
ಉಡುಪಿ: ಈ ಬಾರಿ ಹವಾಮಾನ ಬದಲಾವಣೆ ರಾಜ್ಯದ ಜನರನ್ನು ಕಂಗೆಡಿಸಿದೆ.ಅದರಲ್ಲೂ ಮಳೆ ಕೊರತೆಯಿಂದಾಗಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದು, ಕರಾವಳಿ ಜನರು ವಿಪರೀತ ಬಿಸಿಗೆ ಕಂಗಲಾಗಿದ್ದಾರೆ.
ಈತನ್ಮಧ್ಯೆ ಕರಾವಳಿ ಜಿಲ್ಲೆಗಳ ಹವಾಮಾನ ಕೊಂಚ ಬದಲಾಗಿದ್ದು, ಸೋಮವಾರ ಬೆಳಿಗ್ಗಿನಿಂದ ದಟ್ಟ ಮೋಡ ಆವರಿಸಿಕೊಂಡಿದ್ದು, ಮಿಂಚು-ಗುಡುಗು ಸಹಿತ ಮಳೆಯಾಗುತ್ತಿದೆ. ಬಿಸಿಲ ಬೇಗೆಯಿದ್ದ ಬೇಸೆತ್ತಿದ್ದ ಜನರಿಗೆ ಮಳೆ ಸ್ವಲ್ಪ ಬಿಡುವು ನೀಡಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಈ ಮಳೆಯು ಮುಂದಿನ ಅಕ್ಟೋಬರ್ 9 ರವರೆಗೆ ಮುಂದುವರಿಯುವ ಸಾಧ್ಯತೆ ಇದೆ.
ಉಡುಪಿ-ಮಂಗಳೂರಿನಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now