
ಹೂಡೆ : ಜುಲೈ ಒಂದು ವೈದ್ಯರ ದಿನದ ಸುಸಂದರ್ಭದಲ್ಲಿ ಪ್ರತಿಷ್ಠಿತ ತೋನ್ಸೆ ಹೆಲ್ತ್ ಸೆಂಟರ್ ಹೊಡೆ ಇದರ ವತಿಯಿಂದ ಸದ್ಭಾವನಾ ದಿನಾಚರಣೆಯಾಗಿ ಆಚರಿಸಲಾಯಿತು.ಇತ್ತೀಚೆಗೆ ದೆಹಲಿ ಗ್ಲೋಬಲ್ ಎಚಿವರ್ಸ್ ಕೌನ್ಸಿಲ್ ಇವರ ವತಿಯಿಂದ ಭಾರತ ರತ್ನ ಡಾ.ಅಬ್ದುಲ್ ಕಲಾಂ ಸದ್ಭಾವನಾ ಅವಾರ್ಡ್ ನಮ್ಮ ಸಂಸ್ಥೆಯ ಸಂಸ್ಥಾಪಕ ಬಿ.ಎಂ. ಜಾಫರ್ ರವರು ಪಡೆದಿರುವ ಬಗ್ಗೆ ಸಂಭ್ರಮಾಚರಣೆಯೊಂದಿಗೆ ಆಚರಿಸಲಾಯಿತು.
ಸಮಾರಂಭದಲ್ಲಿ ಭಾರತೀಯ ಸೇನಾ ನಿವೃತರಾದ ಮೂರ್ತಿ, ಬೆಂಗಳೂರು ಹಾಗೂ ಕೆಮ್ಮಣ್ಣು ಖಂಡಾಲ ಮನೆಯ ಹಿರಿಯರಾದ ರಘುರಾಮ್ ಶೆಟ್ಟಿಯವರನ್ನು ಬಿ.ಎಂ ಜಾಫರ್ ಹಾಗೂ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಮುಂದಾಳು ಜನಾರ್ಧನ ತೋನ್ಸೆಯವರು ವಹಿಸಿದ್ದು, ಅತಿಥಿಗಳಾಗಿ ಪೆಪ್ಕೋ ಎಂಜಿನಿಯರಿಂಗ್ ಶಾರ್ಜಾ ಇದರ ಮುಖ್ಯಸ್ಥರಾದ ಅಬ್ದುಲ್ ವಾಹಿದ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಮೇಶ್ ತಿಂಗಳಾಯ, ರಮೇಶ್ ಕಾಮತ್ ಮಾಹೆ ಗ್ರೂಪ್, ಕೆಮ್ಮಣ್ಣು ಪಂಚಾಯತ್ ಅಧ್ಯಕ್ಷೆ ಕುಸುಮಾ, ಸೈಮ್ ಗ್ರೂಪಿನ ಎಂಜಿನಿಯರ್ ಇಮ್ತಿಯಾಜ್, ಜಿ.ಅಶ್ರಫ್, ತಾಲೂಕು ಪಂಚಾಯತ್ ಸದಸ್ಯೆ ಸುಲೋಚನಾ, ಡಾ. ವೆಂಕಟೇಶ್ ಬೆಂಗಳೂರು, ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಶ್ರುತ, ಡಾಕ್ಟರ್ ಜುಮಾನಾ ಜಾಫರ್ ಹಾಗೂ ಸಂಸ್ಥೆಯ ಹಿರಿಯ ಲೆಕ್ಕಾಧಿಕಾರಿ ಟಿ.ಅಬ್ಬಾಸ್ ಸಾಹೇಬ್ ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಹರೀಶ್ ಶೆಟ್ಟಿ ಅತಿಥಿಗಳ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು. ದೀಪ್ತಿ ಯವರು ಕಾರ್ಯಕ್ರಮ ನಿರೂಪಿಸಿದರು.
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now