
ದಿನಾಂಕ: 31/03/2026 ರಂದು 20.15 ಗಂಟೆಗೆ ರಾಮ ಮಡಿವಾಳ, ದಾಸರಮಕ್ಕಿ, ಕುಂದಾಪುರ ತಾಳೂಕು ರವರು ಠಾಣೆಗೆ ಬಂದು ಅವರ ತಮ್ಮ ಲಕ್ಷ್ಮಣ ಎಂಬವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಆಸ್ಪತ್ರೆಯ ಹೊರಬದಿಯ ಕ್ಯಾಂಟಿನಿನಲ್ಲಿ ಪಿರ್ಯಾದಿದಾರರು ಹಾಗೂ ಅವರ ಅಣ್ಣ ರಾಜೇಶ್ ಮತ್ತು ಸುಧೀರ್ ಎಂಬವರು ಟೀ ಕುಡಿಯುತ್ತಿರುವಾಗ ಮದ್ಯಾಹ್ನ 12:15 ಗಂಟೆಗೆ ಒಂದು ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸೈಲ್ಟಾಸ್ ಕಾರಿನಲ್ಲಿ ಏಳೆಂಟು ಜನ ಪಿರ್ಯಾದಿದಾರರ ಅಣ್ಣನಲ್ಲಿದ್ದಲ್ಲಿಗೆ ಬಂದು ಏಕಾಏಕಿ ಹಿಡಿಯಲು ಹೋದಾಗ ಪಿರ್ಯಾದಿದಾರರ ಅಣ್ಣ ತಪ್ಪಿಸಿಕೊಂಡರು ಸಹ ಅವರುಗಳು ಆತನನ್ನು ಹಿಡಿದು ಕಾರಿನಲ್ಲಿ ಕುರಿಸಿಕೊಂಡು ಮಣಿಪಾಲದಿಂದ ಹಿರಿಯಡ್ಕ ಕಡೆ ರಸ್ತೆಯಲ್ಲಿ ಹೋಗಿರುತ್ತಾರೆ. ಸದ್ರಿ ಕಾರಿನಲ್ಲಿ ಬಂದ ವ್ಯಕ್ತಿಗಳು ಪಿರ್ಯದಿದಾರರ ಅಣ್ಣನಾದ ರಾಜೇಶ್ ನೊಂದಿಗೆ ಈ ಹಿಂದೆ ವ್ಯವಹಾರದ ವಿಷಯದಲ್ಲಿ ಮನೆಗೆ ಬಂದಿದ್ದು ಅವರ ಹೆಸರು 1.ಮಲ್ಲಾರೆಡ್ಡಿ 2.ತುಳಜಾ 3.ನರಸಿಂಗ 4.ಹುಸೇನ್ 5.ಶಂಕರ 6.ನಾಗೇಶ್ 7.ಪರಮೇಶ್ವರ್ 8.ವಿಜಯ್ ಎಂಬುವರಾಗಿದ್ದು ಪರಿಚಯವಿದ್ದು ಅವರೊಳಗಿನ ತೆಲಂಗಾಣದಲ್ಲಿರುವ ವ್ಯವಹಾರದ ವಿಷಯದಲ್ಲಿ ಪಿರ್ಯಾದಿದಾರರ ಅಣ್ಣನನ್ನು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣವನ್ನು ಪತ್ತೆ ಹಚ್ಚುವ ಸಲುವಾಗಿ ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಹೇಶ ಪ್ರಸಾದ್ ರವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣಾ ಪಿಎಸ್ ಐ ತಿಮ್ಮೇಶ್ ಬಿ ಎನ್, ಉಡುಪಿ ಸೈಬರ್ ಪೊಲೀಸ್ ಠಾಣಾ ಪಿ.ಎಸ್.ಐ ಸುದರ್ಶನ್ ದೊಡ್ಡಮನಿ ಹಾಗೂ ಠಾಣಾ ಅಪರಾಧ ಸಿಬ್ಬಂದಿಗಳಾದ ಎಎಸ್‌ಐ ವಿವೇಕಾನಂದ, ಹೆಚ್‌ಸಿ ಮಹಮ್ಮದ್ ಅಜ್ಮಲ್ ಹೈಕಾಡಿ, ಹೆಚ್‌ಸಿ ಚೇತನ್ ಮಲ್ಪೆ ಠಾಣಾ ಹೆಚ್‌ಸಿ ಲೋಕೇಶ್, ಉಡುಪಿ ನಗರ ಠಾಣಾ ಪಿಸಿ ಶಿವಕುಮಾರ್, ಬ್ರಹ್ಮಾವರ ಪೊಲೀಸ್ ಠಾಣಾ ಪಿಸಿ ಕಿರಣ್, ಮಣಿಪಾಲ ಠಾಣಾ ಪಿಸಿ ತಿಮ್ಮಯ್ಯ ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದು, ಆರೋಪಿತರ ಪತ್ತೆಯ ಬಗ್ಗೆ ಪಿಎಸ್‌ಐ ಸುದರ್ಶನ್ ನೇತೃತ್ವದಲ್ಲಿ ತೆಲಂಗಾಣ ರಾಜ್ಯದ ಜಗತಿಹಾಳ್ ಜಿಲ್ಲೆಯ ಮುಖ್ಯ ರಸ್ತೆ ಕರಿಂ ನಗರದ ಗೋವಿಂದಪಲ್ಲಿ ಎಂಬಲ್ಲಿ ಸಿಲ್ವರ್ ಸ್ಕೈ ಲಾಡ್ಜ ನಂ 301, ಮತ್ತು 302 ರಲ್ಲಿ ದಿನಾಂಕ 9-4-2026 ರಂದು ಮುಂಜಾನೆ 3.30 ಗಂಟೆಗೆ ಆರೋಪಿತರನ್ನು ದಸ್ತಗಿರಿ ಮಾಡಿ ನಂತರ ಅಪಹರಣ ಕೃತ್ಯಕ್ಕೆ ಉಪಯೋಗಿಸಿದ TG 05 C 1716 ನೇ ಕಪ್ಪು ಬಣ್ಣದ ಕಾರು ಬಣ್ಣದ ಕಿಯಾ ಕರೆನ್ಸ್ ಕಾರು ಮತ್ತು ನಂಬ್ರ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಮಹಿಂದ್ರ ಥಾರ್ ಕಾರನ್ನು ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪತ್ತೆ ಹಚ್ಚಿ ರಕ್ಷಿಸಿರುವುದಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now