ಉಡುಪಿ ಡಿಎಆರ್‌ನಲ್ಲಿ 14ನೇ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್ ತಂಡದ ನಿರ್ಗಮನ ಪಥಸಂಚಲನ

ಉಡುಪಿ ಡಿಎಆರ್‌ನಲ್ಲಿ 14ನೇ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್ ತಂಡದ ನಿರ್ಗಮನ ಪಥಸಂಚಲನ
0Shares

ದಿನಾಂಕ 13.07.2026 ರಂದು ಬೆಳಿಗ್ಗೆ 8:30ಕ್ಕೆ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಗಳ 14ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಚಂದು ಮೈದಾನ, ಪೊಲೀಸ್ ಗ್ರೌಂಡ್, ಡಿಎಆರ್, ಉಡುಪಿ ಇಲ್ಲಿ ನಡೆದಿರುತ್ತದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಗಮಿಸಿದ ಶ್ರೀ ಅಮಿತ್‌ ಸಿಂಗ್‌ ಐ.ಪಿ.ಎಸ್‌, ಪೊಲೀಸ್‌ ಮಹಾನಿರೀಕ್ಷಕರು, ಪಶ್ಚಿಮ ವಲಯ ಮಂಗಳೂರು ಇವರು ಪ್ರಶಿಕ್ಷಣಾರ್ಥಿಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಶ್ರೀ ಹರಿರಾಮ್‌ ಶಂಕರ್‌ ಐ.ಪಿ.ಎಸ್‌, ಪೊಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲೆ, ಶ್ರೀ ಸುಧಾಕರ ನಾಯ್ಕ್‌ ಕೆ.ಎಸ್‌.ಪಿ.ಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲೆ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಯವರು ಮತ್ತು ಪ್ರಶಿಕ್ಷಣಾರ್ಥಿಗಳ ಕುಟುಂಬದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ತರಬೇತಿಯ ಒಳಾಂಗಣ ವಿಭಾಗದಲ್ಲಿ ಶಿವಪ್ಪ ಹಿತ್ನಾಳ್‌ ಪ್ರಥಮ, ಭುವನೇಶ ಕೆ.ಸಿ, ದ್ವಿತೀಯ ಮತ್ತು ಅಮರೇಶ ಪರಶುರಾಮ ಬೋಳ ಶೆಟ್ಟಿ ತೃತೀಯ ಸ್ಥಾನಿಯಾದರು.

ಈ ತರಬೇತಿಯ ಹೊರಾಂಗಣ ವಿಭಾಗದಲ್ಲಿ ಮಂಜುನಾಥ ಕರಿಯಪ್ಪ ದೊಡ್ಡಮನಿ ಪ್ರಥಮ, ರುದ್ರೇಗೌಡ ಜಿ.ಎ.ಮ ದ್ವಿತೀಯ ಮತ್ತು ಮನೋಜ್‌ ಕೆ. ತೃತೀಯ ಸ್ಥಾನಿಯಾದರು.

ಈ ತರಬೇತಿಯ ಗುರಿಪರೀಕ್ಷೆ ವಿಭಾಗದಲ್ಲಿ ರೇಣುಕಾಪ್ರಸಾದ್‌ ಪಿ.ವಿ, ಪ್ರಥಮ: ಪಾಂಡುರಂಗ ಮಹಾದೇವಪ್ಪ ದೊಡ್ಡಮನಿ ಮತ್ತು ಸಂಗಮೇಶ ಮೇಟಿ ಇವರುಗಳು ದ್ವಿತೀಯ ಸ್ಥಾನಿಯರಾಗಿ ಆಯ್ಕೆಯಾಗಿರುತ್ತಾರೆ.

ಆಲ್‌ರೌಂಡರ್‌ ಆಗಿ ಶಿವಪ್ಪ ಹಿತ್ನಾಳ್‌ ಇವರು ಆಯ್ಕೆಯಾಗಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now