
ಗ್ರಾಹಕ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಕಾಂಗ್ರೆಸ್ ಮುಖಂಡ, ಉದ್ಯಮಿ ಅಮೃತ್ ಶೆಣೈ ಅವರು ಪ್ರಕರಣದ ಕುರಿತಂತೆ ಸ್ಪಷ್ಟಿಕರಣ ನೀಡಿದ್ದಾರೆ.
ಶ್ರೀ ಲಕ್ಷ್ಮೀ ಹೋಮ್ಸ್ & ಇನ್ ಫ್ರಾ ಸ್ಟ್ರಕ್ಚರ್ ಸಂಸ್ಥೆ ಮಾಲಕ ನಾನಾಗಿದ್ದು ಈ ಸಂಸ್ಥೆಯ ವತಿಯಿಂದ ಹಲವು ಕಟ್ಟಡ ಪ್ರಾಜೆಕ್ಟ್ ಗಳು ಯಶಸ್ವಿಯಾಗಿ ನಡೆದು ಅನೇಕ ತೃಪ್ತ ಗ್ರಾಹಕರಿದ್ದಾರೆ. ಒಂದು ಪ್ರಾಜೆಕ್ಟ್ ಮರಳಿನ ಆಭಾವದಿಂದ ತೊಂದರೆಗೊಳಗಾಗಿ ಈಚೆ ಕಡೆ ಅದರ ಮೇಲಿನ ಸಾಲದ ರಿಕವರಿ ಕ್ರಮಗಳನ್ನೂ ಬ್ಯಾಂಕ್ ನವರು ಮಾಡಲಾರಂಭಿಸಿದಾಗ ಕೋವಿಡ್ ಬಂದು ಅನೇಕ ಗ್ರಾಹಕರು ಕೊಡಬೇಕಾಗಿರುವ ಪಾವತಿಗಳನ್ನು ಸರಿಯಾಗಿ ಮಾಡಲು ವಿಫಲ ಆದಾಗ ಸಮಸ್ಯೆಗಳ ಸುರಿಮಳೆ ನಮ್ಮ ಸಂಸ್ಥೆ ಮೇಲೆ ಬಂತು.
ಫ್ಲ್ಯಾಟ್ ನಲ್ಲಿ ವಾಸ ಮಾಡುತ್ತಾ ಇದ್ದರೂ ನೋಂದಣಿ ಅವರವರ ಹೆಸರಿನಲ್ಲಿ ಅಗಲಿಲ್ಲ ಎಂಬ ಹತಾಶೆಯಿಂದ 2023 ರಲ್ಲಿ ಎಲ್ಲರೂ ಸೇರಿ ನನ್ನ ಮೇಲೆ ಕೇಸ್ ಮಾಡಿದರು. ಈಚೆ ಕಡೆ ಕಟ್ಟಡ ಹೇಗಾದರೂ ಮಾಡಿ ಕಂಪ್ಲಿಟ್ ಮಾಡಬೇಕೆಂದು ನಾನು ಕೆಲವರ ಬಳಿ ಕೈಸಾಲ ತಗೊಂಡ ವಿಷಯಗಳೂ ಕೋರ್ಟ್ ಮೆಟ್ಟಲೇರಿದವು. ತದನಂತರ ನನ್ನಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಮನವರಿಕೆ ಆದ ಹಲವರು ನನ್ನ ಜತೆ ರಾಜಿ ಆಗಿ ಸುಮಾರು 90% ಕೇಸ್ ಗಳು ಮುಕ್ತಾಯಗೊಂಡವು. ಇನ್ನೇನೂ ಬ್ಯಾಂಕ್ ಸಾಲ ಸೆಟಲ್ ಮಾಡಬೇಕು ಎನ್ನುವ ಹಂತದಲ್ಲಿ ಪರಿಸ್ಥಿತಿ ಇರುವಾಗ ಉಡುಪಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ಒಂದು ಕೇಸ್ ನಲ್ಲಿ ನನಗೆ ಶಿಕ್ಷೆ ಜಾರಿ ಮಾಡಿ ತೀರ್ಪು ನೀಡಿತು. ಆ ತೀರ್ಪನ್ನು ಪ್ರಶ್ನಿಸಿ ನಾನು ರಾಜ್ಯ ನ್ಯಾಯಾಲಯದಲ್ಲಿ ಮೋಲ್ಮನವಿ ಸಲ್ಲಿಸಿದಾಗ ಜಿಲ್ಲೆಯವರ ಕ್ರಮ ಸ್ವೀಕಾರಾರ್ಹವಲ್ಲಾ ಎಂದು, ಇನ್ನೂ ಅನೇಕ Observation ಆದೇಶವನ್ನು ಸಸ್ಪೆಂಡ್ ಮಾಡಿತು ಎಂದು ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ವಂಚನೆ ಪ್ರಕರಣದಲ್ಲಿ ನನ್ನ ಬಂಧನವಾಗಿಲ್ಲ ಹಾಗೂ ಆರೋಗ್ಯದ ಹಿನ್ನೆಲೆಯಲ್ಲಿ ನನಗೆ ಜಾಮೀನು ಸಿಕ್ಕಿದ್ದು ಅಲ್ಲಾ. ಇಂತಹ ಪರಿಸ್ಥಿತಿಯಲ್ಲಿ ತನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now