
ಉಡುಪಿ: ನನ್ನ ಗಂಡ ಮಾನಸಿಕ ಅಸ್ವಸ್ಥೆಯಿಂದ ಮಕ್ಕಳನ್ನು ಓದಲು ಬಿಡುತ್ತಿಲ್ಲ. ಮನೆಯಲ್ಲಿ ಬಡತನದಿಂದ ಮಕ್ಕಳನ್ನು ನನಗೆ ಶಾಲೆಗೆ ಕಳುಹಿಸಲು ಸಾದ್ಯವಾಗುತ್ತಿಲ್ಲ. ನನ್ನ ಮಕ್ಕಳಿಗೆ ಆಶ್ರಯ ಕಲ್ಪಿಸಿ ಅವರ ಭವಿಷ್ಯಕ್ಕೆ ನೆರವಾಗಿ ಎಂದು ಗೋಗರೆದ ಹೆತ್ತ ತಾಯಿಯ ಕರುಳಿನ ಕೂಗಿಗೆ ಸ್ಪಂದಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಇಬ್ಬರು ಗಂಡು ಮಕ್ಕಳಿಗೆ ಉಡುಪಿಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಿದ್ದು, ಬಾಲಕಿಗೆ ಮಾತ್ರ ಸಮಸ್ಯೆ ಎದುರಾಗಿದೆ.
ಕುಂದಾಪುರ ಮೂಲದ ಈ ಬಡ ಕುಟುಂಬ ಶೋಚನೀಯ ಸ್ಥಿತಿಯಲ್ಲಿದೆ. ಇಬ್ಬರು ಬಾಲಕರಿಗೆ ಉಡುಪಿಯ ಕುಕ್ಕಿಕಟ್ಟೆಯ ವಸತಿ ಶಾಲೆಯಲ್ಲಿ ವಿಶು ಶೆಟ್ಟಿ ಅವರು ನೆಲೆ ಕಲ್ಪಿಸಿದ್ದು, 7ನೇ ತರಗತಿಯ ಬಾಲಕಿಗೆ ಸರ್ಕಾರಿ ನೋಂದಣಿತ ವಸತಿ ಶಾಲೆಗೆ ಸೇರಿಸಲು ಮಕ್ಕಳ ರಕ್ಷಣಾ ಸಮಿತಿಯ ನಿಯಮಾವಳಿಗಳು ತೊಡಕಾಗಿವೆ. ಹೀಗಾಗಿ ಬಾಲಕಿ ಅಳುತ್ತಾ ತಾಯಿಯೊಂದಿಗೆ ವಾಪಸ್ ತೆರಳಿದ್ದಾಳೆ . ಹೀಗಾಗಿ ಬಾಲಕಿಗೆ ತುರ್ತಾಗಿ ಶಿಕ್ಷಣ ಹಾಗೂ ಆಶ್ರಯ ಕಲ್ಪಿಸುವ ಅಗತ್ಯ ಇದೆ ಎಂದು ವಿಶು ಶೆಟ್ಟಿ ಹೇಳಿದ್ದಾರೆ.
ಸರ್ಕಾರಿ ಇಲಾಖೆಗಳು ಇಂತಹ ಪ್ರಕರಣಗಳಲ್ಲಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಅಲ್ಲದೆ ಸಂಘ ಸಂಸ್ಥೆಗಳು ಮಾಡುವ ಕೆಲಸಕ್ಕೂ ಇವರ ನಿಯಮಾವಳಿಗಳು ಅಡ್ಡಿಯನ್ನುಂಟು ಮಾಡುತ್ತಿವೆ ಎಂದು ವಿಶು ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಬಂಧ ಪಟ್ಟ ಇಲಾಖೆಗಳು, ಜನ ಪ್ರತಿನಿಧಿಗಳು ಕೂಡಲೇ ಸ್ಪಂದಿಸಬೇಕು. ಮಕ್ಕಳ ರಕ್ಷಣೆ, ಶಿಕ್ಷಣಕ್ಕೆ ಬೇಕಾದಷ್ಟು ಸರ್ಕಾರಿ ಸೌಲಭ್ಯ ಗಳು ಇದ್ದರೂ, ಅವು ಬಡವರನ್ನು ತಲುಪುತ್ತಿಲ್ಲ. ಈ ಹಿಂದೆ ಬದಾಮಿಯ ಬಾಲಕಿಯನ್ನು ರಕ್ಷಣೆ ಮಾಡಿದಾಗಲೂ ಇಂತಹುದೇ ಸಮಸ್ಯೆ ಬಂದಿತ್ತು.
ಪ್ರಸ್ತುತ ಈ ಬಾಲಕಿ ಹಾಗೂ ಕುಟುಂಬದ ಹಿತ ದೃಷ್ಟಿಯಿಂದ
ಸಮಾಜ ಹಾಗೂ ಇಲಾಖೆ ಕೈ ಜೋಡಿಸುವ ಅವಶ್ಯಕತೆ ಇದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now