ಬಲ್ನಾಡಿನಲ್ಲಿ ವೃದ್ಧೆಯ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಅಶೋಕ್ ರೈ..

ಬಲ್ನಾಡಿನಲ್ಲಿ ವೃದ್ಧೆಯ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಅಶೋಕ್ ರೈ..
0Shares

ಪುತ್ತೂರು:ಬಲ್ನಾಡು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಶಾಸಕ Ashok Kumar Rai ಅವರು ಸ್ಥಳೀಯರ ಮನವಿಯ ಮೇರೆಗೆ ಮಳೆನೀರು ಸಮಸ್ಯೆ ಇರುವ ಪ್ರದೇಶಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವೃದ್ಧೆ ಗಿರಿಜಾ ಅವರ ಮನೆಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿದರು

ಗಿರಿಜಾ ಅವರು ಕಳೆದ 30 ವರ್ಷಗಳಿಂದ ಅದೇ ಮನೆಯಲ್ಲಿ ವಾಸಿಸುತ್ತಿದ್ದು, ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವುದಾಗಿ ಹಾಗೂ ಸರ್ಕಾರದ ಯೋಜನೆಗಳ ನೆರವಿನಿಂದ ಬದುಕು ನಡೆಸುತ್ತಿರುವುದಾಗಿ ಶಾಸಕರಿಗೆ ತಿಳಿಸಿದರು.

ಮನೆಯಲ್ಲಿ ಅಡುಗೆ ಅನಿಲ ಸಂಪರ್ಕ ಇಲ್ಲದಿರುವುದನ್ನು ಗಮನಿಸಿದ ಶಾಸಕ ಅಶೋಕ್‌ ರೈ ಅವರು ಗ್ಯಾಸ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳೀಯರ ಮೂಲಭೂತ ಸಮಸ್ಯೆಗಳನ್ನೂ ಇದೇ ವೇಳೆ ಪರಿಶೀಲಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now