ಶಿರ್ವ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ವಾರ್ಷಿಕ ಮಹಾಸಭೆ ಮತ್ತು ಸಹಮಿಲನ

ಶಿರ್ವ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ವಾರ್ಷಿಕ ಮಹಾಸಭೆ ಮತ್ತು ಸಹಮಿಲನ
0Shares

ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಮಹಾಸಭೆ ಹಾಗೂ ಸಹಮಿಲನವು ಜೂನ್ 14ರಂದು 10 ಕ್ಕೆ ಶಿರ್ವ ಡಾನ್ ಬಾಸ್ಕೋ ಹಾಲಿನಲ್ಲಿ ಪ್ರಾರಂಭಗೊಂಡಿತು. ಪ್ರಾರ್ಥನೆಯ ನಂತರ ನಿಯೋಜಿತ ಅಧ್ಯಕ್ಷರು ಲುವಿಸ್ ರವರು ಎಲ್ಲರನ್ನು ಸ್ವಾಗತಿಸಿದರು ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಡಾ. ಲೆಸ್ಲಿ ಡಿಸೋಜರವರು ಗಿಡಕ್ಕೆ ನೀರು ಹಾಕುವ ಮುಖಾಂತರ ಮಹಾಸಭೆಯನ್ನು ಉದ್ಘಾಟಿಸಿದರು ಸಹ ಕಾರ್ಯದರ್ಶಿ ಸೋನು ಸಿಕ್ವೇರಾ ಹಾಗೂ ಮಾಜಿ ಕಾರ್ಯದರ್ಶಿ ಜೋಯೆಲ್ ಅಲ್ಮೆಡ್ ರವರು 2025- 26 ವರದಿಗಳನ್ನು ವಾಚಿಸಿದರು ಲೆಕ್ಕಪತ್ರವನ್ನು ಖಜಾಂಜಿ ಉರ್ಬನ್ ಲುವಿಸ್ ರವರು ವಾಚಿಸಿದರು ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಸಂಸ್ಥೆಯ ಮಾನಸ ಪಾಂಬೂರು ಇದರ ವರದಿಯನ್ನು ಜಾನ್ ಮಾರ್ಟಿಸ್ ವಾಚಿಸಿದರು ಇತರ ವಿಷಯಗಳು ಇಲ್ಲದಿರುವುದರಿಂದ ವಾರ್ಷಿಕ ಸಭೆಯು ಮುಕ್ತಾಯಗೊಂಡಿತು

