
ಬಂಟ್ವಾಳ ತಾಲ್ಲೂಕಿನ ಬೊರಿಮಾರ್ನ ಸಂತ ಜೋಸೆಫ್ ಚರ್ಚ್ನಲ್ಲಿ ಪವಿತ್ರ ಗುಡ್ ಫ್ರೈಡೇ ಪ್ರಯುಕ್ತ ಭಕ್ತಿಭಾವದಿಂದ ವಿಶೇಷ ಕಾರ್ಯಕ್ರಮಗಳು ನೆರವೇರಿದವು. ಈ ಸಂದರ್ಭದಲ್ಲಿ ಪ್ರಭು ಯೇಸು ಕ್ರಿಸ್ತರ ಪಾರ್ಥಿವ ಶರೀರದ ಮೆರವಣಿಗೆ ಹಾಗೂ ಜಗತ್ತಿನ ಶಾಂತಿಗಾಗಿ ಮೊಂಬತ್ತಿ ಹಿಡಿದು ಮೌನ ಮೆರವಣಿಗೆ ಆಯೋಜಿಸಲಾಯಿತು.
ಭಕ್ತರು ಮೊಂಬತ್ತಿಗಳನ್ನು ಹಿಡಿದು ಶಾಂತಿಯ ಸಂಕೇತವಾಗಿ ಮೌನವಾಗಿ ಸಾಗಿದ್ದು, ಪ್ರಭು ಯೇಸು ಕ್ರಿಸ್ತರ ತ್ಯಾಗ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದರು. ಈ ಮೆರವಣಿಗೆ ಭಕ್ತಿಭಾವ ಮತ್ತು ಶ್ರದ್ಧೆಯಿಂದ ಕೂಡಿತ್ತು.
ಈ ವೇಳೆ ಚರ್ಚ್ ಪರಿಸರದಲ್ಲಿ ಇತರ ಧರ್ಮೀಯರು ಸಹ ಸಹಕರಿಸಿ, ಕ್ರೈಸ್ತರ ಭಕ್ತಿಗೆ ಗೌರವ ಸಲ್ಲಿಸಿದದ್ದು ವಿಶೇಷವಾಗಿತ್ತು. ಮೆರವಣಿಗೆ ಶಾಂತಿಯುತವಾಗಿ ಸಾಗಿದ್ದು, ಸಮಸ್ತ ಜನರಲ್ಲಿ ಸೌಹಾರ್ದ ಮತ್ತು ಏಕತೆ ಸಂದೇಶವನ್ನು ಹರಡಿತು.




ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ ಉದ್ಯಾವರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now