
ಉಡುಪಿ : ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಉಪಾಧ್ಯಕ್ಷ, ಹಿರಿಯ ಲಯನ್ಸ್ ಮುಖಂಡ ಜೋರ್ಜ್ ಸಾಮ್ಯುಯೆಲ್ (79) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉದ್ಯಾವರ ಗುಡ್ಡೆಯಂಗಡಿಯ ನಿವಾಸಿಯಾಗಿದ್ದ ಇವರು, ಲಯನ್ಸ್ ಕ್ಲಬ್ ಉದ್ಯಾವರದ ಸಕ್ರಿಯ ಸದಸ್ಯರಾಗಿದ್ದು, ಲಯನ್ಸ್ ಜಿಲ್ಲೆ 317ಸಿ ಇದರ ಮಾಜಿ ಸಂಪುಟ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಪ್ರೊಟೆಸ್ಟೆಂಟ್ ಕ್ರೈಸ್ತ ಸಮುದಾಯದ ಮುಖಂಡರಾಗಿ ವಿವಿಧ ಸಾಮಾಜಿಕ ಹಾಗೂ ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಸೌಹಾರ್ದ ಸಮಿತಿಯ ಸದಸ್ಯರಾಗಿಯೂ ಹಲವು ವರ್ಷಗಳಿಂದ ಸೇವೆ ನೀಡಿದ್ದರು.
ಜೋರ್ಜ್ ಸಾಮ್ಯುಯೆಲ್ ಅವರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.
ಜೋರ್ಜ್ ಸಾಮ್ಯುಯೆಲ್ ಅವರ ನಿಧನಕ್ಕೆ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಲಯನ್ಸ್ ಕ್ಲಬ್ ಸದಸ್ಯರು, ಸೌಹಾರ್ದ ಸಮಿತಿ ಉದ್ಯಾವರದ ಸದಸ್ಯರು ಹಾಗೂ ಪ್ರೊಟೆಸ್ಟೆಂಟ್ ಕ್ರೈಸ್ತ ಸಮುದಾಯದ ಮುಖಂಡರು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now