ಡಿ.20 ಉಡುಪಿಯಲ್ಲಿ ವಿಶ್ವ ದೇವಾಡಿಗ ಮಹಾಮಂಡಳದ ಮಹಾಧಿವೇಶನ

ಡಿ.20 ಉಡುಪಿಯಲ್ಲಿ ವಿಶ್ವ ದೇವಾಡಿಗ ಮಹಾಮಂಡಳದ ಮಹಾಧಿವೇಶನ

0Shares

ಮುಂಬಯಿ, ಎ.21: ನಮ್ಮೊಳಗಿನ ಸಾಂಘಿಕತೆ ಬಲಗೊಂಡಾಗ ಮಾತ್ರ ಸ್ವಸಮುದಾಯವು ಶೈಕ್ಷಣಿಕ, ಸಾಮಾಜಿಕ ಮತ್ತು ಆಥಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಅದಕ್ಕಾಗಿ ಸಂಘಟನೆಯ ಶಕ್ತಿ ಪ್ರದರ್ಶನವಾಗದೆ, ಸಾಮರ್ಥ್ಯವಾಗಿ ಬೆಳೆದಾಗ ಸಂಘಟನೆಯು ಸರ್ಕಾರದ ಗಮನ ಸೆಳೆಯಲು ಮತ್ತು ಸಮುದಾಯಕ್ಕೆ ಸಿಗಬೇಕಾದ ಹಕ್ಕು ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಬಲ ಅಸ್ತ್ರವಾಗಬಲ್ಲದು. ಸ್ವಸಮುದಾಯ ಸದೃಢವಾದಾಗಲೇ ಸಮಾಜದ ಉನ್ನತೀಕರಣ ಸುಲಭಸಾಧ್ಯವಾಗುವುದು. ಇದಕ್ಕಾಗಿ ದೇವಾಡಿಗರ ಐಕ್ಯತೆ, ಸಂಘಟನಾಶೀಲತೆ ಅಗತ್ಯವಾಗಿಸಿ ದೇವಾಡಿಗ ಮಹಾಧಿವೇಶನ ಆಯೋಜಿಸಲಾಗಿದೆ ಎಂದು ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ತಿಳಿಸಿದರು.

ವಿಶ್ವ ದೇವಾಡಿಗ ಮಹಾಮಂಡಳ ೨೦೨೬ರ ಡಿ.೨೦ರಂದು ಉಡುಪಿ ಅಲ್ಲಿನ ದೇವಾಡಿಗ ಸಂಘದ ಶ್ರೀ ಏಕನಾಥೇಶ್ವರಿ ಸಭಾಭವನದಲ್ಲಿ ಕಳೆದ ಭಾನುವಾರ (ಎ.19) ದೇವಾಡಿಗ ಮಹಾಧಿವೇಶನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಉಡುಪಿ ಅಲ್ಲಿನ ಚಿತ್ಪಾಡಿಯಲ್ಲಿ ಆಯೋಜಿಸಲುದ್ದೇಶಿಸಿದ ಮಹಾಧಿವೇಶನದ ಮುಖ್ಯ ಉದ್ದೇಶಗಳ ಬಗ್ಗೆ ವಿಸ್ತೃತ ಚರ್ಚೆಗೆ ಸಮರ್ಪಕವಾಗಿ ಉತ್ತರಿಸಿ ಧರ್ಮಪಾಲ ದೇವಾಡಿಗ ಮಾತನಾಡಿದರು.

ಮಹಾಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ಪ್ರಸ್ತಾವನೆಗೈದು ಅಧಿವೇಶನಕ್ಕೆ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸುವುದರೊಂದಿಗೆ ನಮ್ಮ ಅಹವಾಲುಗಳನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.

ಹಿರಿಯ ಸದಸ್ಯ ಕೆ.ಅಣ್ಣಯ್ಯ ಶೇರಿಗಾರ ಅವರು ಮಹಾಧಿವೇಶನದಲ್ಲಿ ಮಂಡಿಸಲ್ಪಡಬೇಕಾದಂತಹ ಮುಖ್ಯ ವಿಷಯಗಳ ಬಗ್ಗೆ ಅಭಿಪ್ರಾಯ ಮಂಡಿಸಿ ದೇವಾಡಿಗ ಅಭಿವೃದ್ಧಿ ನಿಗಮಕ್ಕಾಗಿ ಸಲ್ಲಿಸಿದಂತಹ ಮನವಿಯನ್ನು ಮರು ಒತ್ತಾಯದೊಂದಿಗೆ ಆಗ್ರಹಿಸಬೇಕಾದಂತಹ ಅಗತ್ಯತೆಯನ್ನು ಒತ್ತಿಹೇಳಿದರು.

ಮಣಿಪಾಲಾದ ಮಾಹೆಯಲ್ಲಿನ. ಪ್ರಾಧ್ಯಾಪಕರಾದ ಡಾ? ಪ್ರವೀಣ್ ಕುಮಾರ್ ದೇವಾಡಿಗ ಅವರು ಮಾತನಾಡಿ ದೇವಾಡಿಗ ಸಮಾಜದ ಗೌರವಾನ್ವಿತ ಮತ್ತು ವಿವಿಧ ಕ್ಷೇತ್ರದಲ್ಲಿನ ಪ್ರಸಿದ್ಧರನ್ನು ಗುರುತಿಸಿ ಮಹಾಧಿವೇಶನಕ್ಕೆ ಆಮಂತ್ರಿಸುವ ಕೆಲಸ ಆಗಬೇಕು ಎಂದರು.

