ ಮತ್ತು ಸ್ಟೀವನ್ ಮುಂತಾದವರನ್ನು ಸನ್ಮಾನಿಸಲಾಯಿತು.



ನಾಗರಾಜ್ ಹೆಗ್ಡೆ ಗೋಳಿಕಟ್ಟೆ, ದೋಗು ಪೂಜಾರಿ ಕಾರ್ತಿ ಬೈಲು, ಹಿರಿಯಡಕ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬೆಳ್ಳಂಪಳ್ಳಿ, ಸಿಇಓ ಪ್ರಶಾಂತ್ ಶೆಟ್ಟಿ, ಉದ್ಯಮಿ ಇರ್ಮಾಡಿ ಸುರೇಶ್ ಶೆಟ್ಟಿ, ಪ್ರೇಮಾ ಲೂವಿಸ್, ಸತೀಶ್ ಪೂಜಾರಿ ಕೀಳಿಂಜೆ, ಸುಂದರ ಮಾಸ್ಟ್ರು ಕೊಳಲಗಿರಿ, ಉಪ್ಪೂರು ಬಂಟರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಅಮ್ಮುಂಜೆ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಇಓ ಸಂದೀಪ್ ಶೆಟ್ಟಿ , ಅಪರ್ಣ ಶೆಟ್ಟಿ , ಡಾ.ಪ್ರದೀಪ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಹಾವಂಜೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಮಲಾಕ್ಷಿ ಬಿ ಶೆಟ್ಟಿ ಮತ್ತು ಪಂಚಾಯತ್ ಸಿಬ್ಬಂದಿ ವರ್ಗದವರು , ಹಾವಂಜೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಯುವ ವಿಚಾರ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಸದಾಶಿವ್ ಕುಮಾರ್ ರವರು ಧನ್ಯವಾದ ಸಲ್ಲಿಸಿ, ಯೋಗೀಶ್ ಕೊಳಲಗಿರಿ ನಿರೂಪಣೆ ಮಾಡಿದರು.





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now