
ಪುತ್ತೂರು ಸಮೀಪದ ನೆಲ್ಲಿಕಟ್ಟೆ ನಿವಾಸಿ ಶ್ರೀಕಾಂತ್ ಹೆಗ್ಡೆ (39) ಅವರು ಅಲ್ಪಕಾಲದ ಅನಾರೋಗ್ಯದಿಂದ ಮೇ 20ರಂದು ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಹಲವು ವರ್ಷಗಳ ಕಾಲ ಉರ್ಲಾಂಡಿಯಲ್ಲಿ ವಾಸವಿದ್ದ ಅವರು ಕಳೆದ 11 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದರು. ಕೆಲಕಾಲದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಕಾಂತ್ ಚಿಕಿತ್ಸೆಗಾಗಿ ಊರಿಗೆ ಆಗಮಿಸಿದ್ದರು. ಚಿಕಿತ್ಸೆ ಬಳಿಕ ಗುಣಮುಖರಾಗಿ ಮತ್ತೆ ದುಬೈಗೆ ತೆರಳಿದ್ದರೂ, ಬಳಿಕ ಕಾಯಿಲೆ ಮರುಕಳಿಸಿತು. ಇದರಿಂದ ಮತ್ತೆ ಊರಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 20ರಂದು ಕೊನೆಯುಸಿರೆಳೆದರು.
ಮೃತರು ತಂದೆ ಉಮೇಶ್, ತಾಯಿ ವನಿತಾ, ಸಹೋದರರಾದ ಅವಿನಾಶ್ ಮತ್ತು ಸಂದೀಪ್, ಸಹೋದರಿ ಕವಿತಾ, ಪತ್ನಿ ಶ್ರೀಮಾ, ಪುತ್ರಿ ನಿಧಿಮಾ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now