
ಉಡುಪಿ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಕ್ರಮ ಎಸಗಿದರೂ, ಅವರನ್ನು ಬಂಧಿಸಲು ಸಾಧ್ಯವಾಗದಂತೆ ಕಾನೂನು ಬದಲಾವಣೆ ಮಾಡಿರುವುದು ಕೇಂದ್ರದ ಬಿಜೆಪಿ ಸರಕಾರದ ಲಜ್ಜೆಗೇಡಿ ವರ್ತನೆಯಾಗಿದೆ. ಇದೇನಾ ಬಿಜೆಪಿಯವರ ಅಚ್ಚೇ ದಿನ್? ಇನ್ನು ಮುಂದೆಯೂ ಇಂತಹ ಅಕ್ರಮಗಳನ್ನು ನಡೆಸುತ್ತಿದ್ದರೆ, ಜನ ಬಿಜೆಪಿಗರ ಮನೆಗೆ ನುಗ್ಗಿ ಹೊಡೆಯುವ ದಿನಗಳು ದೂರವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಕುಮಾರ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಎದುರು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಬಂಧನಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹುಂಡಿಕಳ್ಳರಿಂದ ಭಗವತ್ ಗೀತೆ ಪಾಠ ಕಲಿಯುವ ಅಗತ್ಯ ಈ ದೇಶದ ಜನರಿಗಿಲ್ಲ ಎಂದೂ ಅವರು ಹೇಳಿದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರಕಾರದ ದುರಾಡಳಿತಕ್ಕೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ಬಲಿಯಾಗುತ್ತಿರುವುದು ದುರದೃಷ್ಟಕರ ಎಂದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್ ಮಾತನಾಡಿ, ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯ ಬಳಿಕ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ ಅವರು ತಪ್ಪಿದಲ್ಲಿ ಚುನಾವಣಾ ಆಯೋಗದ ಅಗತ್ಯ ದಾಖಲೆಗಳು ಸುಟ್ಟು ಹೋಗುವ ಸಾಧ್ಯತೆಗಳಿವೆ ಎಂದರು.

ಜಿಲ್ಲಾ ಕಾಂಗ್ರೆಸ್ ನಾಯಕಿ ವೆರೊನಿಕಾ ಕರ್ನೇಲಿಯೊ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮತಗಳನ್ನು ಪಡೆಯಲು ಆಗದ ಬಿಜೆಪಿ ಜಾತಿ- ಧರ್ಮದ ಹೆಸರಿನಲ್ಲಿ, ಓಟ್ ಚೋರಿಯ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಪ್ರತಿಭಾಟನಾ ಸಭೆಯ ಬಳಿಕ ಕಾರ್ಯಕರ್ತರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಗುಪ್ತಾ ಪ್ರತಿಕೃತಿ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಪ್ರತಿಕೃತಿಗಳಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದರೂ ಗೇಟಿನ ಬಳಿಯಲ್ಲಿ ಪೊಲೀಸರು ತಡೆದರು.

ಈ ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ಹರೀಶ್ ಕಿಣಿ, ವಿಶ್ವಾಸ್ ಅಮೀನ್, ಸೌರಬ್ ಬಳ್ಳಾಲ್, ನವೀನ್ ಚಂದ್ರ ಶೆಟ್ಟಿ, ಕೃಷ್ಣ ಶೆಟ್ಟಿ,ಸುನಿಲ್ ಬಂಗೇರ, ಪ್ರಶಾಂತ್ ಜತ್ತನ್ನ, ನಾಗೇಶ್ ಕುಮಾರ್, ರಾಜು ಪೂಜಾರಿ, ಹಬೀಬ್ ಅಲಿ, ವೈ ಸುಕುಮಾರ್, ಪ್ರಖ್ಯಾತ್ ಶೆಟ್ಟಿ, ಶಿವಾಜಿ ಸುವರ್ಣ, ರಮೀಜ್ ಹುಸೇನ್, ನವೀನ್ ಸಾಲಿಯಾನ್, ಮಹಮದ್ ಹಮ್ಮದ್, ಕಿರಣ್ ಕುಮಾರ್, ಶರ್ಪುದ್ದೀನ್, ಅನಿಲ್ ಗೊನ್ಸಾಲ್ವಿಸ್, ಜೊಸ್ಸಿ ಪಿಂಟೊ, ರಿಯಾಜ್ ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now