ಕೊಳಲಗಿರಿಯಲ್ಲಿ ಭಾವೈಕ್ಯತೆಯ “ಗೊಬ್ಬುದ ಗಮ್ಮತ್ತು”KPL ಸೀಸನ್-5

ಕೊಳಲಗಿರಿಯಲ್ಲಿ ಭಾವೈಕ್ಯತೆಯ “ಗೊಬ್ಬುದ ಗಮ್ಮತ್ತು”KPL ಸೀಸನ್-5
0Shares

ಉಪ್ಪೂರು ಗ್ರಾಮದ ಒಂದನೇ ವಾರ್ಡನ ಕೊಳಲಗಿರಿ ಸೈಂಟ್ ಕ್ಸೇವಿಯರ್ ಶಾಲಾ ಮೈದಾನದಲ್ಲಿ ಅಶ್ವಿನ್ ರೋಚ್ ಸಂಚಾಲಕತ್ವದಲ್ಲಿ ಅಯೋಜಿಸಲಾದ ಗೊಬ್ಬುದ ಗಮ್ಮತ್ತು ಕಾರ್ಯಕ್ರಮದಲ್ಲಿ KPL ಸೀಸನ್-5 ಕ್ರಿಕೆಟ್ ಪಂದ್ಯಾಕೂಟ ಹಾಗೂ ಮಕ್ಕಳಿಗೆ ಮಹಿಳೆಯರಿಗೆ ಮಯೋಮಿತಿ ಮೇರೆಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಉದ್ಯಮಿಗಳು ಮಾಜಿ ಪಂಚಾಯತ್ ಸದಸ್ಯರಾದ ಎ. ಸದಾನಂದ ನಾಯಕ್‌ರವರು ಟ್ರೋಫಿ ಅನಾವರಣ ಮಾಡಿದರು. ಪ್ರಕಾಶ್ ಶೆಣೈ ಕೊಳಲಗಿರಿ ಮತ್ತು ಗಣೇಶ್ ಡಿ ಪೂಜಾರಿ ಕ್ರಿಕೆಟ್ ಮೈದಾನ ಉದ್ಘಾಟಿಸಿದರು. ಕೊಳಲಗಿರಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ರೆ,ಫಾ. ಜೋಸೆಫ್ ಮಚಾದೋ ಶುಭಾಶೀರ್ವಾದ ನೀಡಿದರು.

ಉಪ್ಪೂರು ಒಂದನೇ ವಾರ್ಡಿನ ಭಾವೈಕ್ಯತೆಯ 4 ತಂಡಗಳ ಮಾಲೀಕತ್ವದ IPL ಮಾದರಿಯ KPL ಕ್ರಿಕೆಟ್ ಪಂದ್ಯಾಟ ಹಾಗೂ ಮನೋರಂಜನಾ ಪಂದ್ಯಾಟ, ಬಾಂಧವ್ಯದ ಭಾವೈಕ್ಯತೆಗಾಗಿ ಯುವಜನರನ್ನು ಬಳಸಿಕೊಂಡು ಸಮಾಜ ಸೇವೆ, ಸ್ನೇಹಿತರು ದಾನಿಗಳ ನೆರವಿನಿಂದ ಅಶಕ್ತರ ನೆರವು, ಬಡತನದ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು ಹಸ್ತಾಂತರ, ವೈದ್ಯಕೀಯ ನೆರವು. ಈ ಎಲ್ಲಾ ಯೋಜನೆಗಳ ಮುಖಾಂತರ ಮಾದರಿ ವಾರ್ಡನ್ನು ರೂಪಿಸುತ್ತಿರುವುದಾಗಿ ಗೊಬ್ಬುದ ಗಮ್ಮತ್ತು ಕಾರ್ಯಕ್ರಮದ ಸಂಚಾಲಕರಾದ ಅಶ್ವಿನ್ ರೋಚ್

ರವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಾಜೀವ ಕುಲಾಲ್, ಅಮ್ಮುಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಭಾಸ್ಕರ ಡಿ ಶೆಟ್ಟಿ, ದೇಹದಾನಿ ರಮೇಶ್ ಕರ್ಕೇರ, ರತ್ನಾಕರ ಮೊಗವೀರ ಹಾವಂಜೆ, ಮಾಧವ ಪಾಣ, ಗಣೇಶ್ ಡಿ ಪೂಜಾರಿ, ಹಾವಂಜೆ ಪಂಚಾಯತ್ ಸಿಬ್ಬಂದಿ ಸದಾಶಿವ ಕುಮಾರ್ ಬಾಲಕೃಷ್ಣ ಶೆಟ್ಟಿ ನರ್ನಾಡು, ಸುಜಾತ ಟೀಚರ್, ಕ್ರಿಸ್ತಿನಾ ಕೊಳಲಗಿರಿ, ಡೋನ್ ಮೆಂಡೋನ್ಸಾ, ವಿಲಿಯಂ ಕೊಳಲಗಿರಿ, ಡಾಕ್ಟರ್ ಶಶಿಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ಬ್ರಹ್ಮಾವರ ದೀಪ್ತಿ ಎಂಟ‌ರ್ ಪ್ರೈಸ್ ಮಾಲೀಕರಾದ ಗಣೇಶ್ ನಾಯಕ್ ಶಿರಿಯಾರ ಕ್ರಿಕೆಟ್ ಎಲ್ಲಾ ಆಟಗಾರರಿಗೆ ಟೀಶರ್ಟ್ ಪ್ರಾಯೋಜಕತ್ವ ನೀಡಿದರು.

ಮಾಜಿ ಸಚಿವರು ಶ್ರೀ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮಕ್ಕೆ ಆಗಮಿಸಿ ವಾರ್ಡ್ ಜನರ ಒಗ್ಗೂಡುವಿಕೆಗೆ ಪ್ರಶಂಸಿಸಿ ಅಭಿನಂದಿಸಿದರು.

ಯುನೈಟೆಡ್ ಮುಟ್ಟಿಕಲ್ ಟೀಂ ಮಾಲೀಕರಾದ ಮೈಕಲ್ ಮಸ್ಕರೇನಸ್, ಫರಾರಿ ಲಯನ್ಸ್ ಟೀಂ ಮಾಲೀಕರಾದ ರೆಡ್ರಿನ್ ಮಸ್ಕರೇನಸ್, ಅಮ್ಮುಂಜೆ ವಾರಿಯರ್ಸ್ ಟೀಂ ಮಾಲೀಕರಾದ ಸಂದೀಪ್ ನಾಯಕ್, ರೋಯಲ್ ಕೊಳಲಗಿರಿ ಟೀಂ ಮಾಲೀಕರಾದ ಸಂದೀಪ್ ಶೆಟ್ಟಿ ರವರ ಈ 4 ತಂಡಗಳ ನೇರ ಹಣಾಹಣಿಯ ಲೀಗ್ ಪಂದ್ಯಾಟದಲ್ಲಿ ಸಂದೀಪ್ ನಾಯಕ್ ಮಾಲೀಕತ್ವದ ಅಮ್ಮುಂಜೆ ವಾರಿಯರ್ಸ್ ಟೀಂ ಜಯ ಗಳಿಸಿ ಪ್ರಥಮ ಬಹುಮಾನದ ಟ್ರೋಫಿ ವಿನ್ನರ್, ಹಾಗೂ ದ್ವಿತೀಯ ಬಹುಮಾನವನ್ನು ಸಂದೀಪ್ ಶೆಟ್ಟಿ ಮಾಲೀಕತ್ವದ ರೋಯಲ್ ಕೊಳಲಗಿರಿ ಟೀಂ ರನ್ನರ್ ಟ್ರೋಫಿ ಪಡೆಯಿತು. ಗೊಬ್ಬುದ ಗಮ್ಮತ್‌ ನಡೆದು ಬಂದ ದಾರಿಯನ್ನು ಅವಿನಾಶ್ ರಾವ್ ಸಭೆಗೆ ತಿಳಿಸಿದರು. ಪ್ರಶಾಂತ್ ದೇವಾಡಿಗ ಸ್ವಾಗತಿಸಿ, ವೈಭವ್ ಗಾಣಿಗ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕಾರ್ಯಕ್ರಮ ನಿರ್ವಹಣೆ ಯೋಗೀಶ್ ಕೊಳಲಗಿರಿ, ಯಶವಂತ್ ಧನ್ಯವಾದ ನೀಡಿದರು. ಕೆಪಿಎಲ್ ಮೈದಾನವು ಅವಿನಾಶ್ ರೋಜ್ ರವರ ಸುಂದರ ಕಲಾಕೃತಿಯಲ್ಲಿ ಸೊಬಗು ಕಾಣುವಂತಾಗಿ ಸುಂದರ್ ಪೂಜಾರಿ ಕೊಳಲಗಿರಿ ಅಜೇಯ್ ಡಿಸೋಜ, ಆಶಾ, ಶೋಭಾ ಯೋಗೀಶ್, ಇಲೆವೆನ್ ಸ್ಟಾರ್ ಸದಸ್ಯರು, ಯುವವಿಚಾರ ವೇದಿಕೆ ಸದಸ್ಯರು ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now