ಉಡುಪಿ ಜಿಲ್ಲಾಸ್ಪತ್ರೆ & ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಚಿವ ಯು ಟಿ ಖಾದರ್ ಧಿಡೀರ್ ಭೇಟಿ

ಉಡುಪಿ ಜಿಲ್ಲಾಸ್ಪತ್ರೆ & ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಚಿವ ಯು ಟಿ ಖಾದರ್ ಧಿಡೀರ್ ಭೇಟಿ
0Shares

ಉಡುಪಿ .ಜುಲೈ 12 : ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಚಿವರಾದಂತಹ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಇವರು ಇಂದು ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡದ ವೀಕ್ಷಣೆಯನ್ನು ನಡೆಸಿದರು. ಆಸ್ಪತ್ರೆಯ ವ್ಯವಸ್ಥೆ ಮತ್ತು ಸುವ್ಯವಸ್ಥೆಯ ಬಗ್ಗೆ ಸಂಪೂರ್ಣವಾದ ಸಂವಾದ ನಡೆಸಿ ತದನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾತಿಯಾಗಿರತಕ್ಕಂತಹ ಒಳರೋಗಿಗಳ ಜೊತೆ ಆತ್ಮೀಯವಾದಂತ ಸಂವಾದವನ್ನು ನಡೆಸಿ, ಅವರ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ವಿಚಾರಣೆಯನ್ನು ನಡೆಸಿದರು. ವೈದ್ಯರ ಚಿಕಿತ್ಸೆ ಮತ್ತು ಶುಶ್ರೂಷಕ ಅಧಿಕಾರಿಗಳ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾತಿಗೊಂಡಿರತಕ್ಕಂತಹ ರೋಗಿಗಳ ಜೊತೆ ಸಂವಾದವನ್ನು ನಡೆಸಿದರು.

ಅವರಿಂದ ಉತ್ತಮ ಪ್ರತಿಕ್ರಿಯೆಯನ್ನು ಜಿಲ್ಲಾ ಆಸ್ಪತ್ರೆ ಬಗ್ಗೆ ಒಳ್ಳೆಯ ಉತ್ತಮ ಪ್ರತಿಕ್ರಿಯೆಯನ್ನು ರೋಗಿಗಳ ಕಡೆಯಿಂದ ಕೇಳಿ ಮಚ್ಚಗೆ ವ್ಯಕ್ತ ಪಡಿಸಿದರು . ತದನಂತರ ಆಸ್ಪತ್ರೆಯ ಓಟಿ ವಿಭಾಗಕ್ಕೆ ಪರೀಕ್ಷೆಯನ್ನು ನೀಡಿ ಓಟಿಯಲ್ಲಿ ಯಾವ ಯಾವ ತರದ ಪರಿಕರಗಳು ಇದೆ ಮತ್ತು ಇನ್ನು ಮುಂದೆ ಹೆಚ್ಚಿನ ವ್ಯವಸ್ಥೆ ಸೌಲಭ್ಯಗಳು ಏನೆಲ್ಲಾ ಬೇಕು ಎಂಬುದರ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರಾದಂತಹ ಡಾಕ್ಟರ್ ಎಚ್. ಅಶೋಕ್ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಇವರ ಜೊತೆಯಲ್ಲಿ ಎಲ್ಲಾ ಸಂವಾದವನ್ನು ನಡೆಸಿದರು.

