ಉಡುಪಿ : ತುಳುನಾಡ ರಕ್ಷಣಾ ವೇದಿಕೆ (ರಿ.) ಭೈರಂಪಳ್ಳಿ ಘಟಕದ ಪದಾಧಿಕಾರಿಗಳ ಸಭೆ

ಉಡುಪಿ : ತುಳುನಾಡ ರಕ್ಷಣಾ ವೇದಿಕೆ (ರಿ.) ಭೈರಂಪಳ್ಳಿ ಘಟಕದ ಪದಾಧಿಕಾರಿಗಳ ಸಭೆ
0Shares

ತುಳುನಾಡ ರಕ್ಷಣಾ ವೇದಿಕೆ (ರಿ.) ಭೈರಂಪಲ್ಲಿ ಘಟಕ ವತಿಯಿಂದ ಇಂದು 12-7-2026 ರಂದು ಸಂಜೆ 4 ಗಂಟೆಗೇ ತುಳುನಾಡ ರಕ್ಷಣಾ ವೇದಿಕೆ ಬೈರಂಪಲ್ಲಿ ಘಟಕದ ವತಿಯಿಂದ. ಬೈರಂಪಳ್ಳಿ ಘಟಕದ ಪದಾಧಿಕಾರಿಗಳ ಸಭೆಯು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಕಾಪು ತಾಲೂಕು ಅಧ್ಯಕ್ಷರಾದ ನಿತಿನ್ ಕುಮಾರ್ ಶೆಟ್ಟಿ ರವರ ನೇತೃತ್ವದಲ್ಲಿ ಭೈರಂಪಲ್ಲಿ ಸಾಂತ್ಯಾರ್ ಅಂಬೇಡ್ಕರ್ ಸಭಾಭವನದಲ್ಲಿ ನಡೆಸಲಾಯಿತು. ಸಂಘದ ಸಂಘಟನಾ ಶಕ್ತಿ, ಬಲವರ್ಧನೇ, ಸಂಘಟನೆಯ ಮಹತ್ವದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇಂದು ನೆಡೆದ ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಬೈರಂಪಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಶಾಂತ್ ಪೂಜಾರಿ ಮುಟ್ಟಿಕಲ್ಲು ಶಿರೂರು. ರವರನ್ನು ಸರ್ವನುಮತದಿಂದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜರವರು ತುಳುನಾಡ ಸೂರ್ಯ ಚಂದ್ರ ಚಿನ್ನೆ ಇರುವ ಧ್ವಜವನ್ನು ಕೊಟ್ಟು ಕಾರ್ಯದರ್ಶಿ ಹುದ್ದೆಯನ್ನು ನೀಡಿದರು. ಹಾಗೆಯೇ ಇದೇ ಬರ್ವ ಆಗಸ್ಟ್ 2 ತಾರೀಕಿನಂದು ತುಳುನಾಡ ರಕ್ಷಣಾ ವೇದಿಕೆ ಬೈರಂಪಳ್ಳಿ ಘಟಕದ ವತಿಯಿಂದ ಕಾರ್ಯಕರ್ತರ ಸೇರ್ಪಡೆಯ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆ ಕಾರ್ಯಕ್ರಮ ಚಂದಗಾಣಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಾಗೇಯೆ ಭೈರಂಪಳ್ಳಿಯಲ್ಲಿ ಮಹಿಳಾ ಘಟಕವನ್ನು ಮಾಡುವುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು. ಇಂದು ನೆಡೆದ ಭೈರಂಪಳ್ಳಿ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ ರವರು ಮಾತನಾಡಿ ಆಗಸ್ಟ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಆಟಿಡೊಂಜಿ ದಿನ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸುವ ಬಗ್ಗೆ ಅದರ ಪೂರ್ವ ತಯಾರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮಾಯಿತಿ ನೀಡಿದರು ಹಾಗೂ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಸಂಘಟನೆಯಿಂದ ನಡೆಸಬಹುದಾದ ಹೋರಾಟಗಳ ಕುರಿತು ಚರ್ಚಿಸಲಾಯಿತು. ಹಾಗೂ ಸಂಘಟನೆ ಮಹತ್ವ ಸಂಘಟನೆ ಶಕ್ತಿಯ ಬಗ್ಗೆ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಪು ತಾಲೂಕು ಉಪಾಧ್ಯಕ್ಷರಾದ ಶೋಧನ್ ಶೆಟ್ಟಿ ಶಿರೂರು, ಕಾಪು ತಾಲ್ಕು ಪ್ರಧಾನ ಕಾರ್ಯದರ್ಶಿಯಾದ ಕಾರ್ತಿಕ್ ಕುಲಾಲ್, ಬೈರಂಪಲ್ಲಿ ಘಟಕದ ಅಧ್ಯಕ್ಷರಾದ ಕೃಷ್ಣಾನಂದ ನಾಯಕ್, ಉಪಾಧ್ಯಕ್ಷರಾದ ಗುಣಾಕರ ಹಾಲಕ್ಕಿ, ಸಂದೀಪ್ ಕುಲಾಲ್ ದೂಪದ ಕಟ್ಟೆ, ಭೈರಂಪಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಿಶಾಂತ್ ಪೂಜಾರಿ ಮುಟ್ಟಿ ಕಲ್ಲು ಶಿರೂರು, ಜೊತೆ ಕಾರ್ಯದರ್ಶಿಯಾದ ಪ್ರಸಾದ್ ಶೆಟ್ಟಿ ಮಜಲುಮನೆ ಶಿರೂರು, ಶರಣ್ ಪೂಜಾರಿ, ಸುಕೇಶ್ ಹಾಲಕ್ಕಿ, ಉಪಸ್ಥಿತರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now