ಶೆಫಿನ್ಸ್  ಅಕಾಡೆಮಿಯ ಮನೋಜ್ ಕಡಬ ಅವರಿಗೆ ವೃತ್ತಿ ಶಿಕ್ಷಣ ರಾಯಭಾರಿ ಎಂಬ ಗೌರವ*

ಶೆಫಿನ್ಸ್  ಅಕಾಡೆಮಿಯ ಮನೋಜ್ ಕಡಬ ಅವರಿಗೆ ವೃತ್ತಿ ಶಿಕ್ಷಣ ರಾಯಭಾರಿ ಎಂಬ ಗೌರವ*
0Shares

ಉಡುಪಿ, ಮೇ 27: ಉಡುಪಿಯ ಶೆಫಿನ್ಸ್‌ ಸಂಸ್ಥೆಯ ಮುಖ್ಯಸ್ಥ, ಖ್ಯಾತ ವೃತ್ತಿ ಶಿಕ್ಷಣ ತರಬೇತುದಾರ ಮನೋಜ್‌ ಕಡಬ ಅವರಿಗೆ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ʼಕೆರಿಯರ್‌ ಗೈಡೆನ್ಸ್‌ ಅಂಬಾಸಡರ್‌ʼ ಗೌರವ ನೀಡಿ ಪುರಸ್ಕರಿಸಲಾಯಿತು. ಇವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌ ಯ ಕೆರಿಯರ್‌ ಗೈಡೆನ್ಸ್‌ ವಿಭಾಗದಲ್ಲಿ ನೀಡಿದ ತರಬೇತಿಗಳು ಹಾಗೂ ಕೆರಿಯರ್‌ ಸೆಲ್‌ ರೂಪಿಸುವಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಪ್ರಾಂಶುಪಾಲರ ವಿಶೇಷ ಕಾಳಜಿಯಂತೆ ಈ ಗೌರವವನ್ನು ಪ್ರಧಾನ ಮಾಡಲಾಯಿತು.

ಮಣಿಪಾಲದ ಎಂಐಟಿ ಗ್ರಂಥಾಲಯ ಸಭಾ ಭವನದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ ಶಾಲಾ ಶಿಕ್ಷಣ ಇಲಾಖೆ, ಮಣಿಪಾಲದ ಮಾಹೆ, ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಹಾಗೂ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಮತ್ತು 2025-26ನೇ ಸಾಲಿನಲ್ಲಿ ಶೇಕಡಾ 100 ಫಲಿತಾಂಶ ಪಡೆದ ಜಿಲ್ಲೆಯ ಪ್ರೌಢ ಶಾಲೆಗಳ ಅಭಿನಂದನಾ ಸಭೆಯ ಕಾರ್ಯಕ್ರಮದಲ್ಲಿ ಈ ಗೌರವವನ್ನು ಮುಖ್ಯ ಅತಿಥಿ ತುಮಕೂರಿನ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರ ಅಮೃತ ಹಸ್ತದಿಂದ ಪ್ರದಾನ ಮಾಡಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರತೀಕ್‌ ಬಾಯಲ್‌ ಐಎಎಸ್‌ ಇವರು ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದರು. ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ವೃತ್ತಿ ಶಿಕ್ಷಣ ತರಬೇತಿಯ ವ್ಯವಸ್ಥೆ ಮಾಡಿದಲ್ಲಿ ಮಕ್ಕಳಿಗೆ ಅವರ ಮುಂದಿರುವ ಆಯ್ಕೆಗಳ ಬಗ್ಗೆ ಸ್ಪಷ್ಟ ಅರಿವು ಮೂಡುತ್ತದೆ ಹಾಗೂ ಇದರಿಂದಾಗಿ ಸಹಜವಾಗಿ ಅವರು ಉತ್ತಮ ಸಾಧನೆಗೆ ಪ್ರೇರಣೆಯನ್ನು ಪಡೆಯುತ್ತಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ (ಎಡದಿಂದ ಬಲಕ್ಕೆ) ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಲೋಕೇಶ, ಡಯಟ್‌ ಪ್ರಾಂಶುಪಾಲ ಡಾ. ಅಶೋಕ ಕಾಮತ್‌, ಶ್ರೀ ಪ್ರತೀಕ್‌ ಬಾಯಲ್‌ ಐಎಎಸ್‌, ಮಾಹೆ ಕುಲಪತಿ ಡಾ. ಎಚ್‌ ಎಸ್‌ ಬಲ್ಲಾಳ್‌, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಆಡಳಿತಾಧಿಕಾರಿ ಡಾ. ಶ್ರೀಧರ ಆರ್‌. ಪೈ, ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಶ್ರೀ ಕಿರಣ್‌ ಹೆಗ್ಡೆ ಉಪಸ್ಥಿತರಿದ್ದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now