
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ ಇದರ ಆಡಳಿತ ಮಂಡಳಿ ಸದಸ್ಯರು ದಿನಾಂಕ 21-02-2026 ರಂದು ಕೊಡಗು ಡಿ.ಸಿ.ಸಿ ಬ್ಯಾಂಕಿಗೆ ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದು,ಈ ಸಂದರ್ಭ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಕೆ.ಪಿ.ಗಣಪತಿ ಯವರು ಎಲ್ಲರನ್ನೂ ಸ್ವಾಗತಿಸುವುದರೊಂದಿಗೆ 1921 ನೇ ಇಸವಿಯಂದು ಕೊಡಗಿನ ಹಿರಿಯ ಸಹಕಾರಿಗಳಾದ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯನವರ ಅಧ್ಯಕ್ಷತನದಲ್ಲಿ ಆರಂಭವಾದ ಸಂಸ್ಥೆ 106ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು,ಹಲವು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿ 26 ಶಾಖೆಗಳನ್ನು ಹೊಂದಿದ್ದು ಅದರಲ್ಲಿ 11 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಕುರಿತು,ಕಳೆದ ಆರ್ಥಿಕ ವರ್ಷಾಂತ್ಯಕ್ಕೆ ರೂ.3,372.12 ಕೋಟಿ ವ್ಯವಹಾರವನ್ನು ನಡೆಸಿರುವ ಕುರಿತು ಮತ್ತು ಬ್ಯಾಂಕಿನ ಕುರಿತು ಇತರ ಎಲ್ಲಾ ಮಾಹಿತಿಯನ್ನು ನೀಡಿದರು.
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ ಇದರ ಅಧ್ಯಕ್ಷರಾದ ಶ್ರೀ ಲೂವಿಸ್ ಲೋಬೋ ರವರು ಸಂಸ್ಥೆಯ ಕುರಿತು ಪ್ರಾಸ್ತವಿಕ ಮಾತನಾಡಿ ಮುಂದಿನ ಯೋಜನೆಗಳ ಕುರಿತು ತಿಳಿಸಿದರು.ನಂತರ ಕೊಡಗು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಕೆ.ಪಿ.ಗಣಪತಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಾದ ಶ್ರೀ ಎಮ್.ಕೆ,ಬೆಳ್ಳಿಯಪ್ಪ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಸಂಘದ ನಿರ್ದೇಶಕರಾದ ಡಾ//ನೇರಿ ಕರ್ನೆಲಿಯೋ ರವರು ಶುಭ ನುಡಿಯನ್ನಾಡಿದರು. ಸಹಕಾರ ಕ್ಷೇತ್ರದ ಕುರಿತು ಅದೇ ರೀತಿ ಸಂಘದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಎಲ್ಲಾ ಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲಾಯಿತು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಾದ ಶ್ರೀ ಎಮ್.ಕೆ,ಬೆಳ್ಳಿಯಪ್ಪರವರು ಧನ್ಯವಾದವನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕೊಡಗು ಡಿ.ಸಿ.ಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ಶ್ರೀಮತಿ ಜಿ.ಎಂ.ಭೋಜಮ್ಮರವರು,ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ಅಧ್ಯಯನ ಪ್ರವಾಸದ ಮೇಲುಸ್ತುವಾರಿಯನ್ನು ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷ್ಯರಾದ ಶ್ರೀ ಲೂವಿಸ್ ಲೋಬೊರವರು ನಿರ್ವಹಿಸಿದ್ದು ತಂಡದಲ್ಲಿ ಉಪಾಧ್ಯಕ್ಷರಾದ ಶ್ರೀ ಜೇಮ್ಸ್ ಡಿ’ಸೋಜ,ನಿರ್ದೇಶಕರಾದ ಡಾ//ನೇರಿ ಕರ್ನೆಲಿಯೋ,ಶ್ರೀಮತಿ ಲೋಯ್ಸೆಟ್ ಕರ್ನೆಲಿಯೋ,ಶ್ರೀ ರಿಚರ್ಡ್ ಡಾಯಸ್,ಶ್ರೀ ಮಾಕ್ಸೀಂ ಡಿ’ಸೋಜ,ಶ್ರೀ ಓನಿಲ್ ಡಿ’ಸೋಜ ಮತ್ತು ಶ್ರೀಮತಿ ಜೆನಿವಿವ್ ಮಿನೇಜಸ್ ರವರು ಉಪಸ್ಥಿತ ರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now