ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ( KCCCI ) ಮಹಾಸಭೆ ಹಾಗೂ ನೂತನ ಕಚೇರಿ ಉದ್ಘಾಟನೆ :

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ( KCCCI ) ಮಹಾಸಭೆ ಹಾಗೂ ನೂತನ ಕಚೇರಿ ಉದ್ಘಾಟನೆ :
0Shares

ಉಡುಪಿ : ಜುಲೈ 19 ರಂದು ಸಂಜೆ 6 ಗಂಟೆಗೆ ಮಾಂಡವಿ ಟ್ರೇಡ್ ಸೆಂಟರ್ ನಲ್ಲಿ ಇರುವ ಮಾಂಡವಿ ಸಭಾ ಭವನದಲ್ಲಿ ಶ್ರೀ ಆಲ್ವಿನ್ ಕ್ವಾಡ್ರಸ್ ರವರ ಅಧ್ಯಕ್ಷತೆಯಲ್ಲಿ ಮಹಾಸಭೆಯು ಜರುಗಿತು. ಕಾರ್ಯದರ್ಶಿ ಶ್ರೀ ವಿಲ್ಸನ್ ಡಿಸೋಜಾ, ಖಜಾಂಜಿ ಶ್ರೀ ಮ್ಯಾಕ್ಸಿಮ್ ಸಲ್ಡಾನ್ಹ ಹಾಗೂ ಅಜೀವ ಸದಸ್ಯರು ಹಾಜರಿದ್ದರು. ಮಹಾಸಭೆಯ ನಂತರ ಸ್ಥಳಾಂತರಗೊಂಡ ನೂತನ ಕಚೇರಿಯನ್ನು ಮಾಜಿ ಅಧ್ಯಕ್ಷರಾದ ಶ್ರೀ ಸಂತೋಶ್ ಡಿಸಿಲ್ವಾ ಹಾಗೂ ಪ್ರಸ್ತುತ ಅಧ್ಯಕ್ಷರಾದ ಶ್ರೀ ಆಲ್ವಿನ್ ಕ್ವಾಡ್ರಸ್‌ರವರು ಉದ್ಘಾಟಿಸಿ, ಉಡುಪಿ ಸಂತ ಮೇರಿ ಶಾಲೆಯ ಪ್ರಾಂಶುಪಾಲರಾದ ಫಾ! ವಿಜಯ್ ಜೋಯ್ಸನ್ ಡಿಸೋಜಾ ರವರು ಆಶೀರ್ವಚನಗೈದರು.

ನಂತರ 7 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಶ್ರೀ ಸೀತಾರಾಮ್ ಶೆಟ್ಟಿ ( ಜಂಟಿ ನಿರ್ದೇಶಕರು, ಜಿಲ್ಲಾ ಇಂಡಸ್ಟ್ರಿ ಸೆಂಟರ್ ಉಡುಪಿ ) ಇವರು ಇಲಾಖೆಯಲ್ಲಿ ಸಿಗುವ ಎಲ್ಲಾ ಸವಲತ್ತುಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ಶ್ರೀ ಜೋನ್ ಆರ್ ಡಿಸಿಲ್ವಾರವರು ತಮ್ಮ ವ್ಯವಹಾರ ಹಾಗೂ ಇಂಡಸ್ಟ್ರಿಯ ಬಗ್ಗೆ ಅನುಭವಗಳನ್ನು ಹಂಚಿಕೊಂಡರು. ಸಭಾ ಕಾರ್ಯಕ್ರಮದ ನಂತರ ಕುಟುಂಬ ಸಮ್ಮಿಲನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 17 ಜನ ಹೊಸ ಸದಸ್ಯರು ಸಂಘಕ್ಕೆ ಸೇರ್ಪಡೆಗೊಂಡರು.

ಆಲ್ವಿನ್ ಅಂದ್ರಾದೆ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯದರ್ಶಿ ಶ್ರೀ ವಿಲ್ಸನ್ ಡಿಸೋಜಾರವರು ಧನ್ಯವಾದವಿತ್ತರು. ಕುಟುಂಬ ಸಮ್ಮಿಲನವು ಮನರಂಜನೆ ಹಾಗೂ ಸಹಭೋಜನದೊಂದಿಗೆ ಸಂಪನ್ನಗೊಂಡಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now