ಕಾರ್ಕಳದಲ್ಲಿ ಜಮೀನು ತಕರಾರು: ತಮ್ಮನಿಂದಲೇ ಅಣ್ಣನ ಹತ್ಯೆ, ಆರೋಪಿ ಸಹೋದರನ ಬಂಧನ

ಕಾರ್ಕಳದಲ್ಲಿ ಜಮೀನು ತಕರಾರು: ತಮ್ಮನಿಂದಲೇ ಅಣ್ಣನ ಹತ್ಯೆ, ಆರೋಪಿ ಸಹೋದರನ ಬಂಧನ

0Shares

ರಿಚರ್ಡ್‌ ಡಿಸೋಜ ಮತ್ತು ಅವರ ತಮ್ಮ ಹೆರಾಲ್ಡ್‌ ಡಿಸೋಜರವರಿಗೆ ಕಾರ್ಕಳ ತಾಲೂಕು ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ವಾಸ ಇರುವ ಮನೆಯ ಬಗ್ಗೆ ಹಾಗೂ ಜಾಗದ ಬಗ್ಗೆ ತಕರಾರು ಇದ್ದು, ಇದೇ ವಿಚಾರಕ್ಕೆ ಸಂಬಂದಿಸಿ ದಿನಾಂಕ 02-05-2026 ರಂದು ಸಂಜೆ ಸುಮಾರು 6 ಗಂಟೆಗೆ ಕಾರ್ಕಳ ತಾಲೂಕು ಕಾರ್ಕಳ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿನ ಜಾಗದಲ್ಲಿ ಹೆರಾಲ್ಡ್‌ ಡಿಸೋಜ ಮತ್ತು ರಿಚಾರ್ಡ್‌ ಡಿಸೋಜ ಇವರೊಳಗೆ ಗಲಾಟೆ ಆಗಿದ್ದು, ಆ ಸಮಯದಲ್ಲಿ ಆರೋಪಿ ಹೆರಾಲ್ಡ್‌ ಡಿ ಸೋಜನು ರಿಚಾರ್ಡ್‌ ಡಿಸೋಜರವರಿಗೆ ಮರದ ರೀಪು ಅಥವಾ ಯಾವುದೋ ಆಯುಧದಿಂದ ಹೊಡೆದು ಕೊಲೆ ಮಾಡಿರುವುದಾಗಿದೆ ಎಂದು ಮೃತರ ಹೆಂಡತಿ ಜೆಸಿಂತ ಡಿಸೋಜ ಇವರು ದಿನಾಂಕ 03-05-2026 ರಂದು ನೀಡಿದ ಪಿರ್ಯಾದಿಯಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 64/2026 ಕಲಂ. 103 ಬಿ.ಎನ್‌.ಎಸ್‌ ರಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣ ಆರೋಪಿತನಾದ ಹೆರಾಲ್ಡ್‌ ಡಿಸೋಜ ಎಂಬಾತನನ್ನು ಡಿವೈಎಸ್‌ ಪಿ ವಿಜಯಪ್ರಸಾದ್‌. ಕೆ.ಎಸ್.ಪಿಎಸ್ ರವರ ಮಾರ್ಗದರ್ಶನದಂತೆ ಸಿಪಿಐ ಅಜ್ಮತ್‌ ಆಲೀ ಪ್ರಭಾರ ಪಿ.ಐ ಕಾರ್ಕಳ ನಗರ ಠಾಣೆ, ಪಿಎಸ್‌ ಐ ಪ್ರಸನ್ನ.ಎಂ.ಎಸ್‌ ಕಾರ್ಕಳ ಗ್ರಾಮಾಂತರ ಠಾಣೆ, ಪಿಎಸ್‌ ಐ ಮುರುಳೀಧರ್‌ ನಾಯ್ಕ್‌ ಹಾಗೂ ಪಿಎಸ್‌ ಐ ಶಿವಕುಮಾರ್‌ ಕಾರ್ಕಳ ನಗರ ಠಾಣೆ ಹಾಗೂ ಸಿಬ್ಬಂದಿಗಳಾದ ಎಎಸ್‌ ಐ ಶೇಖರ್‌ ನಾಯ್ಕ, ಎಎಸ್‌ ಐ ಮೂರ್ತಿ, ರಂಜಿತ್‌, ಶ್ರೀನಿವಾಸ್‌, ಮಹಾಂತೇಶ್‌, ಗೋಪಾಲಕೃಷ್ಣ, ಗಜಾನಾಯ್ಕ್‌, ಶಶಿ, ಸಂತೋಷ ಇವರುಗಳು ಆರೋಪಿಯನ್ನು ಪತ್ತೆಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು .

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now