ಹಲಸು ಮತ್ತು ಹಣ್ಣು ಮೇಳ’ಕ್ಕೆ ಅದ್ಧೂರಿ ಚಾಲನೆ

ಹಲಸು ಮತ್ತು ಹಣ್ಣು ಮೇಳ’ಕ್ಕೆ ಅದ್ಧೂರಿ ಚಾಲನೆ

0Shares

ಬ್ರಹ್ಮಾವರ: ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಬಾರಕೂರು, ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ 3 ದಿನಗಳ ಕಾಲ ನಡೆಯಲಿರುವ ‘ಹಲಸು ಮತ್ತು ಹಣ್ಣು ಮೇಳ’ಕ್ಕೆ ಚಾಲನೆ ಸಿಕ್ಕಿದೆ.

ಸ್ಥಳೀಯ ಎಸ್‌.ಎಂ.ಎಸ್. ಸಮುದಾಯ ಭವನದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 8 ಗಂಟೆಯವರೆಗೆ ನಡೆಯಲಿರುವ ಈ ಮೇಳವನ್ನು ಬ್ರಹ್ಮಾವರ ರೋಟರಿಯ ಸತೀಶ್‌ ಶೆಟ್ಟಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಮುಖ ಉದ್ಯಮಿ ಹರೀಶ್ ಕುಂದರ್, “ಬ್ರಹ್ಮಾವರದಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಹಲಸು ಮೇಳದ ಪರಿಣಾಮವಾಗಿ, ಹಲಸಿನ ಹಣ್ಣಿಗೆ ಮತ್ತು ಅದರಿಂದ ತಯಾರಾಗುವ ವೈವಿಧ್ಯಮಯ ತಿನಿಸುಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗುರುತು ಸಿಕ್ಕಂತಾಗಿದೆ. ಜನರು ಹಲಸಿನ ವಿಭಿನ್ನ ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸಿಕೊಳ್ಳಲು ಇದು ಅತ್ಯುತ್ತಮ

ರೈತರ ಉತ್ಪನ್ನ ನೇರವಾಗಿ ಗ್ರಾಹಕರಿಗೆ’ ಎಂಬ ಪರಿಕಲ್ಪನೆಯಡಿ ಈ ಮೇಳವನ್ನು ಆಯೋಜಿಸಲಾಗಿದ್ದು, ನೂರಾರು ಸಣ್ಣ ರೈತರು, ಗೃಹ ಉದ್ಯಮಿಗಳು ಭಾಗವಹಿಸಿದ್ದಾರೆ. ಕರಾವಳಿ ಜನರಿಗೆ ಅಪರೂಪ ಎನಿಸುವ ಬಯಲು ಸೀಮೆಯ ಸಿಹಿ ಮಾವು, ವಿವಿಧ ತಳಿಯ ಹಲಸಿನ ಹಣ್ಣುಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇದರೊಂದಿಗೆ ಸ್ಥಳದಲ್ಲೇ ತಯಾರಾಗುವ ಹಲಸಿನ ಹೋಳಿಗೆ, ಹಲಸಿನ ಬಿರಿಯಾನಿ, ವೈವಿಧ್ಯಮಯ ಗೃಹ ಉತ್ಪನ್ನಗಳು, ತರಕಾರಿ ಬೀಜಗಳು, ವಿವಿಧ ತಳಿಯ ಹಣ್ಣು ಹಾಗೂ ಹೂವಿನ ಗಿಡಗಳ ಸಸಿಗಳು ಸಾರ್ವಜನಿಕರ ಖರೀದಿಗೆ ಲಭ್ಯವಿವೆ.

ಕಾರ್ಯಕ್ರಮದಲ್ಲಿ ಬಾರಕೂರು ರೋಟರಿ ಅಧ್ಯಕ್ಷೆ ಕಿಶೋರಿ ಶೆಟ್ಟಿ, ಕೃಷಿ ವಿಜ್ಞಾನ ಕೇಂದ್ರದ ಸುಧೀ‌ರ್ ಕಾಮತ್, ಡಾ. ರೇವಣ್ಣ, ಡಾ. ಧನಂಜಯ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್‌ ಶೆಟ್ಟಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಎಸ್.ಎಂ.ಎಸ್. ಸಮುದಾಯ ಭವನದ ಟ್ರಸ್ಟಿ ಲುಕಾಸ್ ಡಯಾಸ್ ಹಾಗೂ ರೋಟರಿ ಕಾರ್ಯದರ್ಶಿಗಳಾದ ಸುದರ್ಶನ ಉಡುಪಿ ಮತ್ತು ರೆಕ್ಸನ್ ಮೋನಿಸ ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now