
ದಿನಾಂಕ 07/06/2025 ರಂದು ಐಸಿವೈಎಂ ಉಡುಪಿ ಘಟಕದ ಯುವಜನರು ಉಡುಪಿ ಜಿಲ್ಲೆಯ ಉಪ್ಪೂರಿನಲ್ಲಿರುವ “ಸ್ಪಂದನ” ವಿಶೇಷ ಬೌದ್ಧಿಕ ಕೇಂದ್ರ (Specially Intellectual Centre) ಗೆ ಭೇಟಿ ನೀಡಿದರು. ಈ ಭೇಟಿ ಪ್ರೀತಿ, ಸಹಾನುಭೂತಿ ಹಾಗೂ ಸಮಾಜಸೇವೆಯ ಮನೋಭಾವದಿಂದ ಕೂಡಿದ ಅರ್ಥಪೂರ್ಣ ಅನುಭವವಾಗಿತ್ತು.
ಸ್ಪಂದನ ಟ್ರಸ್ಟ್ನ ವತಿಯಿಂದ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಅಲ್ಲಿನ ಸದಸ್ಯರು ಮತ್ತು ಸಿಬ್ಬಂದಿಗಳ ಪ್ರೀತಿ, ಆತಿಥ್ಯ ಹಾಗೂ ಸ್ನೇಹಪರ ನಡೆ ನಮ್ಮೆಲ್ಲರ ಮನಸ್ಸಿಗೆ ಸಂತೋಷವನ್ನುಂಟುಮಾಡಿತು. ಈ ಸಂಸ್ಥೆಯ ಸ್ಥಾಪಕರಾದ ಶ್ರೀ ಜನಾರ್ಧನ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ.
ಐಸಿವೈಎಂ ಉಡುಪಿ ಘಟಕದ ಉತ್ಸಾಹಭರಿತ ಯುವಜನರು ಅಲ್ಲಿನ ಮಕ್ಕಳ ಹಾಗೂ ಸದಸ್ಯರೊಂದಿಗೆ ವಿವಿಧ ಮನರಂಜನಾ ಚಟುವಟಿಕೆಗಳು, ಆಟಗಳು ಹಾಗೂ ಸಂವಾದಗಳಲ್ಲಿ ಭಾಗವಹಿಸಿ ಅಮೂಲ್ಯ ಸಮಯವನ್ನು ಕಳೆಯುವ ಮೂಲಕ ಸಂತೋಷ ಹಂಚಿಕೊಂಡರು. ಈ ಸಂದರ್ಭದಲ್ಲಿ ಫಾ. ಲಿಯೋ ಹಾಗೂ ಘಟಕದ ಸಚೇತಕರು ಶ್ರೀ ಜೋಯಲ್ ಸಿಕ್ವೇರಾ ಅವರು ನಮ್ಮೊಂದಿಗೆ ಇದ್ದು ಪ್ರೋತ್ಸಾಹ ನೀಡಿದರು.
ಭೇಟಿಯ ಅಂತ್ಯದಲ್ಲಿ ಐಸಿವೈಎಂ ವತಿಯಿಂದ ಕೆಲವು ಉಡುಗೊರೆ ಹ್ಯಾಂಪರ್ಗಳನ್ನು ಸ್ಪಂದನ ಟ್ರಸ್ಟ್ಗೆ ಹಸ್ತಾಂತರಿಸಲಾಯಿತು. ಈ ಪ್ರೀತಿಪೂರ್ವಕ ಕಾರ್ಯಕ್ಕೆ ಸ್ಪಂದನದ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಮಾಲೀಕರು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಕೊನೆಯಲ್ಲಿ ಎಲ್ಲರೂ ಸೇರಿ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳ ಮೂಲಕ ಸಂತಸದ ಕ್ಷಣಗಳನ್ನು ಹಂಚಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಮಾಪ್ತಿಗೊಳಿಸಲಾಯಿತು.
ಈ ಭೇಟಿ ಕೇವಲ ಒಂದು ಕಾರ್ಯಕ್ರಮವಾಗಿರದೆ, ಪರಸ್ಪರ ಪ್ರೀತಿ, ಸಹಾನುಭೂತಿ ಹಾಗೂ ಮಾನವೀಯ ಮೌಲ್ಯಗಳನ್ನು ಹಂಚಿಕೊಳ್ಳುವ ಸ್ಮರಣೀಯ ಅನುಭವವಾಗಿ ಉಳಿಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now