ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಕೋಸ್ಟಲ್ ಅಧ್ಯಕ್ಷರಾಗಿ ಡಾ. ಚಂದ್ರಶೇಖರ್ ಆಯ್ಕೆ

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಕೋಸ್ಟಲ್ ಅಧ್ಯಕ್ಷರಾಗಿ ಡಾ. ಚಂದ್ರಶೇಖರ್ ಆಯ್ಕೆ
0Shares

ಉಡುಪಿ : ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಏರಿಯ ಸಿ ಯ ಉಡುಪಿ ಕೋಸ್ಟಲ್ ನ 2026-27ನೇ ಸಾಲಿನ ಪದ ಪ್ರಧಾನ ಕಾರ್ಯಕ್ರಮವು ಉಡುಪಿಯ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಎಂ ಆರ್ ಜಯೇಶ ಮಾತನಾಡಿ, ಸೋತೆನೆಂದು ಕುಳಿತುಕೊಳ್ಳಬಾರದು. ಬದಲಾಗಿ ಮರಳಿ ನಮ್ಮ ನಾಯಕತ್ವದ ಪ್ರಯತ್ನವನ್ನು ಮಾಡಬೇಕು. ಅಧಿಕಾರ ಮತ್ತು ಯಶಸ್ಸು ಸಿಕ್ಕಿದಾಗ ಅಹಂ ಪಡೆದೆ ನಿಸ್ವಾರ್ಥವಾಗಿ ಸೇವೆ ಮಾಡಿದರೆ ಸಮಾಜದಲ್ಲಿ ಮುನ್ನಡೆಯಲು ಸಾಧ್ಯ. ಸಮಾಜದಿಂದ ನಾವು ಏನನ್ನು ಪಡೆದಿದ್ದೇವೆ, ಅದನ್ನು ಸಮಾಜಕ್ಕೆ ನಾವು ಕೊಡುವಂತಾಗಬೇಕು ಎಂದರು. ರಾಷ್ಟ್ರೀಯ ಉಪಾಧ್ಯಕ್ಷ ಕುಮಾರ್ ಕೂರ್ಸೆ, ಮ್ಯಾನೇಜ್ಮೆಂಟ್ ವಿಭಾಗದ ನಿರ್ದೇಶಕರಾದ ಸಿದ್ದಗಂಗಯ್ಯ, ತರಬೇತಿ ವಿಭಾಗದ ನಿರ್ದೇಶಕ ಹುಸೇನ್ ಹೈಕಾಡಿ, ಸ್ಥಾಪಕ ಅಧ್ಯಕ್ಷೇ ಮತ್ತು ಹಿರಿಯ ವಕೀಲೆ ಬಿಂದು ತಂಕಪ್ಪನ್, ಯುವ ವಿಭಾಗದ ಅಧ್ಯಕ್ಷ ಮೋಹಿತ್ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ. ಡಾ. ಜಯರಾಮ್ ಶೆಟ್ಟಿಗಾರ್ ದಿಕ್ಸೂಚಿ ಸಂದೇಶ ನೀಡಿದರು.

2026-27ನೇ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಚಂದ್ರಶೇಖರ್ ವಿ ಎಸ್, ನಿಕಟಪೂರ್ವ ಅಧ್ಯಕ್ಷೆ ಜೀನತ್ ರವರಿಂದ ಅಧಿಕಾರ ಸ್ವೀಕರಿಸಿದರು. ನೂತನ ಕಾರ್ಯದರ್ಶಿ ಸುನಂದ ಕೋಶಾಧಿಕಾರಿ, ಮಮತಾ ಅಮೀನ್ ಪ್ರಮಾಣವಚನ ಸ್ವೀಕರಿಸಿ, ಅಧಿಕಾರ ಸ್ವೀಕರಿಸಿದರು. ಎರಡು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಿರ್ಗಮನ ಅಧ್ಯಕ್ಷೆ ಜೀನತ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಸುನಂದ ಧನ್ಯವಾದ ಸಮರ್ಪಿಸಿದರೆ, ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now