ಉಪ್ಪೂರು 1ನೇ ವಾರ್ಡ್ ಅಭಿವೃದ್ಧಿ ಸಮಿತಿವಿದ್ಯಾರ್ಥಿವೇತನ, ಪ್ರೋತ್ಸಾಹಧನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

ಉಪ್ಪೂರು 1ನೇ ವಾರ್ಡ್ ಅಭಿವೃದ್ಧಿ ಸಮಿತಿವಿದ್ಯಾರ್ಥಿವೇತನ, ಪ್ರೋತ್ಸಾಹಧನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ
0Shares

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಮ್ಮ ವಾರ್ಡಿನಲ್ಲಿ ಪ್ರತಿಭಾನ್ವಿತರಾಗಿ ಚಿಗುರೊಡೆಯುತ್ತಿರುವ ಮಕ್ಕಳ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿ, 2025-26 ಶೈಕ್ಷಣಿಕ ವರ್ಷದಲ್ಲಿ SSLC ಮತ್ತು ದ್ವೀತಿಯ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಊರಿಗೆ ಕೀರ್ತಿ ತಂದ ಹಾಗೂ ಶೇಕಡ 70% ಮೇಲ್ಪಟ್ಟು ಅಂಕ ಗಳಿಸಿದವರಿಗೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಪ್ರೋತ್ಸಾಹಕ್ಕಾಗಿ ಒಂದು ವೇದಿಕೆ ಕಲ್ಪಿಸಿ ಸಾಧಕರನ್ನು ಸನ್ಮಾನಿಸಿ , ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. 18 ವಿದ್ಯಾರ್ಥಿಗಳು ಪ್ರೋತ್ಸಾಹಧನದ ನಗದು ಪ್ರಯೋಜನವನ್ನು ಪಡೆದುಕೊಂಡರು.
ವಾರ್ಡ್ ಅಭಿವೃದ್ಧಿ ಸಮಿತಿಯ ಸಂಚಾಲಕರಾದ ಅಶ್ವಿನ್ ರೋಚ್ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಸಂಸ್ಕಾರಯುತ ಬದುಕು ನಡೆಸಬೇಕು ಹಾಗೂ ನಮ್ಮ ವಾರ್ಡಿನ ಪ್ರತಿಭೆಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಾನ್ವಿತರಾಗಿ ಮಹಾ ಸಾಧಕರಾಗಿ ರೂಪುಗೊಳ್ಳಲು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿಜಯ ಪೂಜಾರಿ ಮಾಯಾಡಿ, ಉಪ್ಪೂರು ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಸದಸ್ಯರಾದ ರಾಜಶ್ರೀ ಮಸ್ಕರೇನಸ್, ಯುವ ವಿಚಾರ ವೇದಿಕೆಯ ಮಾಜಿ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂದೀಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ
ವಾರ್ಡ್ ಅಭಿವೃದ್ಧಿ ಸಮಿತಿಯವರ ಈ ಪ್ರೋತ್ಸಾಹ, ಸಹಾಯ, ಸಹಕಾರ, ಮಕ್ಕಳಲ್ಲಿ ಹೊಸ ಹುರುಪು ಮೂಡಿಸಿ ಮುಂಬರುವ ಯುವ ಪೀಳಿಗೆಗೆ ದಾರಿದೀಪವಾಗಲಿದೆ ಎಂದು ಮತ್ತು ಇಂತಹಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆಗಳಲ್ಲಿ ಮಾತುಗಳನ್ನಾಡಿದರು.
ಕೊಳಲಗಿರಿ ಯುವ ವಿಚಾರ ವೇದಿಕೆಯಲ್ಲಿ ಜರುಗಿದ ಈ ಸಭಾ ಕಾರ್ಯಕ್ರಮದಲ್ಲಿ ಅವಿನಾಶ್ ಮುಟ್ಟಿಕಲ್ ನಿರೂಪಿಸಿ, ಶಕುಂತಲಾ ಅಮ್ಮುಂಜೆ ಸ್ವಾಗತಿಸಿ, ಶಾಂತಾ ಸೆಲ್ವರಾಜ್ ಧನ್ಯವಾದ ಸಲ್ಲಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now