ಉಡುಪಿ ದೇವಾಡಿಗ ಸೇವಾ ಸಂಘದ ಅಧ್ಯಕ್ಷ ರತ್ನಾಕರ್ ಜಿ.ಎಸ್ ಮಾತನಾಡಿ ಅಧಿವೇಶನದ ಯಶಸ್ಸಿಗಾಗಿ ನಮ್ಮ ಸಂಘ ಪ್ರಯತ್ನಿಸುವುದಾಗಿ ಹೇಳಿ ಈಗಾಗಲೇ ಉಡುಪಿ ಚಿತ್ಪಾಡಿಯ ಎರಡು ಮೈದಾನಗಳನ್ನು ಕಾಯ್ದಿರಿಸಿರುವುದಾಗಿ ಸಭೆಗೆ ತಿಳಿಸಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಹಾಗೂ ರಾಜಕೀಯ ಧುರೀಣ ಆಲೂರು ರಘುರಾಮ ದೇವಾಡಿಗ ಮಾತನಾಡಿ ದೇವಾಡಿಗ ಸ್ಮರಣ ಸಂಚಿಕೆಯ ಅವಶ್ಯಕತೆಯನ್ನು ತಿಳಿ ಹೇಳುವುದರೊಂದಿಗೆ ಮುಂದಿನ ಸಭೆ ಬೈಂದೂರಿನಲ್ಲಿ ನಡೆಸಲು ಪೂರ್ಣ ವ್ಯವಸ್ಥೆಯ ಭರವಸೆಯನ್ನು ನೀಡಿದರು.

ನಾದಶ್ರೀ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶ್ರೀಧರ ದೇವಾಡಿಗ ಉಡುಪಿ, ರಾಜಕಾರಣಿಗಳಾದ ವಿಜಯ ಕೊಡವೂರು, ಅಡ್ವೋಕೇಟ್ ರವೀಂದ್ರ ಮೊಯಿಲಿ ಕಾರ್ಕಳ ಮತ್ತು ಶಂಕರ ಅಂಕದಕಟ್ಟೆ ಕೋಟೇಶ್ವರ, ಶ್ರೀನಿವಾಸ ದೇವಾಡಿಗ ಬೆಂಗಳೂರು, ಏಕನಾಥೇಶ್ವರಿ ದೇವಸ್ಥಾ ಟ್ರಸ್ಟ್‌ನ ಸ್ಥಾಪಕ ವಿಶ್ವಸ್ಥ ಜನಾರ್ದನ ದೇವಾಡಿಗ ಬಾರ್ಕೂರು, ಏಕನಾಥೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಕಾರ್ಯಾಧ್ಯಕ್ಷ ಜನಾರ್ಧನ ಪಡು ಪಣಂಬೂರು, ಮುಲ್ಕಿ ದೇವಾಡಿಗ ಸಂಘದ ಅಧ್ಯಕ್ಷ ಸಂಜೀವ ದೇವಾಡಿಗ ಮುಲ್ಕಿ, ಹಿರಿಯ ಸದಸ್ಯರಾದ ಬಾಲಚಂದ್ರ ದೇವಾಡಿಗ ಮಂಗಳೂರು, ಉಡುಪಿ ದೇವಾಡಿಗ ಸಂಘದ ಮಾಜಿ ಕಾರ್ಯದರ್ಶಿ ಸುದರ್ಶನ ಶೇರಿಗಾರ್ ಮತ್ತು ಹರೀಶ ಸೇರಿಗಾರ್ ಉಡುಪಿ, ಮೂಡಬಿದ್ರಿ ದೇವಾಡಿಗ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ ಮೂಡಬಿದ್ರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಮಾವತಿ ಗುಜರಾನ್ ಮುಂಬಯಿ, ದೇವಾಡಿಗ ನವೋದಯ ಸಂಘ ಬೆಂಗಳೂರು ಇದರ ಗೌರವಾಧ್ಯಕ್ಷ ಹರಿ ಟಿ.ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಅಧ್ಯಕ್ಷ ಅಶೋಕ ಮೊಯಿಲಿ, ಉಡುಪಿ ದೇವಾಡಿಗ ಸೇವಾ ಸಂಘದ ಕಾರ್ಯದರ್ಶಿ ಕಾರ್ತಿಕ್ ದೇವಾಡಿಗ ಅಧಿವೇಶನದ ಬಗೆಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಮುಂಬಯಿ, ಮಂಗಳೂರು, ಬೆಂಗಳೂರು, ಉಡುಪಿ, ಮೂಡಬಿದ್ರಿ, ಪಾವಂಜೆ ಹಳೆಯಂಗಡಿ, ಸುರತ್ಕಲ್, ಕುಂದಾಪುರ, ಬಾರ್ಕೂರು, ಕೋಟೇಶ್ವರ, ಹಿರಿಯಡ್ಕ, ಎಲ್ಲೂರು, ಉದ್ಯಾವರ, ಕಟಪಾಡಿ ಮತ್ತಿತರ ಸಂಸ್ಥೆಗಳ ಪ್ರತಿನಿಧಿಗಳು, ಸಮಾಜದ ಹಿರಿಯ ಸದಸ್ಯರುಗಳು ಉಪಸ್ಥಿತರಿದ್ದು ಪ್ರತಿನಿಧಿಗಳು ಮಹಾಧಿವೇಶನಕ್ಕೆ ಸಂಪೂರ್ಣ ಸಹಕಾರದ ಭರವಸೆಯಿತ್ತರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now