
ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಚನ್ನಮ್ಮ ಅವರ ಆರೋಗ್ಯ ವಿಚಾರಣೆಗೆಂದು ಮಾಜಿ ಪ್ರಧಾನಿ ದೇವೇಗೌಡ, ಸಂಸದ ಡಾ.ಸಿ.ಎನ್. ಮಂಜುನಾಥ್ ಸಹಿತ ಕುಟುಂಬದ ಅನೇಕರು, ಜೆಡಿಎಸ್ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿದ್ದಾರೆ. ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಶುಕ್ರವಾರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ಆಗಮಿಸಿದ್ದರು.
ತಾಯಿ ಚನ್ನಮ್ಮ ಅವರನ್ನು, ಅವರು ನಂಬಿರುವ ರಾಜರಾಜೇಶ್ವರಿಯೇ ಈ ಬಾರಿಯೂ ಕಾಪಾಡುತ್ತಾಳೆ ಎಂದು ಭಾವುಕರಾಗಿ ನುಡಿದರು.ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರ ಚಿಕಿತ್ಸೆ ಏನೇ ಇದ್ದರೂ ಅವರು ದೇವರನ್ನು ನಂಬಿ ಬದುಕುತ್ತಿದ್ದಾರೆ. ಪುನಃ ಪುನಃ ಆರೋಗ್ಯದ ಸಮಸ್ಯೆಯಿಂದ ಹೊರಬರುವ ಶಕ್ತಿ ಯನ್ನು ಆ ದೇವರೇ ನೀಡಿದ್ರು. ಬದುಕುವುದೇ ಅಸ್ತಾಧ್ಯ ಎಂಬಂತೆ 25 ವರ್ಷದ ಹಿಂದೆ ಆ್ಯಸಿಡ್ ದಾಳಿಯಿಂದಲೂ ಕಾಪಾಡಿದ್ದು ಆ ದೇವರೇ ಎಂದು ಹೇಳಿದ್ದಾರೆ.
85 ವರ್ಷದ ಚೆನ್ನಮ್ಮ ಅವರಿಗೆ ಮೂರು ದಿನಗಳಿಂದ ಸಮಸ್ಯೆ ಉಲ್ಬಣಿಸಿತ್ತು ಜತೆಗೆ ಎದೆಭಾಗದಲ್ಲಿ ನೋವು ಇದ್ದಿದ್ದರಿಂದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿತ್ತು.ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆ ಮುಂದುವೆರಿಸಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now