
ಬ್ರಹ್ಮಾವರ: ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರದ ಐ.ಕ್ಯೂ.ಎ.ಸಿ (IQAC), ಮಹಿಳಾ ವೇದಿಕೆ ಹಾಗೂ ಜೈಂಟ್ ಗ್ರೂಪ್ ಬ್ರಹ್ಮಾವರ ಇವರ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದಲ್ಲಿ ತಮ್ಮ ಪರಿಶ್ರಮದ ದುಡಿಮೆಯಿಂದ ಸ್ವಾವಲಂಬಿ ಬದುಕನ್ನು ನಡೆಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. ರಿಕ್ಷಾ ಚಾಲಕಿಯಾಗಿ ದುಡಿಯುತ್ತಿರುವ ಶ್ರೀಮತಿ ಮನಿಷಾ, ಕೂಲಿ ಕಾರ್ಮಿಕೆಯಾಗಿರುವ ಶ್ರೀಮತಿ ಅಕ್ಕಣಿ ಮರಕಲ್ತಿ ಹಾಗೂ ಕೂಡುಕುಟುಂಬದ ಮುಖ್ಯಸ್ಥೆಯಾಗಿರುವ ಶ್ರೀಮತಿ ಶಶಿಕಲಾ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತವಾಗಿ ಹಣ ಸಂಗ್ರಹಿಸಿ ಆರಂಭಿಸಿರುವ “ಹೆಣ್ಣಿಂದ ಹೆಣ್ಣಿಗಾಗಿ” ಎಂಬ ಯೋಜನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಜೆ. ಹಾಗೂ ಮಹಿಳಾ ವೇದಿಕೆಯ ಸಂಚಾಲಕರು ಉದ್ಘಾಟಿಸಿದರು. ಪ್ರತಿವರ್ಷ ಈ ಯೋಜನೆಯ ಮೂಲಕ ಸಂಗ್ರಹವಾಗುವ ಹಣವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರ ವೈದ್ಯಕೀಯ ನೆರವಿಗಾಗಿ ಬಳಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಜೆ. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೈಂಟ್ ಗ್ರೂಪ್ ಬ್ರಹ್ಮಾವರದ ಅಧ್ಯಕ್ಷರಾದ ಶ್ರೀ ಅಣ್ಣಯ್ಯ ದಾಸ್ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಿವೇಕ್ ಕಾಮತ್ ಮತ್ತು ಶ್ರೀಮತಿ ಪ್ರತಿಭಾ ಉಪಸ್ಥಿತರಿದ್ದರು.
ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕರಾದ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ, ಮಹಿಳಾ ವೇದಿಕೆಯ ಸಲಹೆಗಾರರಾದ ಡಾ. ವಿದ್ಯಾಲತಾ, ವಿದ್ಯಾರ್ಥಿ ಉಪನಾಯಕಿ ಕುಮಾರಿ ಸೃಷ್ಟಿ ಹಾಗೂ ಮಹಿಳಾ ವೇದಿಕೆಯ ಕಾರ್ಯದರ್ಶಿ ಕುಮಾರಿ ಅಮೃತಾ ಸೇರಿದಂತೆ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now