ಶಿರ್ವ ಸಂತ ಮೇರಿ ಪಿಯು ಕಾಲೇಜು ವಿದ್ಯಾರ್ಥಿ ಸಂಘದ ಅಧಿಕಾರ ಸ್ವೀಕಾರ: ಭವಿಷ್ಯದ ಉತ್ತಮ ಪ್ರಜೆಗಳಾಗಲು ಕರೆ

ಶಿರ್ವ ಸಂತ ಮೇರಿ ಪಿಯು ಕಾಲೇಜು ವಿದ್ಯಾರ್ಥಿ ಸಂಘದ ಅಧಿಕಾರ ಸ್ವೀಕಾರ: ಭವಿಷ್ಯದ ಉತ್ತಮ ಪ್ರಜೆಗಳಾಗಲು ಕರೆ
0Shares

ದಿನಾಂಕ 04.07.2026 ನೇ ಶನಿವಾರ ಪೂರ್ವಾಹ್ನ ಘಂಟೆ 93 ಕ್ಕೆ ಸಂತ ಮೇರಿ ಪದವಿ ಪೂರ್ವ ಕಾಲೇಜು ಶಿರ್ವ ಇದರ ವಿದ್ಯಾರ್ಥಿ ಸಂಘದ ಪದಗ್ರಹಣ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಸಾವುದ್ ಸಭಾಭವನದಲ್ಲಿ ಜರುಗಿತು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು ಹಾಗು ವಿವಿಧ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಸಂತ ಮೇರಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಕೆ . ಆರ್ . ಪಾಟ್ಕರ್ ನೆರನೇರಿಸಿದರು ಬಳಿಕ ಮಾತನಾಡಿದ ಶ್ರೀಯುತರು ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎನ್ನಲು ನಾನು ಹೆಮ್ಮೆ ಪಡುತ್ತೇನೆ. ಈ ಸಂಸ್ಥೆಯಲ್ಲಿ ಶಿಸ್ತು ಮತ್ತು ಶಿಕ್ಷಣವನ್ನು ನಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಆದುದರಿಂದ ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ಗೌರವವನ್ನು ಕಾಪಾಡುವುದರ ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಅಧ್ಯಕ್ಷ ಪೀಠದಿಂದ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ಅತಿವಂದನೀಯ ಫಾದರ್ ಚಾಲ್ಸ್ ಮೆನೇಜಸ್ ನೂತನ ನಾಯಕರುಗಳು ಭವಿಷ್ಯದಲ್ಲಿ ಉತ್ತರನ ಉತ್ತಮ ಪ್ರಜೆಗಳಾಗಿ ದ್ದೇಶವನ್ನು ಮುನ್ನಡೆಸುವಂತಹ ವ್ಯಕ್ತಿಗಳಾಗಬೇಕು ಅದಕ್ಕೆ ಸ್ವಯಂ ಶಿಸ್ತು ಅತ್ಯಂತ ಅಗತ್ಯ ಎಂದು ಹೇಳಿದರು. ವೇದಿಕೆಯಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಶ್ರೀ ಜುಲಿಯನ್ ರೋಡ್ರಿಗಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಶ್ಮಿತಾ ನಿರೂಪಿಸಿದರು ಹಾಗೂ ಧನ್ಯವಾದ ಸಮರ್ಪಣೆ ಉಪನ್ಯಾಸಕ ಶ್ರೀ ರೋಯಾಸ್ಟನ್ ಕ್ವಾಡ್ರಸ್ ನಡೆಸಿಕೊಟ್ಟರು. ಕ್ರೀಡಾ ನಿರ್ದೇಶಕ ಶ್ರೀ ಜೋಸೆಫ್ ಡಿಸೋಜ ಹಾಗೂ ಭೌತಶಾಸ್ತ್ರ ಉಪನ್ಯಾಕ ಶ್ರೀ ಜೋಯ್ಯಿನ್ ಡಿಸೋಜ ಸಹಕರಿಸಿದರು. ಬಳಿಕ ನಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರಗಿತು

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now