
ಕಟಪಾಡಿ(ಉಡುಪಿ): ಕಟಪಾಡಿಯಲ್ಲಿ ಬೀದಿನಾಯಿಗಳ ಅಟ್ಟಹಾಸ ಮೆರೆದಿದ್ದು ಹಟ್ಟಿಗೆ ನುಗ್ಗಿ ಆಡುಗಳ ಮಾರಣಹೋಮ ನಡೆಸಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.ಶಾಲೆಗೆ ಮಕ್ಕಳನ್ನು ಕಳುಸುವ ಬಗ್ಗೆ ಚಿಂತೆ ಮೂಡುವಂತೆ ಮಾಡುತ್ತಿದೆ.
ಅಚ್ಚಡ ಮಲೆ ಜುಮಾದಿ ದೈವಸ್ಥಾನದ ಸುತ್ತಮುತ್ತ ಬೀದಿ ನಾಯಿಗಳ ಕಾಟ ಮುಂದುವರೆದಿದ್ದು ಶನಿವಾರ ಮುಂಜಾವದಲ್ಲಿ ಕಟಪಾಡಿ ಅಚ್ಚಡ ನಿವಾಸಿ ನಿವೃತ್ತ ಶಿಕ್ಷಕ ವಿಠಲ ಶೇರಿಗಾರ್ ಅವರ ಮನೆಯಲ್ಲಿ ಪುತ್ರ ಪ್ರಶಾಂತ್ ಅವರು ಪಾಲನೆ ಮಾಡುತ್ತಿದೆ ಆಡುಗಳ ಪೈಕಿ 2 ಮರಿ ಸಹಿತ 5 ಆಡುಗಳನ್ನು ಬೀದಿ ನಾಯಿಗಳ ಹಿಂಡು ಬಲಿ ಪಡೆದಿದೆ.ಸಾವಿರಾರು ರೂ ನಷ್ಟದ ಜತೆಗೆ ಈ ಭಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಭೀತಿ ವ್ಯಕ್ತವಾಗುತ್ತಿದೆ.
ಹೆಚ್ಚಿನ ದುರಂತ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತು ಕೊಂಡು ತೊಂದರೆ ಉಂಟು ಮಾಡುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now