
ಕಾರ್ಕಳ : ಹೆತ್ತವರು ಮಕ್ಕಳ ಸಾಧನೆಯಲ್ಲಿ ಸಂತೃಪ್ತಿ ಕಾಣುವರು. ಆ ತೃಪ್ತಿ, ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನಿವೃತ್ತ ಮುಖ್ಯಶಿಕ್ಷಕ ಸಂಜೀವ ದೇವಾಡಿಗ ಅಭಿಪ್ರಾಯಪಟ್ಟರು.
ಅವರು ಮಾ. 28ರಂದು ಕೆಎಂಇಎಸ್ ವಿದ್ಯಾ ಸಂಸ್ಥೆಯಲ್ಲಿ ಯುಕೆಜಿ ಮಕ್ಕಳ ಗ್ರಾಜ್ಯುವೇಶನ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಎಂಇಎಸ್ ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಸಾಧಕರನ್ನು ಸೃಷ್ಟಿಸಿದ್ದು ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಐಎಎಸ್, ಡಾಕ್ಟರ್, ಇಂಜಿನೀಯರ್, ಲೆಕ್ಕಪರಿಶೋಧಕರು ಆಗಿರುವುದೇ ಇದಕ್ಕೆ ಸಾಕ್ಷಿ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಇಮ್ಮಿಯಾಜ್ ಮಾತನಾಡಿ, ಕೆಎಂಇಎಸ್ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಸ್ಮರ್ಧಾತ್ಮಕ ಪರೀಕ್ಷೆ, ಮೆಡಿಕಲ್, ಇಂಜಿನಿಯರಿಂಗ್, ಕ್ರೀಡಾ ವಿಭಾಗದಲ್ಲಿ ಸಾಧನೆ ತೋರಿದ ಹಲವಾರು ವಿದ್ಯಾರ್ಥಿಗಳಿದ್ದಾರೆ ಎಂದರು.
ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ಮಾತನಾಡಿ, ಹೆತ್ತವರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿ, ಗುರಿಯ ಕುರಿತು ಅರಿಯಬೇಕು. ಬಾಲ್ಯದಲ್ಲಿಯೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅವಶ್ಯವೆಂದರು.
ಸನ್ಮಾನ
ಸಿಎ ಪರೀಕ್ಷೆಯನ್ನು ಪಾಸ್ ಮಾಡಿರುವ ಕೆಎಂಇಎಸ್ ಹಿರಿಯ ವಿದ್ಯಾರ್ಥಿಗಳಾದ ಕು. ಕಾನ್ವಾ ಮತ್ತು ಕು. ರಕ್ಷಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಲೊಲಿಟಾ ಡಿ’ಸಿಲ್ವ ಸ್ವಾಗತಿಸಿ, ಎಲ್ವಿನಾ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಜಾಕೀರ್ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now