
ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ವ್ಯಕ್ತಿಯೋರ್ವ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೊಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸುದೀರ ಬಂಗೇರ ಎಂದು ತಿಳಿಯಲಾಗಿದೆ.
ಪ್ರಕರಣದ ವಿವರ : ದಿನಾಂಕ 07.06.2026 ರಂದು ಪಿರ್ಯಾದಿ ಸುರೇಶ, ಚೇತನಹಳ್ಳಿ, ಅತ್ತೂರು, ನಿಟ್ಟೆ, ಕಾರ್ಕಳ ಅವರ ಮೊಬೈಲ್ ನಲ್ಲಿ ಇರುವ ಫೇಸು ಬುಕ್ ಖಾತೆ ನೋಡುತ್ತಿರುವಾಗ NAMMA KARLA ಎಂಬ ಹೆಸರಿನ ಪೇಸುಬುಕ್ ಖಾತೆಯಲ್ಲಿ ಮಾನ್ಯ ಕರ್ನಾಟಕ ರಾಜ್ಯ ಗೃಹ ಮಂತ್ರಿಯವರಾದ ಪ್ರಿಯಾಂಕ ಖರ್ಗೆ ಅವರ ಪೋಟೊ ಹಾಕಿ ಅದರಲ್ಲಿ “ಆರ್ ಎಸ್.ಎಸ್ ಇನ್ನು ಎರಡು ವರ್ಷ ಅವಧಿಯಲ್ಲಿ ಕೋಮುವಾದವನ್ನು ಉಸಿರಾಡು ವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ.- ಪ್ರಿಯಾಂಕ ಖರ್ಗೆ ಎಂದು ಬರೆದ ಪೋಸ್ಟ ಇರುತ್ತದೆ, ಈ ಪೋಸ್ಟಗೆ Sudhir Bangera ಎಂಬುವರು ದಿನಾಂಕ 06.06.2026 ರಂದು ಕಮೆಂಟ್ ಹಾಕಿದ್ದು ಅದರಲ್ಲಿ ಅವಹೇಳನಕಾರಿಯಾಗಿ ಒರ್ವ ದಲಿತ ಮಂತ್ರಿಯವರ ವಿರುದ್ದ ಕಮೆಂಟ್ ಹಾಕಿರುತ್ತಾರೆ,
ಆರೋಪಿ ಸುದೀರ ಬಂಗೇರ ಇವರು ಬೇರೆ ಬೇರೆ ಗುಂಪುಗಳ ನಡುವೆ ವೈರತ್ವ, ದ್ವೇಷ ಹಾಗೂ ಅವಮಾನ ಮೂಡಿಸುವ ಕಮೆಂಟ್ನ್ನು ಬರೆದು ಸಾಮಾಜಿಕ ಶಾಂತಿ ಯನ್ನು ಕದಡುವ ಉದ್ದೇಶದಿಂದ ಒರ್ವ ದಲಿತ ಜಾತಿಗೆ ಸೇರಿದ ಕರ್ನಾಟಕ ರಾಜ್ಯದ ಮಾನ್ಯ ಗೃಹ ಮಂತ್ರಿಯವರು ದಲಿತ ಜಾತಿಗೆ ಸೇರಿದವರೆಂದು ತಿಳಿದರು ಕೂಡ ಅವರ ಜಾತಿಗೆ ಅವಹೇಳನ ಮಾಡುವ ರೀತಿಯಲ್ಲಿ ಕಮೆಂಟ್ ಬರೆದು ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಹಾನಿ ಮಾಡುವ ಚಟುವಟಿಕೆಯಲ್ಲಿ ತೊಡಗಿ ದಲಿತ ಮಂತ್ರಿಯವರಿಗೆ ಜಾತಿ ನಿಂದನೇ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ. ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 82/2026 ಕಲಂ. 351(3), 196, 353(2)BNS ಹಾಗೂ 3(1) (r) (u) SC/ST Act ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಆರೋಪಿಯಾದ ಸುದೀರ ಬಂಗೇರ(48), ತಂದೆ: ಭೋಜ ಬಂಗೇರ, ನಲ್ಕೆದ ಬೆಟ್ಟು, ಕೆರ್ವಾಶೆ, ಕಾರ್ಕಳ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now