ಸಹ ಮಿಲನ
ಕಥೊಲಿಕ್ ಸಭಾ ಉಡುಪಿ ಪ್ರದೇಶ್ 2026-27 ವರ್ಷದ ಡೈರಿಯನ್ನು ಸಂಪಾದಕರಾದ ವಲೇರಿಯನ್ ಫರ್ನಾಂಡಿಸ್ ಹಾಗೂ ಮಾಜಿ ಅಧ್ಯಕ್ಷರು ಎಲ್ರಾಯ್ ಕ್ರಾಸ್ಟ ವೇದಿಕೆಗೆ ತಂದರು ಕಾರ್ಯಕ್ರಮದ ಮುಖ್ಯ ಅತಿಥಿ ಜಾನ್ಸನ್ ಅಲ್ಮೇಡಾ ರವರು ಉದ್ಘಾಟಿಸಿ ಸಂಪಾದಕರನ್ನು ಸನ್ಮಾನಿಸಿದರು ದಿ. ಡೆನಿಸ್ ಡಿಸಿಲ್ವ ಸ್ಮಾರಕ ಲೇಖನ ಸ್ಪರ್ಧೆ ಹಾಗೂ ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪ್ರಶಸ್ತಿಯನ್ನು ಫ್ಲಾವಿಯ ಪುತ್ತೂರು ಇವರಿಗೆ ನೀಡಲಾಯಿತು. ಅತ್ಯಧಿಕ ಕೂಪನ್ ಗಳನ್ನು ಮಾರಿದ ಹಾಗೂ ಅಮ್ಚೊ ಸಂದೇಶ ಪತ್ರಕ್ಕೆ ಹೆಚ್ಚು ಚೆಂದದಾರರನ್ನು ಮಾಡಿದ ಸದಸ್ಯರಿಗೆ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾದ ರೋಸರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಜಾನ್ಸನ್ ಡಿ ಅಲ್ಮೇಡ್ ರವರು ಮಾತನಾಡಿ ನನ್ನ ಮೊದಲ ಸಮಾಜ ಸೇವೆ ಹಾಗೂ ರೋಸರಿ ಸೊಸೈಟಿಯ ಅಧ್ಯಕ್ಷನಾಗಲು ಮೂಲ ಕಾರಣ ಕಥೊಲಿಕ್ ಸಭಾ ಉಡುಪಿ ಪ್ರದೇಶ್ . ನಮ್ಮ ಸದಸ್ಯರು ಚರ್ಚ್ ಮಾತ್ರವಲ್ಲದೆ ಹೊರಗೆ ಸಮಾಜದಲ್ಲಿ, ರಾಜಕೀಯದಲ್ಲಿ, ಉದ್ಯಮದಲ್ಲಿ, ಸೊಸೈಟಿಗಳಲ್ಲಿ, ಸೇವಾ ಸಂಸ್ಥೆಗಳಲ್ಲಿ ಉನ್ನತ ಸ್ಥಾನದಲ್ಲಿರಲು ಕಥೋಲಿಕ್ ಸಭಾ ಒಂದು ಬುನಾದಿ. ಹಿಂದಿನ ವರ್ಷಗಳಲ್ಲಿ ನಡೆದ ಮುಖ್ಯ ಘಟನೆಗಳನ್ನು ನೆನಪಿಸಿಕೊಂಡು ಅವರಿಗೆ ಸಾಮಾಜಿಕ ನ್ಯಾಯ ವನ್ನು ಕಥೊಲಿಕ್ ಸಭಾ ಒದಗಿಸಿ ಕೊಟ್ಟಿದೆ. ಕುಂದಾಪುರದಲ್ಲಿ ರೋಸರಿ ಸೊಸೈಟಿ ಸ್ಥಾಪನೆ ಆಗಲು ಹಾಗೂ ಇವತ್ತಿನವರೆಗೆ ಸಮಾಜದ ಹಿಂದುಳಿದ ವರೆಗೆ ಸಹಾಯ ಮಾಡಲು ಕಥೊಲಿಕ್ ಸಭಾ ಒಂದು ಕಾರಣವಾಗಿದೆ. ಕಥೋಲಿಕ್ ಸಭಾ ಹುಟ್ಟಿಹಾಕಿದ ಸಂಸ್ಥೆಗಳ ಪೈಕಿ ರೋಸರಿ ಸಂಸ್ಥೆ ಕೂಡ ಒಂದು, ಅದರ ಅಧ್ಯಕ್ಷನಾಗಲು ನಾನು ಹೆಮ್ಮೆ ಪಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಗೂ ಉಡುಪಿ ಧರ್ಮಪ್ರಾಂತದ ಯಾವುದೇ ಯೋಜನೆಗಳಿಗೆ ನಮ್ಮ ಸಹಕಾರ ಕೊಡಲು ನಾವು ಸದಾ ತಯಾರಿದ್ದೇವೆ ಎಂದರು

ಉಡುಪಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರು ಡಾ ಲೆಸ್ಲಿ ಡಿಸೋಜರವರು ಈ ಮಹಾಸಭೆಯು ಅತಿ ಉತ್ತಮವಾದ ಶಿಸ್ತಿನ ಕಾರ್ಯಕ್ರಮವಾಗಿದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಅಭಿವೃದ್ಧಿ ಆಗಬೇಕು. ಇಂದಿನ ಯುಗ ಡಿಜಿಟಲ್, ಎಐ ಯುಗ ಆದರೆ ಮನುಷ್ಯನಿಗೆ ಗೌರವ ಸಿಗುತ್ತಿಲ್ಲ ಅದನ್ನು ವೃದ್ಧಿ ಮಾಡಬೇಕು. ನಾವೆಲ್ಲರೂ ದೇವರ ಮಕ್ಕಳು ದೇವರ ಸೇವೆ ಮಾಡಲು ನಮ್ಮೊಂದಿಗೆ ನೀವು ಕೈಜೋಡಿಸಬೇಕು. ಸಮಾಜದಲ್ಲಿ ಹಿಂದುಳಿದವರಿಗೆ ಹಾಗೂ ರಾಜಕೀಯ, ಸಾಮಾಜಿಕ ಸೇವೆಯನ್ನು ಮಾಡಿದ್ದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ಆರೋಗ್ಯವೇ ಭಾಗ್ಯ “ಹೆಲ್ತ್ ಕೇರ್” ಆಗಬೇಕು. ಹಿಂದಿನ ವರ್ಷದಲ್ಲಿ ಸುಮಾರು ಒಂದು ಕೋಟಿಗಿಂತ ಅಧಿಕ ಹಣವನ್ನು ಆರೋಗ್ಯಕ್ಕಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕೊಟ್ಟಿದೆ ಹಾಗೂ ಜೋಸೆಫ್ ಮಿನೇಜಸ್ ರವರು ಜೊತೆಗೆ ಕೈಜೋಡಿಸಿದ್ದಾರೆ ಅವರಿಗೂ ಅಭಿನಂದನೆಯನ್ನು ಸಲ್ಲಿಸಿದರು. ಉಡುಪಿ ಧರ್ಮ ಪ್ರಾಂತ್ಯದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯ ಹಾಗೂ ನರ್ಸಿಂಗ್ ಕಾಲೇಜಿನ ಅಗತ್ಯ ಕೂಡ ಇದೆ. 51 ಚರ್ಚುಗಳಲ್ಲಿ ನಮ್ಮ ಕಥೋಲಿಕ್ ಸಭಾ ಸಂಘಟನೆ ಸಕ್ರಿಯವಾಗಿ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಮಾಜದ ಒಳಿತಿಗಾಗಿ ಕೆಲಸ ಮಾಡಲು ಮುಂದಾಗೋಣ ಎಂದರು

ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾದ ಮೆಲ್ವಿನ್ ಅರನ್ನರವರು ಬಿಷಪ್ ರವರನ್ನು ಸನ್ಮಾನಿಸಿ ಮುಖ್ಯ ಅತಿಥಿ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮುಂದಿನ ವರ್ಷದಲ್ಲಿ ಎಲ್ಲಾ ವಾರಾಡೋ ದಲ್ಲಿ ಕನಿಷ್ಠ 1000 ಲೈಫ್ ಮೆಂಬರ್ ಗಳನ್ನು ಮಾಡಬೇಕೆಂದು ಕರೆಕೊಟ್ಟರು. ಮಹಾಸಭೆಯನ್ನು ನಡೆಸಲು ಸಭಾಂಗಣವನ್ನು ಒದಗಿಸಿದ ಶಾಲೆಯ ಪ್ರಾಂಶುಪಾಲರು ಫಾ. ರಾಲ್ವಿನ್ ಅರನ್ನ ಹಾಗೂ ಸಂಚಾಲಕರು ಫಾ. ಚಾರ್ಲ್ಸ್ ಮಿನೇಜಸ್ ಅವರನ್ನು ಅಭಿನಂದಿಸಿದರು. ಹಾಗೂ ಮುಂದಿನ ವರ್ಷದಲ್ಲಿ ಎಲ್ಲರೂ ಸಹಕಾರ ನೀಡಬೇಕಾಗಿ ಕೇಳಿಕೊಂಡರು. ಪ್ರಧಾನ ಕಾರ್ಯದರ್ಶಿ ಜೂಲಿಯೆಟ್ ಡಿಸೋಜಾ ಧನ್ಯವಾದಗಳು ನೀಡಿ ಭೋಜನಕ್ಕಾಗಿ ಸಭೆಯನ್ನು ಮುಂದೂಡಲಾಯಿತು

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now