
ಮಹಿಳೆಯರ ಮತ್ತು ಮಕ್ಕಳ ಬಗ್ಗೆ ಸದಾ ಸೇವೆಯಲ್ಲಿರುವ ಅಕ್ಕಪಡೆಗೆ ಸಾರ್ವಜನಿಕರು ದಿನಾಂಕ 06/06/26 ರಂದು ಕರೆ ಮಾಡಿ ಕೃಷ್ಣಮಠ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮೂರು ನಾಲ್ಕು ದಿನಗಳಿಂದ ಅಲೆದಾಡುತ್ತಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ. ಅದರಂತೆ ಕೂಡಲೇ ಕಾರ್ಯ ಪ್ರವರ್ತರಾದ ಅಕ್ಕಪಡೆ ಸಿಬ್ಬಂದಿಗಳು ಅಲ್ಲಿಗೆ ಭೇಟಿ ನೀಡಿ ಮಹಿಳೆಯನ್ನು ವಿಚಾರಿಸಿರುತ್ತಾರೆ. ಮಹಿಳೆಯು ತನಗೆ ಯಾರು ಇಲ್ಲ ಮತ್ತು ತಾನು ಕೆಲಸಕ್ಕಾಗಿ ಹುಡುಕುತ್ತಿರುವುದಾಗಿ ತಿಳಿಸಿರುತ್ತಾರೆ. ಆಗ ಆ ಮಹಿಳೆಗೆ ಮಹಿಳಾ ನಿಲಯದಲ್ಲಿ ಆಶ್ರಯ ನೀಡುವುದಾಗಿ ಅಕ್ಕ ಪಡೆ ಸಿಬ್ಬಂದಿಗಳು ತಿಳಿಸಿದಾಗ ಆಕೆ ಒಪ್ಪದೇ ತನಗೆ ಎಲ್ಲಿಯಾದರೂ ಕೆಲಸ ಕೊಡಿಸಬೇಕಾಗಿ ಕೇಳಿಕೊಂಡಿರುತ್ತಾಳೆ.
ಮಹಿಳೆಯ ಮನವಿ ಮೇರೆಗೆ ಅಕ್ಕಪಡೆಯವರು ಉಡುಪಿ ಕೃಷ್ಣ ಮಠದ ಆಡಳಿತ ಕಚೇರಿಯಲ್ಲಿ ವಿಚಾರಿಸಿ, ಮಹಿಳೆಯ ಬಗ್ಗೆ ತಿಳಿಸಿ, ಅಲ್ಲಿ ಆ ಮಹಿಳೆಗೆ ಆಶ್ರಯ ಹಾಗೂ ಉದ್ಯೋಗದ ವ್ಯವಸ್ಥೆ ಮಾಡಿರುತ್ತಾರೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now