ಮೂಡುಬೆಳ್ಳೆ ಲಯನ್ಸ್ ಕ್ಲಬ್‌ನಿಂದ ಸ್ವಾತಂತ್ರ್ಯ ದಿನ, ವನಮಹೋತ್ಸವ ಮತ್ತು ಆಟಿಡೊಂಜಿ ಸಂಭ್ರಮ

ಮೂಡುಬೆಳ್ಳೆ ಲಯನ್ಸ್ ಕ್ಲಬ್‌ನಿಂದ ಸ್ವಾತಂತ್ರ್ಯ ದಿನ, ವನಮಹೋತ್ಸವ ಮತ್ತು ಆಟಿಡೊಂಜಿ ಸಂಭ್ರಮ
0Shares

ಮೂಡುಬೆಳ್ಳೆ, ಆಗಸ್ಟ್ 15: ಮೂಡುಬೆಳ್ಳೆ ಲಯನ್ಸ್ ಕ್ಲಬ್ ವತಿಯಿಂದ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ವನಮಹೋತ್ಸವ ಹಾಗೂ ‘ಆಟಿಡೊಂಜಿ ದಿನ’ ಕಾರ್ಯಕ್ರಮಗಳೊಂದಿಗೆ ಆಗಸ್ಟ್ 15 ರಂದು ಅತ್ಯಂತ ಉತ್ಸಾಹ ಮತ್ತು ದೇಶಭಕ್ತಿಯಿಂದ ಆಚರಿಸಲಾಯಿತು.

ಸಮಾರಂಭವು ಬೆಳಿಗ್ಗೆ 7:00 ಗಂಟೆಗೆ ಲಯನ್ಸ್ ಸೇವಾ ಭವನದಲ್ಲಿ ಪ್ರಾರಂಭವಾಯಿತು. ಲಯನ್ಸ್ ಕ್ಲಬ್ ಮೂಡುಬೆಳ್ಳೆಯ ಅಧ್ಯಕ್ಷರಾದ ಲಯನ್ ವಿವೇಕ್ ಪೈ ಅವರು ಧ್ವಜಾರೋಹಣ ನೆರವೇರಿಸಿ, ಬ್ರಿಟಿಷ್ ಆಡಳಿತದಿಂದ ದೇಶಕ್ಕೆ ಸ್ವಾತಂತ್ರ್ಯ ತರಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಧೀರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ನಂತರ, ಸದಸ್ಯರು ಲಯನ್ಸ್ ಸೇವಾ ಭವನದಲ್ಲಿ ಮಾವಿನ ಸಸಿಯನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಿದರು. ಪರಿಸರ ಸಂರಕ್ಷಣೆ ಮತ್ತು ಹಸಿರು-ಆರೋಗ್ಯಕರ ಭವಿಷ್ಯವನ್ನು ನಿರ್ಮಿಸುವಲ್ಲಿ ಕ್ಲಬ್ ಹೊಂದಿರುವ ಬದ್ಧತೆಯನ್ನು ಈ ಕಾರ್ಯಕ್ರಮವು ಎತ್ತಿಹಿಡಿಯಿತು.

ಲಯನ್ಸ್ ಕ್ಲಬ್ ಮೂಡುಬೆಳ್ಳೆ ವತಿಯಿಂದ ಆಟಿಡೊಂಜಿ ದಿನ

ಮೂಡುಬೆಳ್ಳೆ ಲಯನ್ಸ್‌ ಕ್ಲಬ್ ವತಿಯಿಂದ, ಸ್ವಾತಂತ್ರ್ಯೋತ್ಸವ ದಿನದಂದು ಸಾಯಂಕಾಲ 7:00 ಗಂಟೆಗೆ ಲಯನ್ಸ್‌ ಸೇವಾ ಭವನದಲ್ಲಿ ಅದ್ಧೂರಿಯಾಗಿ ಆಟಿಡೊಂಜಿ ದಿನ ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾದ MJF Lion ರಿಶಿಕೇಶ್ ಹೆಗ್ಡೆ ಸಾಂಪ್ರದಾಯಿಕ ತುಳುವಿನ ಪದ್ಧತಿ ಬಗ್ಗೆ, ಆಟಿಯ ತಿಂಡಿ ತಿನಸುಗಳ ಬಗ್ಗೆ, ಆರೋಗ್ಯವನ್ನು ವೃದ್ಧಿಸುವ ತಿಂಡಿ ತಿನಸುಗಳ ಬಗ್ಗೆ ತಿಳಿ ಹೇಳಿದರು. ಇಂದಿನ ಪೀಳಿಗೆಗೆ ಆಟಿಯ ಸೊಬಗನ್ನು ಪರಿಚಯಿಸಿದ ಲಯನ್ಸ್ ಕ್ಲಬ್ ಮೂಡುಬೆಳ್ಳೆಗೆ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸ್ಟೀಫನ್ ಫೆರ್ನಾಂಡಿಸ್‌ ಹಾಗೂ ಎನ್ ನೊರೊನ್ನಾರವರನ್ನು ಹೊಸ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು. ಮೂಡುಬೆಳ್ಳೆ ಲಯನ್ಸ್‌ ಕ್ಲಬ್ ಒಂದು ಮಾದರಿ ಕ್ಲಬ್, 2025-26 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 10ನೇ ಸ್ಥಾನ ಪಡೆದುಕೊಂಡು ಸಮಾಜಸೇವೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದರು.

ಸಭಾಕಾರ್ಯಕ್ರಮದಲ್ಲಿ ಲಯನ್ಸ್‌ ಸದಸ್ಯರು ಸಾಂಪ್ರದಾಯಿಕ ಬಟ್ಟೆಯನ್ನು ಉಟ್ಟುಕೊಂಡು, 40 ಬಗೆಯ ಆಟಿಯ ತಿಂಡಿ ತಿನಸುಗಳನ್ನು ಮನೆಯಲ್ಲಿಯೇ ಮಾಡಿ ತಂದಿದ್ದರು. ವೇದಿಕೆಯಲ್ಲಿ ವಲಯಾಧ್ಯಕ್ಷರಾದ MJF ಲವೀನ ಬರ್ಬೊಜ, ಲೀಯೊ ಅಧ್ಯಕ್ಷರಾದ ಅಜಯ್ ಪೈ, ಕಾರ್ಯದರ್ಶಿ ಐವನ್ ಮಿನೇಜಸ್, ಖಜಾಂಜಿಯಾದ ಡೆನಿಸ್ ಮಾರ್ಟಿಸ್ ಹಾಜರಿದ್ದರು. ಅಧ್ಯಕ್ಷರಾದ ಲಯನ್ ವಿವೇಕ್ ಪೈ ಸ್ವಾಗತಿಸಿ, ಲಯನ್ ದೇವದಾಸ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now