ತದನಂತರ ಮಾನ್ಯ ಆರೋಗ್ಯ ಸಚಿವರು ಇವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಒಳರೋಗಿಗಳಾಗಿ ದಾಖಲಾತಿಯಾಗಿಕೊಂಡಂತ ಎಲ್ಲಾ ತಾಯಂದಿರ ಜೊತೆ ಮಕ್ಕಳ ಜೊತೆ ಮಾತನಾಡಿಸಿ ತದನಂತರ ಆರೋಗ್ಯ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದಂತಹ ಡಾಕ್ಟರ್ ಎಚ್. ಅಶೋಕ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆದಂತಹ ಡಾ. ಬಸವರಾಜ್ ಹುಬ್ಬಳ್ಳಿ ಹಾಗೂ ಆಸ್ಪತ್ರೆಯ ಎಲ್ಲಾ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು ಸಿಬ್ಬಂದಿಯವರ ಜೊತೆಗೂಡಿ ಆರೋಗ್ಯ ಸಭೆಯನ್ನು ನಡೆಸಿದರು. ಈ ಆರೋಗ್ಯ ಸಭೆಯಲ್ಲಿ ಮುಖ್ಯವಾಗಿ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೆ ಎಷ್ಟು ಹೆರಿಗೆ ಆಗುತ್ತದೆ ಎಂಬುದನ್ನು ವಿಚಾರಿಸಿ ಸುಮಾರು 150ಕ್ಕೂ ಹೆಚ್ಚು ಹೆರಿಗೆ ಆಗುವುದರ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು. ಅದೇ ರೀತಿ ತಾಲೂಕು ಆಸ್ಪತ್ರೆಯಲ್ಲಿ ಎಷ್ಟು ಹೆರಿಗೆ ಆಗ್ತಾ ಇದೆ ಅನ್ನೋದರ ಬಗ್ಗೆ ಕೂಡ ವಿಚಾರಣೆಯನ್ನು ಮಾಡಿ ಇನ್ನು ಉತ್ತಮಪಡಿಸಿಕೊಳ್ಳುವಂತೆ ಸಲಹೆಯನ್ನು ನೀಡಿದರು.

ತದನಂತರ ನಮ್ಮ ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ ಎಷ್ಟು ಹೊರರೋಗಿಗಳಾಗಿ ಬರ್ತಾರೆ ಎಂಬುದರ ಮಾಹಿತಿಯನ್ನು ತಿಳಿದುಕೊಂಡರು. ದಿನಕ್ಕೆ 700ರಿಂದ 800 ಮತ್ತು ಸೋಮವಾರ 900 ಕ್ಕು ಹೆಚ್ಚು ಹೊರರೋಗಿಗಳು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುತ್ತಾರೆ ಎಂಬುದರ ಮಾಹಿತಿಯನ್ನು ಕೇಳಿ ಸಂತಸ ವ್ಯಕ್ತಪಡಿಸಿದರ.ಹಾಗು ಹಾಗೂ ಜಿಲ್ಲಾ ಆಸ್ಪತ್ರೆಯ ಎಲ್ಲಾ ವೈದ್ಯರನ್ನು ವೈಯಕ್ತಿಕವಾಗಿ ಮಾತನಾಡಿಸಿ, ಅವರ ಒಂದು ಕಾರ್ಯವೈಖರಿಯನ್ನು ಇನ್ನು ಉತ್ತಮಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹಾಗೆಯೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಗ್ಗೆ ವಿಚಾರಿಸಿ, ಇನ್ನು ಉತ್ತಮ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಲು ಹಾಗೂ ಅದಕ್ಕೆ ಬೇಕಾದಂತಹ ಎಲ್ಲಾ ಸಹಾಯವನ್ನ ಪಡೆಯಲು ಸೂಚಿಸಿದರು.ಉಡುಪಿ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಜೊತೆ ಸಂವಾದವನ್ನು ನಡೆಸಿ ಅವರ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡು ಇನ್ನು ಹೆಚ್ಚಿನ ರೀತಿಯಲ್ಲಿ ತಮ್ಮ ಕಾರ್ಯವೈಕರಿಯನ್ನು ಉತ್ತಮಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹಾಗೂ ಜಿಲ್ಲಾ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಗುವಂತಹ ಶಸ್ತ್ರಚಿಕಿತ್ಸೆಗಳ ಬಗ್ಗೆ, ಉತ್ತಮ ಶಸ್ತ್ರಚಿಕಿತ್ಸೆಗಳ ಬಗ್ಗೆ ಹಾಗೂ ನಮ್ಮ ವೈದ್ಯರು ಚಿಕಿತ್ಸೆ ನೀಡಿದ ಬಳಿಕ, ರೋಗಿಗಳಲ್ಲಿ ಆದ ಉತ್ತಮ ಬದಲಾವಣೆಗಳ ಬಗ್ಗೆ ಉತ್ತಮ ಶಸ್ತ್ರಚಿಕಿತ್ಸೆ ಬಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಮುಖ್ಯಸ್ಥರು ತಿಂಗಳಿಗೆ ಎರಡು ಬಾರಿಯಾದರೂ ಪತ್ರಿಕಾ ಸಭೆಯನ್ನು ನಡೆಸಿ, ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ಆರೊಗ್ಯ ಸೌಲಭ್ಯ ನಡೆಯುತ್ತಿರುವುದರ ಬಗ್ಗೆ ಪತ್ರಿಕಯಲ್ಲಿ ಪ್ರಕಟಿಸಿ ಜನರಲ್ಲಿ ಆತ್ಮವಿಶ್ವಾಸ, ಮೂಡಿಸಿ ಜನರಲ್ಲಿ ಇನ್ನು ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಒಲವು ಮೂಡಿಸುವಲು ಪ್ರೇರೇಪಿಸುವಂತೆ ಸೂಚಿಸಿದರು. ಹಾಗೂ ತಾಲೂಕು ಮಟ್ಟದಲ್ಲಿ ತಿಂಗಳಿಗೆ ಒಮ್ಮೆ ಬಾರಿಯಾದರೂ ಇಂತಹ ಒಂದು ಪತ್ರಿಕಾ ಸಭೆಯನ್ನು ನಡೆಸಿ, ಅದನ್ನು ಸಾರ್ವಜನಿಕರಲ್ಲಿ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಸಾರ್ವಜನಿಕರಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನು ಬರಿಸುವಂತೆ ಇಲಾಖಾ ಮುಖ್ಯಸ್ಥರಲ್ಲಿ ಸನ್ಮಾನ್ಯ ಯು.ಟಿ ಖಾದರ್ ಅವರು ಸೂಚಿಸಿದರು.ನಂತರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಬಗ್ಗೆ ಮತ್ತು ಕಟ್ಟಡದ ದುರಸ್ತಿಗಳ ಬಗ್ಗೆ, ತೊಂದರೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎದುರುಗಡೆ ಇರುವಂತಹ ಬೃಹತ್ ಆಸ್ಪತ್ರೆ ಕಟ್ಟಡಕ್ಕೆ ತೋಡಿದ ಗುಂಡಿಯ ಬಗ್ಗೆ ಅದರ ಗುಂಡಿಯ ದುರಸ್ತಿ ಬಗ್ಗೆ, ಅದರ ಒಂದು ದೊರಗಳ ಬಗ್ಗೆ, ಜಿಲ್ಲಾಧಿಕಾರಿಗಳಾದ ಸ್ವರೂಪ್ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರಾದಂತಹ ಡಾ.ಹೆಚ್ ಅಶೋಕ್ ಅವರಲ್ಲಿ ವಿವರಣೆಯನ್ನು ಪಡೆದುಕೊಂಡು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ದುರಸ್ತಿ ಹಾಗೂ ಅದರ ಎದುರುಗಡೆ ನಿರ್ಮಾಣ ಮಾಡಲು ತೆಗೆದಂತಹ ಗುಂಡಿಯ ಬಗ್ಗೆ ಹಾಗೂ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಬೇಕಾಗಿರತಕ್ಕಂತಹ ಸೌಲಭ್ಯಗಳ ಬಗ್ಗೆ ಸಂಪೂರ್ಣವಾದಂತಹ ಒಂದು ವಿವರಗಳನ್ನ ವಿಚಾರಗಳನ್ನು ಚರ್ಚಿಸಲು ದಿನಾಂಕ 16/07/2026 ರಂದು ಬೆಂಗಳೂರಿನಲ್ಲಿ ವಿಶೇಷ ಮಟ್ಟದ ಒಂದು ಆಯುಕ್ತರು ಮತ್ತು

ಅಧಿಕಾರಿಗಳ ಜೊತೆ ಮತ್ತು ಆರೋಗ್ಯ ಸಚಿವರ ಜೊತೆ ಒಂದು ವಿಶೇಷವಾದಂತಹ ಒಂದು ಆರೋಗ್ಯ ಸಭೆಯನ್ನು ನಡೆಸಲು ಬರಲು ಸೂಚಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now